• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mangaluru Airport: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹೊಸ ಸೇವೆ ಆರಂಭ

Mangaluru Airport: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹೊಸ ಸೇವೆ ಆರಂಭ

ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು ವಿಮಾನ ನಿಲ್ದಾಣ

ಒಟ್ಟು 1891 ಚದರ ಮೀಟರ್‌ ನಷ್ಟು ವಿಸ್ತೀರ್ಣದ ಕಾರ್ಗೋ ಸಂಗ್ರಹಾಗಾರ ಕಟ್ಟಡದಲ್ಲಿ 9 ಸಾವಿರ ದೇಶೀಯ ಮತ್ತು ಅಂತರಾಷ್ಟ್ರೀಯ ಸರಕುಗಳಿಗೆ ಅಗತ್ಯವಿರುವ ವ್ಯವಸ್ಥೆಯಿದೆ.

  • News18 Kannada
  • 5-MIN READ
  • Last Updated :
  • Mangalore, India
  • Share this:

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Mangaluru Airport) ಸರಕು ಸೇವೆಗಳಿಗೆ ತನ್ನನ್ನು ತಾನು ತೆರೆದುಕೊಂಡಿದ್ದು, ದೇಶದ ವಿವಿಧ ಭಾಗಗಳು ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳು ಈಗ ಇನ್ನಷ್ಟು ಹತ್ತಿರವಾಗಲಿದೆ. ಮೇ 1 ರಿಂದ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ ಕಟ್ಟಡವು ಸಾರ್ವಜನಿಕ ಬಳಕೆಗೆ ಮುಕ್ತವಾಗಿದ್ದು, ಜನರು ಇದರಿಂದ ಹಲವು ಲಾಭಗಳನ್ನು ಗಳಿಸಬಹುದಾಗಿದೆ.


ದೇಶಿ ಮತ್ತು ವಿದೇಶಿ ವಿಭಾಗಗಳು
ಟರ್ಮಿನಲ್​ನಲ್ಲಿ ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಅದರಲ್ಲಿ ಒಂದು ದೇಶೀಯ ಸರಕು ಹಾಗೂ ಇನ್ನೊಂದು ಅಂತರಾಷ್ಟ್ರೀಯ ಸರಕು ಸಾಗಾಟ ಸೇವೆಗಳಿಗಾಗಿ ಮೀಸಲಿರಿಸಲಾಗಿದೆ.




ಒಟ್ಟು 1891 ಚದರ ಮೀಟರ್​ನಷ್ಟು ವಿಸ್ತೀರ್ಣದ ಕಾರ್ಗೋ ಸಂಗ್ರಹಾಗಾರ ಕಟ್ಟಡದಲ್ಲಿ 9 ಸಾವಿರ ದೇಶೀಯ ಮತ್ತು ಅಂತರಾಷ್ಟ್ರೀಯ ಸರಕುಗಳಿಗೆ ಅಗತ್ಯವಿರುವ ವ್ಯವಸ್ಥೆಯಿದೆ. ಆರಂಭದಲ್ಲಿ ದೇಶೀಯ ಒಳಬರುವ ಹಾಗೂ ಹೊರಹೋಗುವ ಸರಕುಗಳನ್ನು ಈ ಕಾರ್ಗೋ ಟರ್ಮಿನಲ್‌ ನಿರ್ವಹಿಸಲಿದೆ.


ಇದನ್ನೂ ಓದಿ: Water Rationing In Mangaluru: ಮಂಗಳೂರು ನಗರಕ್ಕೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ




ಹೇಗಿದೆ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌?
ಕಾರ್ಗೋ ಟರ್ಮಿನಲ್‌ ಹೊರಗಡೆ ವಿಶಾಲ ಪಾರ್ಕಿಂಗ್‌, 10 ಟ್ರಕ್‌ ಬೇಗಳು, ಎರಡು ಡಾಕ್‌ ಲೆವೆಲರ್​ಗಳು, ಲಿಫ್ಟ್‌, ಸಿಸಿಟಿವಿ, ಕೋಲ್ಡ್‌ ಸ್ಟೋರೇಜ್‌, ಎರಡು ಡಾಕ್‌ ಲೆವೆಲರ್‌, ಸ್ಟೋರೇಜ್‌ ರೂಂ, ಕೋಲ್ಡ್‌ ರೂಂ ಮುಂತಾದವುಗಳನ್ನು ಹೊಂದಿರುತ್ತವೆ.


ಕಾರ್ಗೋ ಟರ್ಮಿನಲ್‌ ನಿಂದ ಲಾಭವೇನು?
ಕಾರ್ಗೋ ಟರ್ಮಿನಲ್‌ ನೇರವಾಗಿ ಸರಕು ಸಾಗಾಟ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತವೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನ ಹೊಂದಿರುವುದು ಇದರ ಕಾರ್ಯದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ.




ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್​ಪ್ರೆಸ್​ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!

top videos


    ಅಂತರಾಷ್ಟ್ರೀಯ ಕಾರ್ಗೋ ಮೂಲಕ ಹಣ್ಣು, ತರಕಾರಿಗಳು, ಆಹಾರ ಪದಾರ್ಥ, ಶೀತಲೀಕರಿಸಿದ ಮೀನುಗಳು, ಬಿಡಿಭಾಗಗಳು ಮತ್ತು ಜವಳಿಗಳ ಸಾಗಾಟ ನಿರ್ವಹಿಸಿದರೆ, ದೇಶೀಯ ಕಾರ್ಗೋದಲ್ಲಿ ಕೋರಿಯರ್‌, ಅಂಚೆ ಕಚೇರಿ, ಆಭರಣಗಳು, ಮೆಡಿಕಲ್‌ ಉದ್ದೇಶಿತ ರಕ್ತದ ಮಾದರಿ, ದಾಖಲೆ ಮತ್ತು ಇ ಕಾಮರ್ಸ್‌ ವಸ್ತುಗಳನ್ನು ನಿರ್ವಹಿಸಲಿದೆ.

    First published: