• Home
  • »
  • News
  • »
  • state
  • »
  • ಮಂಗಳೂರಿನ ಪೊಲೀಸ್ ಜೋಡಿಯಿಂದ ಪ್ರತಿನಿತ್ಯ ನಿರ್ಗತಿಕರಿಗೆ ಆಹಾರ ವಿತರಣೆ!

ಮಂಗಳೂರಿನ ಪೊಲೀಸ್ ಜೋಡಿಯಿಂದ ಪ್ರತಿನಿತ್ಯ ನಿರ್ಗತಿಕರಿಗೆ ಆಹಾರ ವಿತರಣೆ!

ಮಂಗಳೂರು ಪೊಲೀಸ್ ಜೋಡಿಯಿಂದ ಆಹಾರ ವಿತರಣೆ.

ಮಂಗಳೂರು ಪೊಲೀಸ್ ಜೋಡಿಯಿಂದ ಆಹಾರ ವಿತರಣೆ.

ಊಟದ ಜೊತೆಗೆ ನಿರ್ಗತಿಕರಿಗೆ ಮಾಸ್ಕ್, ಕುಡಿಯುವ ನೀರನ್ನೂ ನೀಡಲಾಗುತ್ತಿದೆ. ಸದ್ಯ ಬೇರೆ ಬೇರೆ ಕಡೆಗಳಿಂದ ಪ್ರಾಯೋಜಕರೂ ಮುಂದೆ ಬಂದು ತಾವೂ ಸಹಾಯ ಮಾಡೋದಾಗಿ ಹೇಳುತ್ತಿದ್ದಾರೆ. ಪ್ರಾಯೋಜಕರ ನೆರವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಆಹಾರ ನೀಡುವ ಗುರಿ ಈ ತಂಡದ್ದು ಆಗಿದೆ. ಈ ಮೂಲಕ ಈ ಪೊಲೀಸ್ ಜೋಡಿ ಸದ್ದು, ಸುದ್ದಿಯಿಲ್ಲದೆ ನೂರಾರು ಮಂದಿಯ ಹೊಟ್ಟೆ ತಣಿಸುವ ಕಾರ್ಯದಲ್ಲಿ ತೊಡಗಿದೆ.

ಮುಂದೆ ಓದಿ ...
  • Share this:

ಮಂಗಳೂರು: ಪೊಲೀಸರೆಂದರೆ ಕರುಣೆ ಇಲ್ಲದವರು, ಯಾವಾಗಲೂ ಸಿಟ್ಟಿನಿಂದಲೇ ಇರುವವರು ಎಂಬ ನಂಬಿಕೆ ಜನರಲ್ಲಿದೆ. ಲಾಕ್ ಡೌನ್ ವೇಳೆಯಂತೂ ಪೊಲೀಸರ ಮೇಲೆ‌ ಜನರ ಭಾವನೆಗಳೂ ಗಟ್ಟಿಯಾಗಿದೆ. ಪೊಲೀಸರ ಕೈಗೆ ಸಿಕ್ಕರೆ ಬಾಸುಂಡೆ ಗ್ಯಾರಂಟಿ ಅನ್ನುವ ಅಭಿಪ್ರಾಯವೂ ಜನರಲ್ಲಿದೆ. ಪೊಲೀಸರು ಲಾಕ್ ಡೌನ್ ವೇಳೆಯಲ್ಲಿ ಸುಮ್ಮನೇ ಅಮಾಯಕರ ಮೇಲೆ ಅಧಿಕಾರ ಚಲಾಯಿಸುತ್ತಾರೆ ಅಂತಾ ಜನ ದೂರುತ್ತಾರೆ. ರಾಜ್ಯದ ಕೆಲವೊಂದು ಕಡೆ ಈ ವಿಚಾರವಾಗಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದ,  ಮಾತಿನ ಚಕಮಕಿ ಸಹ ನಡೆದಿವೆ.


ಇತ್ತೀಚೆಗೆ ಪೊಲೀಸರ ಮೇಲೆ ಸಾಕಷ್ಟು ದಬ್ಬಾಳಿಕೆಯ ಆರೋಪಗಳು ಕೇಳಿ ಬರುತ್ತಿದೆ. ಪೊಲೀಸರು ಸುಖಾಸುಮ್ಮನೆ ಜನರಿಗೆ ಲಾಠಿ ಏಟು ಕೊಡ್ತಾರೆ ಅನ್ನುವ ಆರೋಪವೂ ಇದೆ. ಆದರೆ ಈ ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರಿನ ಪೊಲೀಸ್ ಜೋಡಿ ಪ್ರತಿನಿತ್ಯ 150 ಜನರಿಗೆ ಆಹಾರ ನೀಡುತ್ತಿದೆ. ಹಸಿವಿನಿಂದ ಬಳಲುತ್ತಿರುವವರ ಹೊಟ್ಟೆ ತಣಿಸುವ ಕಾರ್ಯ ಮಾಡುತ್ತಿದೆ. ಮಂಗಳೂರಿನ ಪಾಂಡೇಶ್ವರ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಹಾಗೂ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶಿವಕುಮಾರ್ ರಾವ್ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಸುನೀಲ್ ಕುಮಾರ್ ಈ ಮಾನವೀಯ ಕಾರ್ಯದಲ್ಲಿ ನಿರತರಾಗಿದ್ದಾರೆ.


ಕಳೆದ ಹತ್ತು ದಿನಗಳಿಂದ ಈ ಪೊಲೀಸ್ ಜೋಡಿ ಸ್ನೇಹಿತರ ಸಹಕಾರದಿಂದ ನಿತ್ಯವೂ ಬೀದಿಯಲ್ಲಿ ಬಿದ್ದವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಂಗಳೂರು ನಗರದ ಉರ್ವಸ್ಟೋರ್, ಹಳೆಯ ಬಸ್ ನಿಲ್ದಾಣ, ಕಂಕನಾಡಿ, ಪಂಪ್ ವೆಲ್ ಗಳಲ್ಲಿ ಇರುವ ಹಲವಾರು ಮಂದಿ ಭಿಕ್ಷುಕರು, ನಿರಾಶ್ರಿತರಿಗೆ ಊಟ ಒದಗಿಸುತ್ತಿದ್ದಾರೆ. ಅನ್ನ, ಪಲ್ಯ, ಕೋಳಿ ಮಾಂಸದ ಸಾರು ಸೇರಿ ನಿತ್ಯವೂ 150 ಮಂದಿಗೆ ಈ ಪೊಲೀಸ್ ಜೋಡಿ ಊಟ ಒದಗಿಸುತ್ತಿದೆ. ಜೊತೆಗೆ ಕುಡಿಯುವ ನೀರು ಮಾಸ್ಕ್ ಗಳನ್ನು ನೀಡಲಾಗುತ್ತದೆ.


ಇದನ್ನು ಓದಿ: ಐಟಿಐ ಆಸ್ಪತ್ರೆಗೆ ಕೇಂದ್ರ ಸಚಿವ ಸದಾನಂದ ಗೌಡ ಭೇಟಿ; ತಿಂಗಳೊಳಗೆ ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ


ಶಿವಕುಮಾರ್ ರಾವ್ ಹಾಗೂ ಸುನಿಲ್ ಕುಮಾರ್ ಇಬ್ಬರೂ ಕರ್ತವ್ಯದಲ್ಲಿ ಇರುವುದರಿಂದ ಮಹಾಕಾಳಿ ಪಡ್ಪುವಿನ ಆದಿ ಮಹೇಶ್ವರಿ ಕ್ರಿಕೇಟರ್ಸ್ ನ ಯುವಕರು ಪ್ರತಿನಿತ್ಯ ಊಟ ಹಂಚುವ ಕೆಲಸ ಮಾಡುತ್ತಿದ್ದಾರೆ. ಹೊಟೇಲ್ ನಲ್ಲಿ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ನೀಡಿ ಊಟಕ್ಕೆ ಸಿದ್ಧಪಡಿಸಿ ಆಹಾರವನ್ನು ಮಂಗಳೂರು ನಗರದೆಲ್ಲೆಡೆ ಹಂಚಲಾಗುತ್ತದೆ. ಪ್ರತಿನಿತ್ಯ ಐದು ಸಾವಿರ ರೂಪಾಯಿ ಊಟಕ್ಕಾಗಿ ಬೇಕಾಗಿದ್ದು, ಪೊಲೀಸ್ ಜೋಡಿ ಈ ಹಣವನ್ನು ನೀಡುತ್ತಿದೆ.


ಊಟದ ಜೊತೆಗೆ ನಿರ್ಗತಿಕರಿಗೆ ಮಾಸ್ಕ್, ಕುಡಿಯುವ ನೀರನ್ನೂ ನೀಡಲಾಗುತ್ತಿದೆ. ಸದ್ಯ ಬೇರೆ ಬೇರೆ ಕಡೆಗಳಿಂದ ಪ್ರಾಯೋಜಕರೂ ಮುಂದೆ ಬಂದು ತಾವೂ ಸಹಾಯ ಮಾಡೋದಾಗಿ ಹೇಳುತ್ತಿದ್ದಾರೆ. ಪ್ರಾಯೋಜಕರ ನೆರವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಆಹಾರ ನೀಡುವ ಗುರಿ ಈ ತಂಡದ್ದು ಆಗಿದೆ. ಈ ಮೂಲಕ ಈ ಪೊಲೀಸ್ ಜೋಡಿ ಸದ್ದು, ಸುದ್ದಿಯಿಲ್ಲದೆ ನೂರಾರು ಮಂದಿಯ ಹೊಟ್ಟೆ ತಣಿಸುವ ಕಾರ್ಯದಲ್ಲಿ ತೊಡಗಿದೆ.

Published by:HR Ramesh
First published: