ಮಂಗಳೂರು: ಬೇಸಿಗೆ ತಾಪಮಾನ ದಿನದಿಂದ ಏರಿಕೆ ಆಗುತ್ತಿದೆ. ಮಳೆ ಸಾಧ್ಯತೆ ಕ್ಷೀಣಿಸುತ್ತಿದೆ. ಬೆಳಗ್ಗೆಯಿಂದಲೇ ಬಿಸಿಲ ಝಳಕ್ಕೆ (Summer 2023) ದಕ್ಷಿಣ ಕನ್ನಡ ಜಿಲ್ಲೆಯು (Dakshina Kannada News) ತತ್ತರಿಸಿ ಹೋಗುತ್ತಿದೆ. ಇನ್ನೊಂದೆಡೆ ಕುಡಿಯುವ ಜೀವಜಲಕ್ಕೆ ತತ್ವಾರ ಎದುರಾಗಿದೆ. ಅದರಲ್ಲೂ ಮಂಗಳೂರು ಮಹಾನಗರದ (Mangaluru City) ಜನತೆ ತುಂಬೆ ಡ್ಯಾಂ ನೀರು ಅವಲಂಬಿಸಿದ್ದು, ನೇತ್ರಾವತಿಗೆ ಕಟ್ಟಲಾದ ಡ್ಯಾಂನಲ್ಲೂ ನೀರು (Netravati River Dam) ಇಳಿಮುಖವಾಗುತ್ತಿದೆ.
ಒಳಹರಿವು ಕಡಿಮೆಯಾಗುತ್ತಿದ್ದು, ಜನ ಆತಂಕ ಪಡುವಂತಾಗಿದೆ. ಈ ಮಧ್ಯೆ 48 ಗಂಟೆಗಳ ಕಾಲ ನೀರು ಸ್ಥಗಿತಗೊಳಿಸುವುದಾಗಿ ಮಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.
ಯಾಕಾಗಿ ಪೂರೈಕೆ ವ್ಯತ್ಯಯ?
ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ HLPS- 2 -80MLD ತುಂಬೆ ರೇಚಕ ಸ್ಥಾವರದಲ್ಲಿರುವ 1200 ಎಂ.ಎಂ ವ್ಯಾಸದ ಕೊಳವೆ ದುರಸ್ಥಿ ಕಾಮಗಾರಿ ನಡೆಯಬೇಕಿದೆ.
ಇದನ್ನೂ ಓದಿ: Dakshina Kannada: ಫಸ್ಟ್ ಕ್ಲಾಸ್ನಲ್ಲಿ ಪಿಯುಸಿ ಪಾಸ್ ಆದ ಗ್ರಾಮ ಪಂಚಾಯತ್ ಅಧ್ಯಕ್ಷೆ!
ಜೊತೆಗೆ LLPS-1 ರಲ್ಲಿ ಪಂಪು ನಂಬರ್ 2 ಹೆಡರ್ ಬದಲಾವಣೆ ಕಾಮಗಾರಿ ಹಾಗೂ ಇತರ ಪೂರಕ ಕಾಮಗಾರಿಗಳ ನಿರ್ವಹಿಸಲು ಇರುವುದರಿಂದ ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಯಾವಾಗ? ಎಷ್ಟು ಹೊತ್ತು?
ದಿನಾಂಕ 27-04-2023 ಗುರುವಾರ ಬೆಳಿಗ್ಗೆ ಗಂಟೆ 6.00 ರಿಂದ 29-04-2023 ಶನಿವಾರ ಬೆಳಗ್ಗೆ 6.00 ಗಂಟೆಯವರೆಗೆ 48 ಗಂಟೆ ಅವಧಿಯಲ್ಲಿ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ಪೂರೈಕೆ ಸ್ಥಗಿತವಾಗಲಿದೆ.
ಇದನ್ನೂ ಓದಿ: Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್ಗೆ ಮೆಸೇಜ್ ಮಾಡಿ
ಹೀಗಾಗಿ ಸಾರ್ವಜನಿಕರು ಈ ಎರಡು ದಿನಗಳ ಕಾಲ ಸಹಕರಿಸುವಂತೆ ಮಹಾನಗರ ಪಾಲಿಕೆಯುವ ವಿನಂತಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ