Drugs ದಾಸಳಾಗಿರುವ ಮಗಳನ್ನು ರಕ್ಷಿಸಿ.. ಹಿಂದೂ ಸಂಘಟನೆ ಮೊರೆ ಹೋದ ನೊಂದ ತಾಯಿ!

ಯುವತಿಯು ವ್ಯಕ್ತಿಯೊಬ್ಬನ ಸಹವಾಸದಿಂದ ಡ್ರಗ್ಸ್‌ನ ದಾಸಳಾಗಿದ್ದಾಳೆ. ಹೀಗಾಗಿ ಯುವತಿಯ ತಾಯಿ ಮಂಗಳೂರಿನ ಬಿಜೈ ನಿವಾಸಿ ಮಗಳನ್ನು ರಕ್ಷಿಸಿ ಎಂದು VHP ಸಂಘಟನೆ ಹಾಗೂ ಮಂಗಳೂರು ಪೊಲೀಸರ ಮೊರೆ ಹೋಗಿದ್ದಾರೆ.

ಆರೋಪಿ ಸಿದ್ದಿಕಿ

ಆರೋಪಿ ಸಿದ್ದಿಕಿ

  • Share this:
ಮಂಗಳೂರು:  ಡ್ರಗ್ಸ್ ದಂಧೆಯಿಂದ (Drug Mafia) ಮಗಳನ್ನು (Daughter) ರಕ್ಷಿಸಿ ಎಂದು ಕ್ರೈಸ್ಥ ಮಹಿಳೆಯೊಬ್ಬರು (Mother) ವಿಶ್ವ ಹಿಂದೂ ಪರಿಷತ್ ಸಂಘಟನೆಯ (Hindu organization) ಮೊರೆ ಹೋಗಿದ್ದಾರೆ. ವ್ಯಕ್ತಿಯೊಬ್ಬನ ಸಹವಾಸದಿಂದ ಡ್ರಗ್ಸ್ ದಾಸಳಾಗಿರುವ ಮಗಳ ವರ್ತನೆಯಿಂದ ನೊಂದು ಪೊಲೀಸರಿಗೂ (Police) ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡ್ರಗ್ ಪೆಡ್ಲರ್‌ನ ಹೆಡೆಮುರಿ ಕಟ್ಟಿದ್ದಾರೆ. ಮಾದಕ ವಸ್ತುವಿನ ಚಟಕ್ಕೆ ಒಮ್ಮೆ ಬಿದ್ರೆ ಸಾಕು ಜೀವನವೇ ಬರ್ಬಾದ್ ಆಗಿ ಹೋಗುತ್ತೆ.  ಯುವತಿಯು ವ್ಯಕ್ತಿಯೊಬ್ಬನ ಸಹವಾಸ ದೋಷದಿಂದ ಡ್ರಗ್ಸ್‌ನ ದಾಸಳಾಗಿದ್ದಾಳೆ. ಹೀಗಾಗಿ ಯುವತಿಯ ತಾಯಿ ಮಂಗಳೂರಿನ ಬಿಜೈ ನಿವಾಸಿ ಮಗಳನ್ನು ರಕ್ಷಿಸಿ ಎಂದು VHP ಸಂಘಟನೆ ಹಾಗೂ ಮಂಗಳೂರು ಪೊಲೀಸರ ಮೊರೆ ಹೋಗಿದ್ದಾರೆ.

ಸಿದ್ದಿಕಿ ವಿರುದ್ಧ ತಾಯಿ ದೂರು

27 ವಯಸ್ಸಿನ ಯುವತಿಗೆ ನಾಲ್ಕು ವರ್ಷದ ಹಿಂದೆ ಫೇಸ್‌ಬುಕ್ ಮೂಲಕ ಸುರತ್ಕಲ್ ಮೂಲದ ಶರೀಫ್ ಸಿದ್ದಿಕಿ ಎಂಬಾತನ ಪರಿಚಯವಾಗಿತ್ತು. ಆತನ ಜೊತೆ ಸುಲುಗೆಯಿಂದ ಇದ್ದ ಯುವತಿಗೆ ಡ್ರಗ್ಸ್ ಚಟ ಹತ್ತಿಸಿದ್ದಾನೆ. ಬಳಿಕ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಲೈಂಗಿಕ ದೌರ್ಜನ್ಯವನ್ನು ನೀಡುತ್ತಾ ಬಂದಿದ್ದಾನೆ. ಹೀಗಾಗಿ ಆರೋಪಿ ಮಹಮ್ಮದ್ ಸಿದ್ದಿಕಿ ವಿರುದ್ದ ಯುವತಿಯ ತಾಯಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್‌ರನ್ನು ಸಹ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Bengaluru Airport: ಗುಪ್ತಾಂಗದೊಳಗೆ ಬರೋಬ್ಬರಿ ಅರ್ಧ ಕೆಜಿ ಚಿನ್ನ ಬಚ್ಚಿಟ್ಟಿಕೊಂಡು ಶಾಕ್ ಕೊಟ್ಟ ಮಹಿಳೆ!

ಯುವತಿಗೆ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ಚಿಕಿತ್ಸೆ

ಯುವತಿಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಸುರತ್ಕಲ್ ಠಾಣಾ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 354 ಮತ್ತು 506 ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಮಹಮ್ಮದ್ ಶರೀಫ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ಸಂದರ್ಭ ಶರೀಫ್ ಸಿದ್ಧಿಕಿಗೆ ಈಗಾಗಲೇ ಮೂರು ಮದುವೆಯಾಗಿದೆ ಎಂದು ಗೊತ್ತಾಗಿದೆ. ಇದರ ಜೊತೆ ಗ್ರೇಸಿ ಪಿಂಟೋ ಮಗಳ ಜೊತೆಯೂ ಸುಮಾರು ವರ್ಷಗಳ ಸಂಬಂಧವಿರುವುದು ತಿಳಿದು ಬಂದಿದೆ. ಆರೋಪಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆಯೇ ಎಂ.ಡಿ.ಎಂ.ಎ ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಎರಡು ಪ್ರಕರಣ ಇದೆ. ಸದ್ಯ ಯುವತಿಗೆ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚಿಕಿತ್ಸೆ ಬಳಿಕ ಯುವತಿಯ ಹೇಳಿಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ.

ಡ್ರಗ್ಸ್​ ಚಟಕ್ಕೆ ಬಿದ್ದು ಆತ್ಮಹತ್ಯೆಗೆ ಯತ್ನ

ಇನ್ನು ಈ ಸಿದ್ದಿಕಿ ಜೊತೆ ಆತನ ಸಹಚರರಾದ ಸರ್ಫ್ರಾಜ್ ಮತ್ತಿತರರು ಬಿಜೈನ ಯುವತಿಯ ಮನೆಗೆ ಆಗಮಿಸಿ ಆಕೆಯನ್ನ ಕರೆದುಕೊಂಡು ಹೋಗ್ತಿದ್ದರಂತೆ.  ಈ ವೇಳೆ ತಡೆಯಲು ಬಂದ ತಾಯಿಗೆ ಬೆದರಿಕೆ ಹಾಕ್ತಿದ್ದರು. ಬಳಿಕ ಯಾವುದೋ ನಿರ್ಜನ ಜಾಗದಲ್ಲಿ ಡ್ರಗ್ ಕೊಟ್ಟು ದೈಹಿಕವಾಗಿ ಬಳಸಿ ಮನೆಗೆ ತಂದು ಬಿಡ್ತಿದ್ದರಂತೆ. ಹೀಗೆ ಕಳೆದ ಮೂರು ವರ್ಷಗಳಿಂದ ಆಕೆ ಡ್ರಗ್ ದಾಸಳಾಗಿದ್ದು, ತಾಯಿ ಮಾತನ್ನೂ ಕೇಳುತ್ತಿಲ್ಲ. ಸದ್ಯ ವಿಎಚ್ ಪಿ ಪ್ರಮುಖರು ಆಕೆಯ ತಾಯಿಯ ನೆರವಿಗೆ ಬಂದಿದ್ದು, ಪತ್ರ ಬರೆದು ಮಗಳ ರಕ್ಷಣೆಗೆ ತಾಯಿ ನಮಗೆ ಮನವಿ ಮಾಡಿದ್ರು. ಮಗಳು ಡ್ರಗ್ ದಾಸಳಾಗಿ ಲೈಂಗಿಕವಾಗಿ ಅವಳನ್ನ ಬಳಸಲಾಗಿದೆ. ಆಕೆ ತಂದೆ ಸತ್ತಾಗಲೂ ಅವಳು ಬಂದಿಲ್ಲ, ಅಷ್ಟರ ಮಟ್ಟಿಗೆ ಸಿದ್ದಿಕಿ ವಶದಲ್ಲಿದ್ದಳು. ಅನೇಕ ಬಾರಿ ಡ್ರಗ್ಸ್​ ಚಟಕ್ಕೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದೊಂದು ದೊಡ್ಡ ಡ್ರಗ್ ಜಾಲ, ಇದರ ಹಿಂದೆ ಅನೇಕರು ಇರೋ ಸಾಧ್ಯತೆ ಇದೆ. ಪೊಲೀಸರು ಈ ಬಗ್ಗೆ ತನಿಖೆ ಮಾಡಿ ಜಾಲವನ್ನ ಹೊರಗೆ ತರಲಿ ಅಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ: New Yearಗಾಗಿ ಬೆಂಗಳೂರಲ್ಲಿ Drugs ದಾಸ್ತಾನು: 5 ಲೀಟರ್ ‘ಗಾಂಜಾ ಎಣ್ಣೆ’ ವಶ..!

ಯುವತಿಯ ತಂದೆ ಎರಡು ವರ್ಷಗಳ ಹಿಂದೆ ಮಗಳ ಈ ಸ್ಥಿತಿಯಿಂದ ಕೊರಗಿ ಅನಾರೋಗ್ಯಕ್ಕೆ ಒಳಗಾಗಿ ಮೃತಹೊಂದಿದ್ದಾರೆ. ಮನೆಯಲ್ಲಿ ಯುವತಿಯ ತಾಯಿ ಮಾತ್ರ ಇದ್ದು ಆರೋಪಿ ತಡರಾತ್ರಿ ಬಂದು ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಇದನ್ನು ಪ್ರಶ್ನಿಸಿದ್ರೆ ಯುವತಿಯ ತಾಯಿಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Published by:Kavya V
First published: