Mangaluru News: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಾಸ್ಟರ್​ ಪ್ಲ್ಯಾನ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಣೆಕಟ್ಟುಗಳ ಡ್ರೋನ್‌ ಸರ್ವೇ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ನಿರ್ಧರಿಸಿದೆ.

  • Share this:

ಮಂಗಳೂರು: ನೀರಿನ ಕೊರತೆ ನೀಗಿಸಲು (Mangaluru Water Supply) ಡ್ರೋನ್‌ ಸಹಾಯದಿಂದ ಡ್ಯಾಂಗಳ ಸರ್ವೇ ಮಾಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ (Dakshina Kannada News) ನಿರ್ಧರಿಸಿದೆ. ಚುನಾವಣೆ ಮುಗಿಯುತ್ತಿದ್ದಂತೆ ಡ್ರೋನ್‌ ಸಹಾಯದಿಂದ ಜಿಲ್ಲೆಯ ಪ್ರಮುಖ ವೆಂಟೆಡ್‌ ಡ್ಯಾಂಗಳ ಸರ್ವೇ ಕಾರ್ಯ (Mangaluru Water Crisis) ನಡೆಸಲು ಯೋಜಿಸಿದೆ. ಇದರಿಂದ ಕುಮಾರಧಾರ, ನೇತ್ರಾವತಿ, ಫಲ್ಗುಣಿ, ನಂದಿನಿ, ಶಾಂಭವಿ ನದಿಗಳ ಒಳ ಹರಿವು ಹಾಗೂ ನೀರಿನ ಕೊರತೆ ನೀಗಿಸಲು ಮಾಡಬಹುದಾದ ಯೋಜನೆಗೆ ಡ್ರೋನ್‌ ಸರ್ವೇ ಸಹಕಾರಿಯಾಗಲಿದೆ.


ಪ್ರಮುಖವಾಗಿ ತುಂಬೆ, ಎಎಂಆರ್‌ ಹಾಗೂ ಹರೇಕಳ ಡ್ಯಾಂನಲ್ಲಿ ಸಂಗ್ರಹಿತವಾದ ನೀರು, ಅದನ್ನು ಎಷ್ಟು ದಿನ ಬಳಸಬಹುದು. ಎಷ್ಟು ಆಳದವರೆಗೆ ಹೂಳು ತೆಗೆಯಬಹುದು ಎಂಬುದನ್ನು ಈ ಸರ್ವೆಯಿಂದ ತಿಳಿಯುವುದು ಪ್ರಮುಖ ಉದ್ದೇಶವಾಗಿದೆ.


ಜಿಲ್ಲೆಯಲ್ಲಿ 300 ಪ್ಲಸ್‌ ಡ್ಯಾಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿತವಾದ ಹರೇಕಳ ಡ್ಯಾಂ ಸಹಿತ ತುಂಬೆ, ಎಎಂಆರ್‌, ಮಳವೂರು ಹೀಗೆ ಒಟ್ಟು 342 ವೆಂಟೆಡ್‌ ಡ್ಯಾಂಗಳಿವೆ. ಇದೆಲ್ಲವನ್ನು ನೀರಿನ ಸಮಗ್ರ ಪೂರೈಕೆಗೆ ಬಳಸಿಕೊಳ್ಳಲಾಗುತ್ತಿದೆ.


ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ (Water Level) ತೀವ್ರವಾಗಿ ಕುಸಿಯುತ್ತಿದ್ದು, ದಿನನಿತ್ಯ ನೀರಿನ ಪೂರೈಕೆ ಕಷ್ಟಕರವಾಗಿದೆ.


ಇದನ್ನೂ ಓದಿ: Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!


ಹೀಗಾಗಿ ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ  ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು  ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ  ತಿಳಿಸಿತ್ತು. ಈ ಕುರಿತ ಸಭೆಯ ಬಳಿಕ ಜಿಲ್ಲಾಧಿಕಾರಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.




ಇಲ್ಲೆಲ್ಲ ನೀರಿಲ್ಲ!
ಕಟ್ಟಡ ನಿರ್ಮಾಣ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್​ಗಳ ಜೋಡಣೆಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸಲಾಗುತ್ತದೆ. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ, ಜೋಡಣೆ ಕಡಿತಗೊಳಿಸುವ ಅಧಿಕಾರವನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹೊಂದಿರುತ್ತಾರೆ.


ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್​ಪ್ರೆಸ್​ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!


ಕುಡಿಯುವ ನೀರಿಗೆ ಆದ್ಯತೆ
ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುರಿಂದ ಸದ್ಯ ರೇಷನಿಂಗ್‌ ಮೂಲಕ ಪೂರೈಕೆ ಮಾಡುವ ನೀರನ್ನು ಕುಡಿಯುವುದಕ್ಕಾಗಿ ಆದ್ಯತೆ ನೀಡಲಾಗಿದೆ. ಹೀಗಾಗಿ ಇತರೆ ಕೆಲಸ, ಕಾರ್ಯಗಳಿಗೆ ಬಳಸದಂತೆ ಪಾಲಿಕೆಯು ಸೂಚನೆ ನೀಡಿದೆ.

top videos
    First published: