T.S. Nagabharana: 'ಮಂಗಳೂರು ಮಾದರಿ' ಕನ್ನಡ ಕಲಿಕೆಗೆ ಕ್ರಮ ಎಂದ ನಾಗಾಭರಣ

"ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ 'ಕನ್ನಡವನ್ನು ಕಾಣಿಸಿ, ಕನ್ನಡವನ್ನು ಕೇಳಿಸಿ' ಅಭಿಯಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ" ಅಂತ ನಾಗಾಭರಣ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ

  • Share this:
ದಕ್ಷಿಣ ಕನ್ನಡ: ಮಂಗಳೂರಿನ (Mangaluru) ಜನರ ಕನ್ನಡದ (Kannada) ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ (T.S. Nagabharana) ಮೆಚ್ಚುಗೆಯ ಮಾತನ್ನಾಡಿದ್ದಾರೆ. ಮಂಗಳೂರು ಕನ್ನಡ ಭಾಷೆ (Language) ಶುದ್ಧ, ವ್ಯಾಕರಣ (Grammar) ಬದ್ಧವಾಗಿದೆ ಎಂದಿದ್ದಾರೆ. ಇಲ್ಲಿನ ಸರ್ಕಾರಿ ಅಧಿಕಾರಿಗಳು (Government Officers) ಕೂಡ ಕನ್ನಡ ಪ್ರೀತಿ ಉಳ್ಳವರಾಗಿದ್ದಾರೆ. ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಗೊಳಿಸಿದ್ದಾರೆ. ಹೀಗಾಗಿ ಇದನ್ನೇ ಮಾದರಿಯಾಗಿ (Model) ಇಟ್ಟುಕೊಂಡು ರಾಜ್ಯದ ಇತರ ಜಿಲ್ಲೆಗಳಲ್ಲೂ ಕನ್ನಡ ಭಾಷಾ ಕಲಿಕೆ ಮತ್ತು ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ನಾಗಾಭರಣ ಹೇಳಿದ್ದಾರೆ.

ಕನ್ನಡ ಪಸರಿಸುವಂತೆ ಮಾಡುವುದು ಕಷ್ಟವೇನಲ್ಲ

ಮಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಡಳಿತ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ‘ಕನ್ನಡ ಕಾಣಿಸಿ-ಕನ್ನಡ ಕೇಳಿಸಿ’ ಧ್ಯೇಯ ವಾಕ್ಯದಡಿ ಕನ್ನಡ ಪಸರಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬ್ಯಾಂಕ್‌, ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ದಾಖಲೆ, ವಹಿವಾಟು ಪುಸ್ತಕ, ಗ್ರಾಹಕರ ಚೀಟಿಯಲ್ಲಿ ಕನ್ನಡ ಕಡ್ಡಾಯ ಇರಲೇಬೇಕು. ಕನ್ನಡ ಅನುಷ್ಠಾನದ ಹೊಣೆ ಆಯಾ ಜಿಲ್ಲಾಡಳಿತದ್ದಾಗಿದ್ದು, ಆಡಳಿತ ವರ್ಗ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಕನ್ನಡ ಬಳಕೆ ಕಷ್ಟವೇನಲ್ಲ ಎಂದರು.

ಎಂಆರ್‌ಪಿಎಲ್‌ನಲ್ಲಿ ಕನ್ನಡ ಅನುಷ್ಠಾನಕ್ಕೆ ಸೂಚನೆ

ಎಂಆರ್​​ಪಿಎಲ್ ನಲ್ಲಿ ಕನ್ನಡ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಜತೆಗೆ ತ್ರಿಭಾಷಾ ಸೂತ್ರದಂತೆ ಕನ್ನಡ ನಾಮಫಲಕ ಅಳವಡಿಕೆಗೆ ಸಂಸ್ಥೆಯ ಎಂಡಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕನ್ನಡ ಕಲಿಯಬೇಕು, ವ್ಯವಹಾರವನ್ನು ಕನ್ನಡದಲ್ಲಿಯೇ ನಡೆಸಬೇಕು. ಚೆಕ್ ಪುಸ್ತಕ, ಚಲನ್ ಕನ್ನಡದಲ್ಲಿ ಮುದ್ರಿಸಬೇಕು ಎಂದು ಸೂಚಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ 'ಕನ್ನಡವನ್ನು ಕಾಣಿಸಿ, ಕನ್ನಡವನ್ನು ಕೇಳಿಸಿ' ಅಭಿಯಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅನುಷ್ಠಾನ ಯಶಸ್ಸು ಪಡೆದಿದೆ ಎಂದರು.

ಇದನ್ನೂ ಓದಿ: Ananth Kumar Hegde: ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಅನಂತ್ ಕುಮಾರ್ ಹೆಗಡೆ? ಶುರುವಾಗಿದೆ ಹೊಸ ಚರ್ಚೆ!

ಬ್ಯಾಂಕ್‌ಗಳಲ್ಲಿ ಕನ್ನಡ ಬಳಸಲೇ ಬೇಕು

ಕರ್ನಾಟಕದಲ್ಲಿ ಕನ್ನಡವನ್ನು ಹುಡುಕಾಡುವ ಪರಿಸ್ಥಿತಿ ಎದುರಾಗಬಾರದು. ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಅರ್ಜಿ, ಚಲನ್, ನಾಮಫಲಕಗಳು, ಜಾಹೀರಾತುಗಳು, ನಮೂನೆ, ಚೆಕ್, ರಸೀದಿ ಸೇರಿದಂತೆ ಇತ್ಯಾದಿಗಳು ಕನ್ನಡದಲ್ಲೇ ಮುದ್ರಿತಗೊಂಡು ಗ್ರಾಹಕರ ಕೈಸೇರಬೇಕು. ಹಿಂದಿ, ಇಂಗ್ಲಿಷ್‌ ಭಾಷೆಗೆ ನೀಡುವ ಸ್ಥಾನಮಾನ ಕನ್ನಡ ಭಾಷೆಗೂ ದೊರಕಬೇಕು ಎಂದರು.

ಕನ್ನಡ ಕಲಿಯದವರ ವಿರುದ್ಧ ಕ್ರಮ

ಹೊರ ರಾಜ್ಯಗಳಿಂದ ಬರುವ ಉದ್ಯೋಗಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಅದಕ್ಕೆ ಅನುಕೂಲವಾಗುವಂತಹ ತರಬೇತಿಗಳನ್ನು ಆಯೋಜಿಸಬೇಕು. ಒಂದು ವೇಳೆ ಕನ್ನಡವನ್ನು ಕಲಿಯದೇ, ಕನ್ನಡವನ್ನು ಬಳಸದೇ ಹೋದಲ್ಲಿ ಅಂತಹ ಉದ್ಯೋಗಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಎಂಆರ್‌ಪಿಎಲ್‌ನಲ್ಲಿ ಕನ್ನಡಗರಿಗೆ ಉದ್ಯೋಗ

ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸುವ ಸಂಬಂಧ ಹಾಗೂ ಎಂಆರ್‌ಪಿಎಲ್‌ನಂತಹ ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವಂತೆ ನಿಯಮ ಜಾರಿಗೆ ತರಬೇಕಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ನಾಗಾಭರಣ ಇದೇ ಸಂದರ್ಭದಲ್ಲಿ ಹೇಳಿದರು.

ತುಳು ಭಾಷೆ ಉಳಿಸಿ ಬೆಳೆಸಿ

ರಾಜ್ಯ ಭಾಷೆ ಕನ್ನಡದ ಜತೆ ಸಹೋದರ ಭಾಷೆಯಾಗಿ ತುಳುವನ್ನು ಉಳಿಸಿ ಬೆಳೆಸಲು ಸಮುದಾಯಗಳು ಮುಂದಾಗಬೇಕು. ಅದಕ್ಕಾಗಿಯೇ ತುಳು ಅಕಾಡೆಮಿ ಇದೆ. ಸ್ಥಳೀಯವಾಗಿ ತುಳು ಭಾಷೆಯನ್ನು ಆಡಳಿತದಲ್ಲಿ ಬಳಸಲು ಯಾವುದೇ ತೊಡಕಿಲ್ಲ ಅಂತ ನಾಗಾಭರಣ ಹೇಳಿದ್ದಾರೆ.

ಇದನ್ನೂ ಓದಿ: C.T.Ravi: ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್​​​ಖೈದಾ ಮಧ್ಯೆ ಹೋಲಿಕೆ ಮಾಡಿಕೊಳ್ಳಲಿ: ಸಿ.ಟಿ.ರವಿ

 ವಿವಿಧೆಡೆ ಪರಿಶೀಲನೆ

ಕಳೆದ ಎರಡು ದಿನಗಳಿಂದ ಜಿಲ್ಲೆಯ ವಿವಿಧ ಕೈಗಾರಿಕೆಗಳು, ಸಂಸ್ಥೆಗಳಿಗೆ ಭೇಟಿ ಕೊಟ್ಟು ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಲೋಪಗಳಿದ್ದು, ಈ ಬಗ್ಗೆ ಸಂಬಂಧಿತ ಸಂಸ್ಥೆಗಳ ಅಧಿಕಾರಿಗಳು ತಪ್ಪು ಒಪ್ಪಿಕೊಂಡು, ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದೆ ಜಿಲ್ಲಾಡಳಿತ ಇದರ ಬಗ್ಗೆ ನಿಗಾ ವಹಿಸಲಿದೆ ಎಂದು ಎಂದು ಟಿ.ಎಸ್. ನಾಗಾಭರಣ ಹೇಳಿದರು.
Published by:Annappa Achari
First published: