• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Mangaluru News: ನಿರುಪಯುಕ್ತ ವಸ್ತುಗಳನ್ನು ಪಾಲಿಕೆಗೆ ಕೊಡಿ, ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಸೂಚನೆ

Mangaluru News: ನಿರುಪಯುಕ್ತ ವಸ್ತುಗಳನ್ನು ಪಾಲಿಕೆಗೆ ಕೊಡಿ, ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಸೂಚನೆ

ಮಂಗಳೂರು ಪಾಲಿಕೆ

ಮಂಗಳೂರು ಪಾಲಿಕೆ

ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ತೆರೆಯಲಾಗಿದೆ

 • Share this:

ಮಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ “ಸ್ವಚ್ಛ ಭಾರತ ಮಿಷನ್ ನಗರ 2.0” ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಅತ್ಯಂತ ಪರಿಣಾಮ ಬೀರುವ ಅಭಿಯಾನ ಆರಂಭಿಸಿದೆ. ಪರಿಸರವನ್ನು ರಕ್ಷಿಸುವ ಪ್ರಮುಖ ಉದ್ದೇಶದಿಂದ ‘’ನನ್ನ ಲೈಫ್ ನನ್ನ ಸ್ವಚ್ಛ ನಗರ ಯೋಜನೆ” ಕಾರ್ಯಕ್ರಮ ಹಮ್ಮಿಕೊಂಡಿದೆ. ಹೀಗಾಗಿ ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ (Mangaluru News) ವ್ಯಾಪ್ತಿಗಳಲ್ಲಿ ತೆರೆಯಲಾಗಿದೆ. ಸಾರ್ವಜನಿಕರು ನಿಗದಿತ ನಿರುಪಯುಕ್ತ ವಸ್ತುಗಳನ್ನು ನೀಡುವ ಮೂಲಕ ಈ ಮಹತ್ವದ ಕಾರ್ಯದಲ್ಲಿ ಕೈ ಜೋಡಿಸಬಹುದಾಗಿದೆ.


ಯಾವಾಗ ಕೊನೆ ದಿನ?
ನಿಗದಿತ ನಿರುಪಯುಕ್ತ ತ್ಯಾಜ್ಯ ವಸ್ತುಗಳನ್ನು ನೀಡಲು ಮಂಗಳೂರು ಮಹಾನಗರ ಪಾಲಿಕೆ ನಿಗದಿಪಡಿಸಿದ ಕೇಂದ್ರಗಳಲ್ಲಿ ನೀಡಬಹುದಾಗಿದೆ. ಇದಕ್ಕಾಗಿ ಮೇ 20ರಿಂದ ಜೂನ್ 5 ರವರೆಗೆ ಈ ಅವಕಾಶವಿದ್ದು, ನಗರದ ಹಲವೆಡೆ ಹಳೆ ವಸ್ತುಗಳನ್ನು ಮರು ಪಡೆಯುವ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಲಾಗಿದ್ದು, ಅಲ್ಲಿಗೆ ತೆರಳಿ ನೀಡಬಹುದಾಗಿದೆ.


ಇದನ್ನೂ ಓದಿ: Cobra Bikes In Mangaluru: ಬೀ ಅಲರ್ಟ್‌! ಈ ಬೈಕ್​ಗಳೇ ಟ್ರಾಫಿಕ್ ಸಮಸ್ಯೆಗೆ ರಾಮಬಾಣ
ಯಾವೆಲ್ಲ ವಸ್ತುಗಳನ್ನು ನೀಡಬಹುದು?
ಸಾರ್ವಜನಿಕರು ಈ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಹಳೆಯ ಆಟಿಕೆ ವಸ್ತುಗಳನ್ನು, ಬಳಸಿದ ಬಟ್ಟೆ ಹಾಗೂ ಚಪ್ಪಲಿಗಳು, ದಿನಪತ್ರಿಕೆಗಳನ್ನು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ ವಿವಿಧ ಬಗೆಯ ನವೀಕರಿಸಿ ಮರುಬಳಸಬಹುದಾದ ವಸ್ತುಗಳನ್ನು ಈ ಕೇಂದ್ರಗಳಿಗೆ ನೀಡಿ ಕಾರ್ಯಕ್ರಮದ ಉಪಯೋಗ ಪಡೆಯಬಹುದಾಗಿದೆ.


ಇದನ್ನೂ ಓದಿ: Mangaluru News: ಅಂಚೆ ಪಿಂಚಣಿ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ

top videos


  ಕೇಂದ್ರಗಳ ವಿವರ
  ನಿರುಪಯುಕ್ತ ವಸ್ತುಗಳನ್ನು ಮಂಗಳೂರು ಮಹಾನಗರ ಪಾಲಿಕೆಯು ಸಂಗ್ರಹಕ್ಕಾಗಿ ತೆರೆದಿರುವ ಸುರತ್ಕಲ್ ವಲಯ ಕಚೇರಿ, ಲಾಲ್ ಭಾಗ್‍ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡ ಹಾಗೂ ವೆಲೆನ್ಸಿಯಾ ವಾರ್ಡ್ ಕಚೇರಿ, ಕಾವೂರು ಮಾರುಕಟ್ಟೆ, ಹಂಪನಕಟ್ಟೆಯ ಕುದ್ಮಲ್ ರಂಗರಾವ್ ಪುರಭವನ ಹಾಗೂ ಸುರತ್ಕಲ್‍ನ ಮಾಧವನಗರ, ಬಜಾಲ್ ಹಾಗೂ ಕಾವೂರಿನ ಒಣ ತ್ಯಾಜ್ಯ ಸಂಗ್ರಹ ಕೇಂದ್ರ, ತಣ್ಣೀರುಬಾವಿ ಬೀಚ್‍ನಲ್ಲಿ ಮರು ಬಳಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

  First published: