• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mangaluru Airport: ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಳ

Mangaluru Airport: ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಳ

ಮಂಗಳೂರು ಏರ್​ಪೋರ್ಟ್

ಮಂಗಳೂರು ಏರ್​ಪೋರ್ಟ್

ಈ ಹಿಂದೆ 31 ನೇ ಸ್ಥಾನದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣವು ಮತ್ತೆರಡು ಸ್ಥಾನಕ್ಕೆ ಮೇಲೇರಿ 29ನೇ ಸ್ಥಾನವನ್ನು ಅಲಂಕರಿಸಿದೆ.

  • Share this:

ಮಂಗಳೂರು: ಇತ್ತೀಚಿನ ಕೋವಿಡ್‌ (Covid-19) ಸಂದಿಗ್ಧತೆಯ ಸಮಯದಲ್ಲಿ ಉಂಟಾಗಿದ್ದ ವ್ಯತ್ಯಯದಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru Airport) ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.


ಭಾರೀ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ತಿಳಿಸಿದೆ. 2022-23 ನೇ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 29 ನೇ ಸ್ಥಾನ ದೊರೆತಿದೆ. ದೆಹಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಮೂರನೇ ಸ್ಥಾನ ಹೊಂದಿದೆ.




ಕೋವಿಡ್‌ ಪೂರ್ವ ಹೇಗಿತ್ತು?
2020 ರ ಆರ್ಥಿಕ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಕೋವಿಡ್‌ ವಿಷಮ ಸ್ಥಿತಿಗೆ ತಲುಪಿತ್ತು. ಆದರೂ, 2019-20ರ ವೇಳೆಗೆ 18,76,294 ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣ ಬೆಳೆಸಿದ್ದರು.


ಕೋವಿಡ್‌ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖ
2020-21 ರ ಸಮಯದಲ್ಲಿ ಕೋವಿಡ್‌ ಕಾರಣದಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು. ಆ ಆರ್ಥಿಕ ವರ್ಷದಲ್ಲಿ 6,14,845 ಹಾಗೂ 2021-22 ರ ವರ್ಷದಲ್ಲಿ ಕೊಂಚ ಸುಧಾರಿಸಿಕೊಂಡಿದ್ದ ಪ್ರಯಾಣಿಕರ ದಟ್ಟಣೆಯು 10,13,453 ರಷ್ಟು ತಲುಪಿತ್ತು.




ಇದನ್ನೂ ಓದಿ: Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ


ಮತ್ತೆ ಮರಳಿ ಟ್ರ್ಯಾಕ್​ಗೆ
ಈ ಆರ್ಥಿಕ ವರ್ಷದಲ್ಲಿ, ಅಂದರೆ 2022-23 ರ ಅವಧಿಯಲ್ಲಿ ಮತ್ತೆ ಮರಳಿ ಟ್ರ್ಯಾಕ್​ಗೆ ಬಂದಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆಯು 18 ಲಕ್ಷ ತಲುಪಿದೆ. ಹೀಗಾಗಿ ಈ ಹಿಂದೆ 31 ನೇ ಸ್ಥಾನದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣವು ಮತ್ತೆರಡು ಸ್ಥಾನಕ್ಕೆ ಮೇಲೇರಿ 29ನೇ ಸ್ಥಾನವನ್ನು ಅಲಂಕರಿಸಿದೆ.




ಇದನ್ನೂ ಓದಿ: Puttur: 80 ಲಕ್ಷ ಲಾಟರಿ ಗೆದ್ದ ಪುತ್ತೂರಿನ ಟೈಲರ್, ಜಾಕ್​ಪಾಟ್ ಅಂದ್ರೆ ಇದು!

top videos


    ದೇಶಿ ವಿಮಾನಗಳ ಓಡಾಟದ ಎಫೆಕ್ಟ್‌
    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ಇತರೆಡೆಗೆ ವಿಮಾನ ಸಂಪರ್ಕ ಸಂಖ್ಯೆ ಹೆಚ್ಚಿದ್ದು ಜನ ಪ್ರಮುಖ ಪಟ್ಟಣಗಳನ್ನು ತಲುಪಬೇಕಾದರೆ ವಿಮಾನವನ್ನು ಅವಲಂಬಿಸುತ್ತಿರುವುದು ದಟ್ಟಣೆ ಸುಧಾರಣೆ ಆಗಲು ಕಾರಣವಾಗಿದೆ. ಜೊತೆಗೆ ಗಲ್ಫ್‌ ದೇಶಗಳಿಗೆ ಪ್ರಯಾಣಿಸುವವರು ಕೂಡಾ ಮಂಗಳೂರು ವಿಮಾನ ನಿಲ್ದಾಣವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

    First published: