• Home
  • »
  • News
  • »
  • state
  • »
  • Indian Railways Update: ಮಂಗಳೂರು-ಮುಂಬೈ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

Indian Railways Update: ಮಂಗಳೂರು-ಮುಂಬೈ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಗಿದ್ರೆ ಯಾವೆಲ್ಲ ರೈಲು? ಎಲ್ಲಿವರೆಗೆ ಸಂಚಾರದಲ್ಲಿ ಬದಲಾವಣೆ ಕಾಣಲಿದೆ ಅನ್ನೋ ಮಾಹಿತಿ ಇಲ್ಲಿದೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ಮುಂಬಯಿಯ ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಲ್ಲಿ ತುರ್ತು ಕಾಮಗಾರಿ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಒಂದಿಷ್ಟು ರೈಲು ಸಂಚಾರದಲ್ಲಿ ಬದಲಾವಣೆ ಆಗಿವೆ. ಹೀಗಾಗಿ ನೀವು ತಲುಪಬೇಕಾದ ನಿಲ್ದಾಣಕ್ಕೂ ಮುನ್ನವೇ ಅಥವಾ ಪರ್ಯಾಯ ನಿಲ್ದಾಣದಲ್ಲಿ ಇಳಿದು ಬೇರೆ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕಿದೆ‌. ಹೌದು, ವಿಶೇಷವಾಗಿ ಮಂಗಳೂರಿನಿಂದ (Mangaluru News) ಹೊರಡುವ ಮುಂಬೈ ರೈಲುಗಳಲ್ಲಿನ ಈ ಬದಲಾವಣೆ (Mangaluru To Mumbai)  ಗಮನಿಸಬೇಕು. ಮುಂಬೈ ಬದಲಿ ಪನ್ವೇಲ್ ಗೆ ಕೆಲವು ರೈಲುಗಳ ಪಯಣ ಮೊಟಕುಗೊಳ್ಳಲಿದೆ. ಹಾಗಿದ್ರೆ ಯಾವೆಲ್ಲ ರೈಲು? ಎಲ್ಲಿವರೆಗೆ ಸಂಚಾರದಲ್ಲಿ ಬದಲಾವಣೆ ಕಾಣಲಿದೆ ಅನ್ನೋ ಮಾಹಿತಿ ಇಲ್ಲಿದೆ.


    ಡಿಸೆಂಬರ್ 13ರ ವರೆಗೆ ಬದಲಾವಣೆ
    ಮಂಗಳೂರು ಈ ಬದಿಯಿಂದ ತೆರಳುವ ರೈಲುಗಳು ಡಿಸೆಂಬರ್ 11 ರ ವರೆಗೆ ಮುಂಬೈ ತಲುಪದು. ಅದೇ ರೀತಿ ಆ ಕಡೆಯಿಂದ ಬರುವವರು ಡಿಸೆಂಬರ್ 13 ರ ವರೆಗೆ ಪನ್ವೇಲ್ ರೈಲು ನಿಲ್ದಾಣವನ್ನ ಅವಲಂಬಿಸಬೇಕಾಗುತ್ತದೆ.


    ಯಾವೆಲ್ಲ ರೈಲು ಬದಲಾವಣೆ?
    ತಿರುವನಂತಪುರ - ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ ಪ್ರೆಸ್‌ ರೈಲು ನ.9ರಿಂದ ಡಿ.11ರ ವರೆಗೆ ಪನ್ವೆಲ್‌ ವರೆಗೆ ಮಾತ್ರ ಸಂಚರಿಸಲಿದೆ.


    ಅದೇ ರೀತಿ, ಮಂಗಳೂರು ಸೆಂಟ್ರಲ್‌ - ಮುಂಬಯಿ ಲೋಕಮಾನ್ಯ ತಿಲಕ್‌ 'ಮತ್ಸ್ಯಗಂಧ' ಎಕ್ಸ್‌ಪ್ರೆಸ್‌ ರೈಲು ನ. 9ರಿಂದ ಡಿ. 11ರ ವರೆಗೆ ಪನ್ವೆಲ್‌ ಜಂಕ್ಷನ್‌ ವರೆಗೆ ಸಂಚರಿಸಲಿದೆ.


    ಇದನ್ನೂ ಓದಿ: Mangaluru ಮ್ಯಾಂಗಲೋರ್ ಅಲ್ಲ, ಮಂಗಳೂರು! ವಿಮಾನ ನಿಲ್ದಾಣದ ಹೆಸರು ಬದಲಾದ ಕಾರಣವಿದು


    ನಂ.12619 ಮುಂಬಯಿ ಲೋಕಮಾನ್ಯ ತಿಲಕ್‌ - ಮಂಗಳೂರು ಸೆಂಟ್ರಲ್‌ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ನ. 9ರಿಂದ ಡಿ. 12ರ ವರೆಗೆ ಲೋಕಮಾನ್ಯ ತಿಲಕ್‌ ಬದಲಿಗೆ ಪನ್ವೆಲ್‌ ನಿಲ್ದಾಣದಿಂದ ಹೊರಡಲಿದೆ.


    ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಬದಲಾವಣೆ ಹೀಗಿದೆ
    ಇನ್ನು ಲೋಕಮಾನ್ಯ ತಿಲಕ್‌ - ತಿರುವನಂತಪುರ ಸೆಂಟ್ರಲ್‌ 'ನೇತ್ರಾವತಿ ಎಕ್ಸ್‌ಪ್ರೆಸ್‌' ರೈಲು ನವೆಂಬರ್ 10ರಿಂದ ಡಿಸೆಂಬರ್‌ 13ರ ವರೆಗೆ ಲೋಕಮಾನ್ಯ ತಿಲಕ್‌ ಬದಲಿಗೆ ಪನ್ವೆಲ್‌ನಿಂದ ಹೊರಡಲಿದೆ.


    ಇದನ್ನೂ ಓದಿ: ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ


    ಹೆಚ್ಚಿನ ಮಾಹಿತಿಗಾಗಿ ಹೀಗೆ ಮಾಡಬಹುದು
    ರೈಲ್ವೇ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ' 'ರೈಲ್ ಮದದ್' (Rail Madad) ಆ್ಯಪ್ ಡೌನ್ ಮಾಡಿಕೊಳ್ಳುವುದು ಇಲ್ಲವೇ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: