• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 50 ಲಕ್ಷ ಮೌಲ್ಯದ 68 ಆ್ಯಪಲ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರ ಬಂಧಿಸಿದ ಮಂಗಳೂರು ಪೊಲೀಸರು

50 ಲಕ್ಷ ಮೌಲ್ಯದ 68 ಆ್ಯಪಲ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರ ಬಂಧಿಸಿದ ಮಂಗಳೂರು ಪೊಲೀಸರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶೋರೂಂ ಒಳಗಿರುವ ಸಿಸಿಟಿವಿ ಕ್ಯಾಮರ ಹಾರ್ಡ್ ಡಿಸ್ಕ್‌ನ್ನು ಸಹ ಈ ಚಾಲಾಕಿ ಕಳ್ಳರು ಕದ್ದೊಯ್ದಿದ್ದರು. ಕಳ್ಳತನ ಬಳಿಕ ಮಂಗಳೂರಿನಿಂದ ಉಡುಪಿಗೆ ಬಸ್ ಮೂಲಕ ತೆರಳಿ ಅಲ್ಲಿಂದ ಮತ್ತೆ ರೈಲಿನ ಮೂಲಕ ಮುಂಬೈಗೆ ವಾಪಸಾಗಿದ್ದರು.

  • Share this:

ಮಂಗಳೂರು: ಅದು  ಐಷಾರಾಮಿ ಮೊಬೈಲ್ ಶೋ ರೂಂ. ಆ ಶೋ ರೂಂನಲ್ಲಿ ಕಳೆದ ವಿಕೇಂಡ್ ಕರ್ಫ್ಯೂ ಟೈಮಲ್ಲಿ ಭಾರೀ ಪ್ರಮಾಣದ ಕಳ್ಳತನ ನಡೆದಿತ್ತು. ಇದೀಗ ಆ ಕಳ್ಳತನ ಪ್ರಕರಣ ಭೇದಿಸಿರುವ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಹೆಡೆಮುರಿ ಕಟ್ಟಿ ಸುಮಾರು 50 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೈ ಫೈ ಮೊಬೈಲ್ ಕಳ್ಳರು ಜೈಲು ಪಾಲಾಗಿದ್ದಾರೆ.


ಮಂಗಳೂರು ನಗರದ ಬಲ್ಮಠದಲ್ಲಿರುವ ಮೇಪಲ್-ಎಕ್ಸ್ ಮೊಬೈಲ್ ಶೋ ರೂಂನಲ್ಲಿ ಕಳೆದ ಜುಲೈ ತಿಂಗಳಲ್ಲಿ ಭಾರೀ ಪ್ರಮಾಣದ ಕಳ್ಳತನ ನಡೆದಿತ್ತು. ಆ ಸಮಯದಲ್ಲಿ ಮಂಗಳೂರಿನಲ್ಲಿ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿತ್ತು. ಇದೇ ಸಮಯವನ್ನು ಬಳಸಿಕೊಂಡು ಖದೀಮರು ಶೋ ರೂಂಗೆ ಖನ್ನ ಹಾಕಿದ್ದರು. ಅಂಗಡಿಯ ಹಿಂಬದಿಯ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ್ದ ಕಳ್ಳರು 54 ಲಕ್ಷ ಮೌಲ್ಯದ ಒಟ್ಟು 68 ಆ್ಯಪಲ್ ಐಫೋನ್ ಕಂಪೆನಿಯ ಮೊಬೈಲ್ ಫೋನ್‌ಗಳನ್ನು ಕದ್ದಿದ್ದರು. ಇದರ ಜೊತೆಗೆ 1 ಲಕ್ಷ 15 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದರು. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯಾಗಿದ್ದು ಸಿ.ಸಿ.ಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ರು. ಇದೀಗ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಉತ್ತರ ಪ್ರದೇಶ ಮೂಲದ ವಿನೋದ್ ಸಿಂಗ್ ಅಲಿಯಾಸ್ ವಿಜಯ್ ಶೆಟ್ಟಿ ಎಂಬುವನನ್ನು ಮುಂಬೈನಲ್ಲಿ ಬಂಧಿಸಿ 40 ಲಕ್ಷ ಮೌಲ್ಯದ 41 ಆ್ಯಪಲ್ ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.


ಈ ಕೃತ್ಯದಲ್ಲಿ ಇಬ್ಬರು ಭಾಗಿಯಾಗಿರುವುದು ಪೊಲೀಸರಿಗೆ ಮೆಲ್ನೋಟಕ್ಕೆ ಗೊತ್ತಾಗಿದೆ. ಸದ್ಯ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಾರಂಭದಲ್ಲಿ ಮುಂಬೈನಿಂದ ರೈಲಿನಲ್ಲಿ ಬಂದು ಮಂಗಳೂರಿನಲ್ಲಿ ಬಂದಿಳಿದಿದ್ದ ಇವರು ಕಳ್ಳತನ ನಡೆಸುವುದಕ್ಕೆ ಸರ್ವೇ ನಡೆಸಿದ್ದಾರೆ. ಕಳ್ಳತನ ನಡೆಸುವುದಕ್ಕೂ ಮೊದಲು ಈ ಮೊಬೈಲ್ ಶೋಂ ರೂಂ ಗೆ ಗ್ರಾಹಕರ ಸೋಗಿನಲ್ಲಿ ಬಂದು ಎಲ್ಲವನ್ನು ಪರಿಶೀಲನೆ ನಡೆಸಿ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಆ ಬಳಿಕ ವೀಕೆಂಡ್ ಕರ್ಫ್ಯೂ ಟೈಮಲ್ಲಿ ಅಂಗಡಿಗೆ ನುಗ್ಗಿ ಬೆಲೆ ಬಾಳುವ ಮೊಬೈಲ್ ನಗದು ದೋಚಿದ್ದಾರೆ. ಶೋರೂಂ ಒಳಗಿರುವ ಸಿಸಿಟಿವಿ ಕ್ಯಾಮರ ಹಾರ್ಡ್ ಡಿಸ್ಕ್‌ನ್ನು ಸಹ ಈ ಚಾಲಾಕಿ ಕಳ್ಳರು ಕದ್ದೊಯ್ದಿದ್ದರು. ಕಳ್ಳತನ ಬಳಿಕ ಮಂಗಳೂರಿನಿಂದ ಉಡುಪಿಗೆ ಬಸ್ ಮೂಲಕ ತೆರಳಿ ಅಲ್ಲಿಂದ ಮತ್ತೆ ರೈಲಿನ ಮೂಲಕ ಮುಂಬೈಗೆ ವಾಪಸಾಗಿದ್ದರು.


ಇದನ್ನು ಓದಿ: Independence day: ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿ ಯಾರು ಗೊತ್ತೆ?


ಬಂಧಿತ ಆರೋಪಿಯ ಮೇಲೆ ಮುಂಬೈನಲ್ಲಿ ಕಳ್ಳತನ ಪ್ರಕರಣ ಸೇರಿದಂತೆ 9 ಪ್ರಕರಣ ಇರುವುದು ಗೊತ್ತಾಗಿದೆ. ಸದ್ಯ ಇನ್ನೊಬ್ಬ ಆರೋಪಿಯ ಬಂಧನವಾಗಬೇಕಿದ್ದು 27 ಮೊಬೈಲ್ ಫೋನ್‌ಗಳು ಇನ್ನು ರಿಕವರಿ ಮಾಡೋದಕ್ಕೆ ಬಾಕಿಯಿದೆ.


ಒಟ್ಟಿನಲ್ಲಿ ಯಾವುದೇ ಸುಳಿವು ಸಿಗದಂತೆ ಕಳ್ಳತನ ನಡೆಸಿದ್ದ ಖದೀಮರನ್ನು ಸಿ.ಸಿ.ಬಿ ಪೊಲೀಸರು ಖೆಡ್ಡಾಕೆ ಉರುಳಿಸಿದ್ದು ಕಮೀಷನರ್ ಮೆಚ್ಚುಗೆ ಸೂಚಿಸಿದ್ದಾರೆ.ಆ್ಯಪಲ್ ಫೋನ್ ಗಳಿಗೆ ಕನ್ನ ಹಾಕಿ ಇಡೀ ಮಂಗಳೂರು ನಗರದ ಜನರನ್ನು ಬೆಚ್ಚಿ ಬೀಳಿಸಿದ್ದ ಆರೋಪಿಗಳು ಸದ್ಯ ಜೈಲಿನಲ್ಲಿ ಮುದ್ದೆ ಮರಿಯಬೇಕಾಗಿದೆ.

Published by:HR Ramesh
First published: