• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Mangaluru Water Supply: ಕೇವಲ 20 ದಿನಕ್ಕೆ ಸಾಲುವಷ್ಟಿದೆ ನೀರು, ಶುರುವಾಗಲಿದೆಯೇ ರೇಷನಿಂಗ್?

Mangaluru Water Supply: ಕೇವಲ 20 ದಿನಕ್ಕೆ ಸಾಲುವಷ್ಟಿದೆ ನೀರು, ಶುರುವಾಗಲಿದೆಯೇ ರೇಷನಿಂಗ್?

ಬರಿದಾದ ನೇತ್ರಾವತಿ

ಬರಿದಾದ ನೇತ್ರಾವತಿ

ಮಳೆಯಾಗದ ಕಾರಣ ಮಂಗಳೂರು ನಗರದಲ್ಲಿ ನೀರಿಗೆ ಹಾಹಾಕಾರ ಮುಂದುವರೆಯುವ ಸಾಧ್ಯತೆ ಇದೆ. 

 • News18 Kannada
 • 4-MIN READ
 • Last Updated :
 • Mangalore, India
 • Share this:

ಮಂಗಳೂರು: ನೇತ್ರಾವತಿ ನದಿಯಲ್ಲಿ  (Netravti River) ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿರುವುದರಿಂದ ಮಂಗಳೂರು ನಗರದಲ್ಲಿ ರೇಷನಿಂಗ್‌ ನಿಯಮದಂತೆ ನೀರು ಪೂರೈಕೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾಡಳಿತವು (Dakshina Kannada News) ನಿರ್ಧರಿಸಿದೆ. ತುಂಬೆ ವೆಂಟೆಂಡ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಸಂಪೂರ್ಣ ಇಳಿಮುಖವಾಗಿದೆ. ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆಗೆ (Mangaluru Water Supply)  ಬೇಕಾದಷ್ಟು ಪ್ರಮಾಣದಲ್ಲಿ ನೀರು ಹೊಂದಿಲ್ಲ. ಈ ಕುರಿತು ಸಭೆ ನಡೆಸಿರುವ ಜಿಲ್ಲಾಡಳಿತವು, ತಕ್ಷಣದಿಂದಲೇ ರೇಷನಿಂಗ್‌ ನಿಯಮದಂತೆ ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಸಲು ನಿರ್ಧರಿಸಿದೆ ಎಂದು ʼಉದಯವಾಣಿʼ ವರದಿ ಮಾಡಿದೆ.


ತಕ್ಷಣದಿಂದಲೇ ಜಾರಿ ಸಾಧ್ಯತೆ!
ರೇಷನಿಂಗ್‌ ನಿಯಮವನ್ನು ತತ್‌ಕ್ಷಣದಿಂದಲೇ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮುಂದಾಗಿದೆ. ಮೇ 4 ಅಥವಾ 5 ರಂದು ರೇಷನಿಂಗ್‌ ನಿಯಮ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಳೆಯಾಗದ ಕಾರಣ ಮಂಗಳೂರು ನಗರದಲ್ಲಿ ನೀರಿಗೆ ಹಾಹಾಕಾರ ಮುಂದುವರೆಯುವ ಸಾಧ್ಯತೆ ಇದೆ. 
ರೇಷನಿಂಗ್ ಸಾಧ್ಯತೆ ಕಡಿಮೆ?
ಆದರೆ ಮುಂದಿನ 20 ದಿನಗಳ ಕಾಲ ತುಂಬೆ ಡ್ಯಾಂನಲ್ಲಿ ಪೂರೈಕೆ ಮಾಡುವಷ್ಟು ನೀರಿನ ಸಂಗ್ರಹವಿದೆ. ಹೀಗಾಗಿ ಮುಂದಿನ 20 ದಿನಗಳ ಕಾಲ ನೀರು ರೇಷನಿಂಗ್ ಮಾಡುವ ಸಾಧ್ಯತೆ ಇಲ್ಲ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.  ಸಾಲುವಷ್ಟು


ಇದನ್ನೂ ಓದಿ: Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!
10 ದಿನಕ್ಕೆ ಆಗುವಷ್ಟು ನೀರು!
ರೇಷನಿಂಗ್‌ ನಿಯಮ ಅನುಸರಿಸಿದ್ರೂ ಸದ್ಯದ ಪರಿಸ್ಥಿತಿಯಲ್ಲಿ ತುಂಬೆ ಡ್ಯಾಂ ನಲ್ಲಿ ಹತ್ತು ದಿನಗಳಿಗಾಗುವಷ್ಟೇ ನೀರು ಇರುವುದಾಗಿ ಅಂದಾಜಿಸಲಾಗಿದೆ.ಪಶ್ಚಿಮ ಘಟ್ಟಗಳಲ್ಲಿ ಕನಿಷ್ಠ ಮಳೆಯಾದರೂ ನೇತ್ರಾವತಿ ನೀರಿನ ಒಳಹರಿವು ಜಾಸ್ತಿಯಾಗಿ ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಆದರೂ ಮಳೆಯೇ ಕೈಕೊಟ್ಟಲ್ಲಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಲಿದೆ.


ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್​ಪ್ರೆಸ್​ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!

top videos


  ರೇಷನಿಂಗ್‌ ಜಾರಿಯಲ್ಲಿದೆ!
  ಜಿಲ್ಲಾಡಳಿತ ರೇಷನಿಂಗ್‌ ಪದ್ಧತಿ ಶುರು ಮಾಡುವ ಕುರಿತು ಚರ್ಚೆ ನಡೆಸಿದೆ. ಆದರೆ, ವಾಸ್ತವದಲ್ಲಿ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ 2-3 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇನ್ನು ಜಿಲ್ಲಾಡಳಿತ ಅಧಿಕೃತ ರೇಷನಿಂಗ್‌ ಆರಂಭಿಸಿದ್ದಲ್ಲಿ, ಕೈಗಾರಿಕೆ, ಕಟ್ಟಡಗಳಿಗೆ ನೀರು ಪೂರೈಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

  First published: