ಮಂಗಳೂರು: ಮಂಗಳೂರು ನಗರದಲ್ಲಿ (Mangaluru News) ಉಂಟಾಗುತ್ತಿದ್ದ ಅನಗತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹೊಸ ಯೋಜನೆ ರೂಪಿಸಲಾಗಿದೆ. ಮಂಗಳೂರು ನಗರ ನೂತನ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್. ಜೈನ್ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೊಸ ಹೊಸ ನಿಯಮಗಳನ್ನು (Mangaluru Traffic Rules) ಜಾರಿಗೆ ತರುತ್ತಿದ್ದಾರೆ.
ಖುದ್ದು ಭೇಟಿ ನೀಡಿ ಪರಿಶೀಲನೆ
ಮಂಗಳೂರು ನಗರದ ನೂತನ ಕಮೀಷನರ್ ಆಗಿ ಆಗಮಿಸುತ್ತಿದ್ದಂತೆ ನಗರದ ಪ್ರಮುಖ ಸಂಚಾರದಟ್ಟಣೆಯ ಜಂಕ್ಷನ್ ಗಳಿಗೆ ಖುದ್ದು ತಾನೇ ತೆರಳಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಟ್ರಾಫಿಕ್ ನಿಯಂತ್ರಣ ಹೇಗೆ ಮಾಡಬಹುದು? ಅನ್ನೋದರ ಬಗ್ಗೆ ಟ್ರಾಫಿಕ್ ಪೊಲೀಸರ ಸಲಹೆ ಹಾಗೂ ಸಾರ್ವಜನಿಕರು ನೀಡುತ್ತಿರುವ ಮಾಹಿತಿಯನ್ನು ಆಧರಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಪೊಲೀಸ್ ಆಯುಕ್ತರು ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ, ಮಿಲಾಗ್ರಿಸ್ ವೃತ್ತಗಳಿಗೆ ತಾನೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸ್ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಹಂಪನಕಟ್ಟೆ ಸಿಗ್ನಲ್ನಲ್ಲಿ ಬದಲಾವಣೆ
ಈಗಾಗಲೇ ಹಂಪನಕಟ್ಟೆ ವೃತ್ತದಲ್ಲಿ ಹಲವು ರೀತಿಯ ಬದಲಾವಣೆ ಮಾಡಲಾಗಿದೆ. ಹೀಗಾಗಿ ನಗರದ ಪ್ರಮುಖ ಜಂಕ್ಷನ್ನಲ್ಲಿ ನೇರವಾಗಿ ಸಂಚರಿಸುವ ವಾಹನಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಜೊತೆಗೆ ಪಾದಚಾರಿಗಳಿಗೂ ಇದರಿಂದ ಅನುಕೂಲವಾಗಿದೆ.
ಕಂಕನಾಡಿಯಲ್ಲಿ ಒನ್ ವೇ
ಇದೀಗ ಕಂಕನಾಡಿ ಓಲ್ಡ್ ಬೈಪಾಸ್ ರಸ್ತೆಯಲ್ಲೂ ಮಹತ್ವದ ಬದಲಾವಣೆ ಮಾಡಿ ಆದೇಶಿಸಲಾಗಿದೆ. ಈ ಹಿಂದೆ ಸಾಯಂಕಾಲ ಹಾಗೂ ಸಂಚಾರ ದಟ್ಟಣೆ ಸಮಯದಲ್ಲಿ ಇಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಕಂಡು ಬರುತ್ತಿತ್ತು. ಹೀಗಾಗಿ ಇದನ್ನ ಏಕಮುಖ ಸಂಚಾರಕ್ಕಷ್ಟೇ ಅನುವು ಮಾಡಿಕೊಟ್ಟು ಆದೇಶಿಸಲಾಗಿದೆ.
ಯಾವಾಗಿನಿಂದ ಈ ಬದಲಾವಣೆ?
ಮಾರ್ಚ್ 20 ರಿಂದ ಜಾರಿಗೆ ಬರುವಂತೆ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಂತೆ ವಾಹನ ಸವಾರರು ಕಂಕನಾಡಿ ಓಲ್ಡ್ ಬೈಪಾಸ್ ರಸ್ತೆಯಲ್ಲಿ ಸಂಚರಿಸುವಾಗ ಬದಲಾವಣೆಗಳನ್ನು ಗಮನಿಸಬೇಕಾಗುತ್ತವೆ.
ಹೀಗಿದೆ ಬದಲಾವಣೆ
1. ಕಂಕನಾಡಿ ವೃತ್ತದಿಂದ ಓಲ್ಡ್ ಬೈಪಾಸ್ ರಸ್ತೆಯಾಗಿ ಸಂಚರಿಸುವ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಇದನ್ನೂ ಓದಿ: Matsyagandha Express: ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟ ಪ್ರಖ್ಯಾತ ರೈಲಿಗೆ 25ರ ಪ್ರಾಯ!
2. ಫಳ್ನೀರ್ ಮದರ್ ಥೆರೇಸಾ ರಸ್ತೆಯಿಂದ ಪಂಪ್ವೆಲ್ ಕಡೆಗೆ ಹೋಗುವ ವಾಹನಗಳು ಕಂಕನಾಡಿಗೆ ಆಗಮಿಸಿದ ಬಳಿಕ ಎಡ ಭಾಗಕ್ಕೆ ಸಂಚರಿಸಿ, ಕರಾವಳಿ ವೃತ್ತದ ಮೂಲಕ ಬಲಕ್ಕೆ ತಿರುಗಿ ಪಂಪ್ವೆಲ್ಗೆ ತೆರಳುವುದು
3. ಮಂಗಳಾದೇವಿ, ವೆಲೆನ್ಸಿಯಾ ಕಡೆಯಿಂದ ಬರುವ ವಾಹನಗಳಿಗೂ ನೇರವಾಗಿ ಕರಾವಳಿ ವೃತ್ತದವರೆಗೆ ಸಾಗಿ, ಬಳಿಕ ಬಲಕ್ಕೆ ತಿರುಗಿಸಿ ಪಂಪ್ವೆಲ್ ಕಡೆಗೆ ಸಂಚರಿಸುವುದು.
ಇದನ್ನೂ ಓದಿ: Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!
ಪಂಪ್ವೆಲ್ ವೃತ್ತವು ಕೇರಳ, ಬೆಂಗಳೂರು, ಮಡಿಕೇರಿ, ಉಡುಪಿ ಕಡೆಗೆ ತೆರಳುವವರಿಗೂ ಪ್ರಮುಖ ವೃತ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ