ಮಂಗಳೂರು: ಟ್ರಾಫಿಕ್ ಸಮಸ್ಯೆಗಳಿಗೆ ಮುಕ್ತಿ ಹಾಡಲು ಈಗ “ಕೋಬ್ರಾ” ಪಡೆ (Cobra Bikes In Mangaluru) ಇನ್ಮುಂದೆ ಮಂಗಳೂರು ನಗರದಲ್ಲಿ (Mangaluru News) ಕಾಣಿಸಿಕೊಳ್ಳಲಿದೆ. ದ್ವಿಚಕ್ರ ವಾಹನದ ಈ ಪಡೆ ತಕ್ಷಣವೇ ಟ್ರಾಫಿಕ್ ಸಂಬಂಧಿತ ಸಮಸ್ಯೆಗಳಿಗೆ (Mangaluru Traffic) ಸ್ಥಳಕ್ಕೆ ತೆರಳಿ ಕ್ರಮಕೈಗೊಳ್ಳಲಿದೆ. ಕಮೀಷನರೇಟ್ ವ್ಯಾಪ್ತಿಗೆ ನಾಲ್ಕು “ಕೋಬ್ರಾ” ಬೈಕ್ಗಳನ್ನು ನೀಡಲಾಗಿದ್ದು, ಅದನ್ನು ಸಂಚಾರ ಪೂರ್ವ ಹಾಗೂ ಸಂಚಾರ ಪಶ್ಚಿಮ ಠಾಣೆಗಳಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಆರ್. ಜೈನ್ ಹಸ್ತಾಂತರಿಸಿದ್ದಾರೆ.
“ಕೋಬ್ರಾ” ಕಾರ್ಯಾಚರಣೆ ಹೇಗೆ?
“ಕೋಬ್ರಾ” ಬೈಕ್ ಸದಾ ಅಲರ್ಟ್ ಆಗಿದ್ದು, ನಗರದಲ್ಲಿ ಉಂಟಾಗುವ ಅನಗತ್ಯ ಟ್ರಾಫಿಕ್ ಕಿರಿಕಿರಿಗೆ ಮುಕ್ತ ಹಾಡಲಿದೆ. ವಿಶೇಷವಾಗಿ ಅಪಘಾತ, ಪಾರ್ಕಿಂಗ್ ನಿಯಮ ಉಲ್ಲಂಘನೆ, ವಿಐಪಿ ಹಾಗೂ ಆಂಬುಲೆನ್ಸ್ ಸಂಚಾರಕ್ಕೆ ಸುಗಮ ಸಂಚಾರ, ಯಾವುದೇ ಅಡೆತಡೆಯಿಲ್ಲದಂತೆ ಫುಟ್ಪಾತ್ಗಳ ನಿರ್ವಹಣೆ, ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳ ಮೇಲೆ ಕ್ರಮ ಹೀಗೆ ಸದಾ ಅಲರ್ಟ್ ಆಗಿದ್ದು ನಗರದಾದ್ಯಂತ ಈ “ಕೋಬ್ರಾ” ಸಿಬ್ಬಂದಿಗಳು ಕಾರ್ಯಾಚರಿಸಲಿದ್ದಾರೆ.
ಇದನ್ನೂ ಓದಿ: Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ
ಹೇಗಿದೆ “ಕೋಬ್ರಾ” ಬೈಕ್?
“ಕೋಬ್ರಾ” ಬೈಕ್ ಸೈರನ್ ಹಾಗೂ ಮೈಕ್ನ್ನ ಹೊಂದಿದೆ. ಟ್ರಾಫಿಕ್ ಸಮಸ್ಯೆ ಸಮಯದಲ್ಲಿ ಸೈರನ್ ಮೊಳಗಿಸಿ ವಾಹನ ಸವಾರರನ್ನು ಎಚ್ಚರಿಸಲಿದೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳು ನಿಲ್ಲಿಸಿದ್ದಲ್ಲಿ ಮೈಕ್ ಹಾಗೂ ಸೈರನ್ ಮೂಲಕ ಎಚ್ಚರಿಕೆ ರವಾನಿಸಲಿದೆ.
ಅಷ್ಟೇ ಅಲ್ದೇ, ವೀಲ್ ಕ್ಲ್ಯಾಂಪ್ ಜೊತೆಗೆ ಆಗಮಿಸುವ ಕೋಬ್ರಾ ಸಿಬ್ಬಂದಿ ನೋ ಪಾರ್ಕಿಂಗ್ ನಲ್ಲಿ ಇರುವ ವಾಹನಗಳಿಗೆ ಲಾಕ್ ಜಡಿಯಲಿದ್ದಾರೆ. ಆಂಬುಲೆನ್ಸ್ ಹಾಗೂ ವಿಐಪಿ ಸಂಬಂಧಿತ ವಾಹನಗಳು ಆಗಮನದ ವೇಳೆ ಗ್ರೀನ್ ಕಾರಿಡಾರ್ ಅನ್ನ ತಕ್ಷಣವೇ ನಿರ್ಮಿಸಿ ಕೊಡಲು ಸಹಕರಿಸಲಿದೆ.
ತುರ್ತು ಸಹಾಯವಾಣಿ
ಟ್ರಾಫಿಕ್ ಅಥವಾ ಇನ್ನಿತರ ಯಾವುದೇ ದೂರು ಸಲ್ಲಿಕೆಗೆ ಸಾರ್ವಜನಿಕರು ದಿನದ ಯಾವುದೇ ಹೊತ್ತಲ್ಲೂ ಸಹಾಯವಾಣಿ ಸಂಖ್ಯೆ 112 ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ