• Home
  • »
  • News
  • »
  • state
  • »
  • Mangaluru Hulivesha: ಹುಲಿವೇಷ ನೋಡೋಕೆ ಬನ್ನಿ! ಇಲ್ಲಿದೆ ವಿವರ

Mangaluru Hulivesha: ಹುಲಿವೇಷ ನೋಡೋಕೆ ಬನ್ನಿ! ಇಲ್ಲಿದೆ ವಿವರ

ಹುಲಿವೇಷ

ಹುಲಿವೇಷ

Mangaluru: 5 ಸಾವಿರ ಮಂದಿ ಆಸೀನರಾಗುವ ಪ್ರೇಕ್ಷಕ ಗ್ಯಾಲರಿಯನ್ನು ಮೈದಾನದಲ್ಲಿ ಸಿದ್ಧಪಡಿಸಲಾಗಿದೆ.

  • Share this:

    ಮಂಗಳೂರು: ಮಂಗಳೂರಿನ ನೆಹರೂ ಮೈದಾನದಲ್ಲಿ ಹುಲಿಗಳ ದಂಡು! ನೀವೂ ಹುಲಿವೇಷ (Hulivesha) ನೋಡ್ಬೇಕಾ? ಹಾಗಾದ್ರೆ ಇಲ್ಲಿಗೆ ಬನ್ನಿ. ಹೀಗೆ ಮೈದಾನಕ್ಕೆ ಆಗಮಿಸೋ ನೂರಾರು ಹುಲಿಗಳನ್ನು ಜನರು ಹತ್ತಿರದಿಂದ ಕಂಡು ಮನರಂಜನೆಯನ್ನೂ ಪಡೆಯಬಹುದಾಗಿದೆ. ಇಂತಹ ಅವಕಾಶವನ್ನ ಮಂಗಳೂರಿನಲ್ಲಿ (Mangaluru Hulivesha)  ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಕಲ್ಪಿಸಿಕೊಟ್ಟಿದೆ. ಇದೇ ಮೊದಲ ಬಾರಿಗೆ ಪ್ರತಿಷ್ಠಾನವು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾರ್ಗದರ್ಶನದಲ್ಲಿ 'ಕುಡ್ಲದ ಪಿಲಿ ಪರ್ಬ - 2022' (ಮಂಗಳೂರು ಹುಲಿ ಹಬ್ಬ - 2022) ಆಯೋಜಿಸಿಕೊಂಡಿದೆ.


    ನವರಾತ್ರಿ ಹುಲಿ ರಂಗು
    ನವರಾತ್ರಿ ಸಮಯದಲ್ಲಿ ಕರಾವಳಿ ಭಾಗದಲ್ಲಿ ಹುಲಿ ಸಹಿತ ಹಲವು ವಿಧದ ವೇಷಗಳು ಕಾಣಸಿಗುವುದು ಮಾಮೂಲು. ಈಗಂತೂ ಹುಲಿವೇಷ ತಂಡವು ಪ್ರತಿಷ್ಠೆ ಪಡೆದುಕೊಂಡಿದ್ದು ಮನೋರಂಜನೆ ಜೊತೆಗೆ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದಿದೆ‌.


    ಇದನ್ನೂ ಓದಿ: Mangaluru Dasara: ಮಂಗಳೂರು ದಸರಾದಲ್ಲಿ ನವದುರ್ಗೆಯರ ಅವತಾರ ನೋಡಿ


    ಹೇಗಿರಲಿದೆ ಹುಲಿ ಸ್ಪರ್ಧೆ?
    ಅಕ್ಟೋಬರ್ 2 ರಂದು ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿರುವ ಹುಲಿ ವೇಷ ಸ್ಪರ್ಧೆ ಮಧ್ಯರಾತ್ರಿವರೆಗೂ ನಡೆಯಲಿದೆ. ತಲಾ ಪ್ರತಿಯೊಂದು ತಂಡಗಳಿಗೆ 20 ನಿಮಿಷಗಳ ಕಾಲ ಪ್ರದರ್ಶನ ನೀಡಲು ಅವಕಾಶವಿರುತ್ತದೆ.


    ಇದನ್ನೂ ಓದಿ: Vijayapura Gandhi: ವಿಜಯಪುರದಲ್ಲಿ ಗಾಂಧಿ! ಬಾಪು ಇಲ್ಲೇ ಇದ್ದಾರೆ ನೋಡಿ


    ಪ್ರೇಕ್ಷಕ ಗ್ಯಾಲರಿ
    ಈಗಾಗಲೇ ಹುಲಿವೇಷ ಸ್ಪರ್ಧೆ ಅನ್ನೋದು ಮಂಗಳೂರು‌ ನಗರದಲ್ಲಿ ಭಾರೀ ಜನಮನ್ನಣೆ ಪಡೆದಿದೆ. ಹಾಗಾಗಿ ಯುವಕ-ಯುವತಿಯರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಆದ್ದರಿಂದ 5 ಸಾವಿರ ಮಂದಿ ಆಸೀನರಾಗುವ ಪ್ರೇಕ್ಷಕ ಗ್ಯಾಲರಿಯನ್ನು ಮೈದಾನದಲ್ಲಿ ಸಿದ್ಧಪಡಿಸಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: