• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mangaluru News: ಕೃಷಿ ಮೇಳ ನಡೆದ ಜಾಗದಲ್ಲಿ ಹೊಸ ಹೆಲಿಪ್ಯಾಡ್, ಮಂಗಳೂರಿನಲ್ಲೊಂದು ಯಶಸ್ವಿ ಪ್ರಯೋಗ

Mangaluru News: ಕೃಷಿ ಮೇಳ ನಡೆದ ಜಾಗದಲ್ಲಿ ಹೊಸ ಹೆಲಿಪ್ಯಾಡ್, ಮಂಗಳೂರಿನಲ್ಲೊಂದು ಯಶಸ್ವಿ ಪ್ರಯೋಗ

ಹೊಸ ಹೆಲಿಪ್ಯಾಡ್

ಹೊಸ ಹೆಲಿಪ್ಯಾಡ್

ಎಸ್‌ಪಿಜಿ ನಿಯಂತ್ರಣದಲ್ಲಿದ್ದ ಹೆಲಿಪ್ಯಾಡ್‌ ಸುತ್ತಮುತ್ತ ಸ್ಥಳೀಯ ಪೊಲೀಸರ ನಿಗಾವಿತ್ತು. ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು. ಪಾಸ್‌ ಇಲ್ಲದ ಹೊರತು ಹೆಲಿಪ್ಯಾಡ್‌ ಬಳಿ ಯಾರೂ ಪ್ರವೇಶಿಸುವಂತಿರಲಿಲ್ಲ.

  • Share this:

ಮಂಗಳೂರು: ಮೇ 3ರ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಧಾನಸಭೆ ಚುನಾವಣಾ ಅಂಗವಾಗಿ ನಗರದ ಹೊರವಲಯದಲ್ಲಿರುವ ಮುಲ್ಕಿಯ ಕೊಲ್ನಾಡುವಿಗೆ ಆಗಮಿಸಿದ್ದರು. ಇದಕ್ಕಾಗಿ ಕೊಲ್ನಾಡಿನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ (Mangaluru News Helipad)  ನಿರ್ಮಿಸಲಾಗಿತ್ತು. ಅತ್ಯಂತ ಸುಸಜ್ಜಿತವಾಗಿ ಹೆಲಿಪ್ಯಾಡ್​​ನ್ನ ನಿರ್ಮಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಂತಿದ್ದ ಇದೇ ತಾತ್ಕಾಲಿಕ ಹೆಲಿಪ್ಯಾಡ್​ನಲ್ಲೇ ಮೋದಿ (PM Narendra Modi) ಆಗಮಿಸಿದ್ದ ಕಾಪ್ಟರ್‌ ಸಹಿತ ಮೂರು ಹೆಲಿಕಾಪ್ಟರ್​ಗಳು ಲ್ಯಾಂಡ್‌ ಆಗಿದ್ದವು.


ಹೇಗಿತ್ತು ಆ ಪ್ರದೇಶ?
ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶ ನಡೆದಿದ್ದ ಪ್ರದೇಶವು ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದಲ್ಲೇ ಇದೆ. ಅದರ 500 ಮೀಟರ್‌ ದೂರದಲ್ಲೇ ಕೃಷಿ ಮೇಳ ನಡೆದಿದ್ದ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು.
ಇದಲ್ಲದೇ ಹೆಚ್ಚುವರಿಯಾಗಿ ಎನ್‌ಎಂಪಿಎ ಹಾಗೂ ಎನ್‌ಐಟಿಕೆ ಹೆಲಿಪ್ಯಾಡ್​ಗಳನ್ನು ಎಸ್‌ಪಿಜಿ ತಂಡವು ಗುರುತಿಸಿತ್ತು. ಆದರೆ ಅಂತಿಮವಾಗಿ ಹೆದ್ದಾರಿ, ಇನ್ನೊಂದೆಡೆ ಜನವಸತಿ ಪ್ರದೇಶ ಹಾಗೂ ಮತ್ತೊಂದೆಡೆ ಕೊಲ್ನಾಡು ಕೈಗಾರಿಕಾ ಪ್ರದೇಶವಿರುವ ಕೊಲ್ನಾಡುವಿನ ತಾತ್ಕಾಲಿಕ ಹೆಲಿಪ್ಯಾಡ್​ನಲ್ಲೇ ಹೆಲಿಕಾಪ್ಟರ್​ಗಳು ಲ್ಯಾಂಡಿಂಗ್‌ ಹಾಗೂ ಟೇಕಾಫ್‌ ಆಗಿದ್ದವು.


ಕೊನೆಕ್ಷಣದಲ್ಲಿ ನಡೆದಿದ್ದ ತಯಾರಿ
ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ಕೊನೆಯ ಹತ್ತು ದಿನಗಳ ಹಿಂದಷ್ಟೇ ಪ್ರಕಟಿಸಲಾಗಿತ್ತು. ಬಳಿಕ ಸ್ಥಳ ಪರಿಶೀಲನೆ, ಹೆಲಿಪ್ಯಾಡ್‌ ನಿರ್ಮಾಣದ ಸವಾಲು ಎದುರಾಗಿತ್ತು. ಕೊನೆಯದಾಗಿ ಕೊಲ್ನಾಡು ಕೃಷಿ ಮೇಳ ನಡೆದ ಮೈದಾನವನ್ನೇ ಆಯ್ಕೆ ಮಾಡಲಾಗಿತ್ತು.
ಅಧಿಕಾರಿಗಳು, ಸ್ಥಳೀಯ ಶಾಸಕರು ಸೇರಿ ಮೈದಾನದ ಸುತ್ತಮುತ್ತ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಕೊನೆಯ ಮೂರು ದಿನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್​‘ನ ಕಾರ್ಯ ನಡೆದು ಹೆಲಿಕಾಪ್ಟರ್‌ ಟೆಸ್ಟಿಂಗ್‌ ಕೂಡಾ ನಡೆದಿತ್ತು ಅನ್ನೋದು ವಿಶೇಷ.


ಇದನ್ನೂ ಓದಿ: Water Rationing In Mangaluru: ಮಂಗಳೂರು ನಗರಕ್ಕೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ


ಭದ್ರತೆ ಹೇಗಿತ್ತು?
ಎಸ್‌ಪಿಜಿ ನಿಯಂತ್ರಣದಲ್ಲಿದ್ದ ಹೆಲಿಪ್ಯಾಡ್‌ ಸುತ್ತಮುತ್ತ ಸ್ಥಳೀಯ ಪೊಲೀಸರ ನಿಗಾವಿತ್ತು. ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು. ಪಾಸ್‌ ಇಲ್ಲದ ಹೊರತು ಹೆಲಿಪ್ಯಾಡ್‌ ಬಳಿ ಯಾರೂ ಪ್ರವೇಶಿಸುವಂತಿರಲಿಲ್ಲ.


ಹೆಲಿಪ್ಯಾಡ್‌ ಬಳಿಯೇ ಅಗ್ನಿಶಾಮಕದಳ ಸನ್ನದ್ಧ ಸ್ಥಿತಿಯಲ್ಲಿತ್ತು. ಬ್ಲ್ಯಾಕ್‌ ಕ್ಯಾಟ್‌ ಸಿಬ್ಬಂದಿಗಳು ಮೋದಿ ಆಗಮನದ ವೇಳೆಗೆ ಸುತ್ತಲೂ ಬೈನಾಕುಲರ್‌ ಬಳಸಿ ಪರಿಶೀಲಿಸುತ್ತಿದ್ದರು. ಜನರನ್ನು ಯಾವುದೇ ಕಾರಣಕ್ಕೂ ಹೆಲಿಪ್ಯಾಡ್‌ ಬಳಿ ಸುಳಿಯದಂತೆ ನಿಯಂತ್ರಿಸಲಾಗಿತ್ತು.


ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್​ಪ್ರೆಸ್​ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!


ಯಾವ ಕಾಪ್ಟರ್​ನಲ್ಲಿದ್ರು ಮೋದಿ?
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಮೂರು ಹೆಲಿಕಾಪ್ಟರ್​ಗಳು ಕೊಲ್ನಾಡು ಹೆಲಿಪ್ಯಾಡ್​ನಲ್ಲಿ ಬಂದಿಳಿದಿತ್ತು. ಮೊದಲ ಹೆಲಿಕಾಪ್ಟರ್​ನಲ್ಲಿ ಮೋದಿ ಛಾಯಾಚಿತ್ರಗ್ರಾಹಕರು, ಆಪ್ತ ಸಹಾಯಕರು ಹಾಗೂ ಎರಡನೇ ಹೆಲಿಕಾಪ್ಟರ್‌ ಹೆಚ್ಚುವರಿ ಆಗಮಿಸಿದ್ದಾಗಿತ್ತು. ಮೂರನೆಯದಾಗಿ ಆಗಮಿಸಿದ ಹೆಲಿಕಾಪ್ಟರ್​ನಲ್ಲಿ ನರೇಂದ್ರ ಮೋದಿ ಆಗಮಿಸಿದರು.

First published: