HOME » NEWS » State » MANGALORE MANGALORE YOUTUBER RECREATE RAKSHIT SHETTY 777 CHARLIE MOVIE TEASER KKM SESR

777ಚಾರ್ಲಿ ಟೀಸರ್​ಗೆ ಸೆಡ್ಡು ಹೊಡೆದ ಯೂಟ್ಯೂಬರ್​; ರಕ್ಷಿತ್​ ಶೆಟ್ಟಿಯೇ ಫಿದಾ ಆದ್ರೂ ಇವನಿಗೆ

ಉಡುಪಿಯ ಕಾಪುವಿನ ಫೋಟೋಗ್ರಾಫರ್ ಆಗಿರುವ ಸಚಿನ್ ಶೆಟ್ಟಿ ತನ್ನ ಮುದ್ದಿನ ನಾಯಿ  ಚೊಂಟವನ್ನು ಬಳಸಿ ಅದ್ಭುತವಾಗಿ ಚಿತ್ರೀಕರಣ ಮಾಡಿ,ಸತಃ ಎಡಿಟಿಂಗ್ ಮಾಡಿದ್ದ

news18-kannada
Updated:June 10, 2021, 6:21 AM IST
777ಚಾರ್ಲಿ ಟೀಸರ್​ಗೆ ಸೆಡ್ಡು ಹೊಡೆದ ಯೂಟ್ಯೂಬರ್​; ರಕ್ಷಿತ್​ ಶೆಟ್ಟಿಯೇ ಫಿದಾ ಆದ್ರೂ ಇವನಿಗೆ
777ಚಾರ್ಲಿ ಟೀಸರ್​ಗೆ ಸೆಡ್ಡು ಹೊಡೆದ ಯೂಟ್ಯೂಬರ್
  • Share this:
ಕನ್ನಡದ ಬಹು ನಿರೀಕ್ಷಿತ ಚಲನಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮುದ್ದು ನಾಯಿಯನ್ನೇ ಇಡೀ ಟೀಸರ್ ಶೇ‌ 80ರಷ್ಟು ತೋರಿಸಿದ ರಕ್ಷಿತ್ ಶೆಟ್ಟಿಯ ಕಲಾ ಚಾತುರ್ಯತೆಗೆ ಲಕ್ಷಾಂತರ ಜನ ಸಿನಿರಸಿಕರು ಫಿದಾ ಆಗಿದ್ದಾರೆ. ಎರಡು ದಿನದಲ್ಲಿ ಟೀಸರ್ ನ್ನು ಯೂಟ್ಯೂಬ್ ನಲ್ಲಿ 50 ಲಕ್ಷ ವೀವ್ಸ್ ಆಗಿದ್ದು , ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅದ್ಬುತವಾದ ಹಾಡು, ನಾಯಿಯ ತುಂಟಾಟ, ಓಡಾಟವೆಲ್ಲವೂ ಟೀಸರ್ ನಲ್ಲಿ ಅಷ್ಟೇ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು. ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.‘ ಚಾರ್ಲಿ‌ 777 ನ ಟೀಸರ್ ನ್ನೆ ಆಧರಿಸಿ ಕರಾವಳಿಯ ಹೆಸರಾಂತ ಯೂಟ್ಯೂಬರ್ ರೊಬ್ಬರು ವಿಡಿಯೋ ಮಾಡಿದ್ದಾರೆ. ಒರಿಜಿನಲ್ ಟೀಸರ್ ತರವೇ ತಮ್ಮ ನಾಯಿಯನ್ನು ಬಳಸಿ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಾಕಿದ್ದು,ಈ ಪ್ರಯತ್ನಕ್ಕೆ ಸ್ವತಃ ರಕ್ಷಿತ್ ಶೆಟ್ಟಿಯವರೇ ಟ್ವಿಟ್ಟರ್ ನಲ್ಲಿ ಯೂಟ್ಯೂಬ್ ಲಿಂಕ್ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಕಾಪುವಿನ ಫೋಟೋಗ್ರಾಫರ್ ಆಗಿರುವ ಸಚಿನ್ ಶೆಟ್ಟಿ ತನ್ನ ಮುದ್ದಿನ ನಾಯಿ  'ಚೊಂಟ'ವನ್ನು ಬಳಸಿ ಅದ್ಭುತವಾಗಿ ಚಿತ್ರೀಕರಣ ಮಾಡಿ, ಸ್ವತಃ ಎಡಿಟಿಂಗ್ ಮಾಡಿದ್ದಾರೆ. ಗದ್ದೆ, ತೋಟ, ನೀರಿನ ಹಳ್ಳ, ಹೀಗೆ ತನ್ನೂರಿನ ಸುತ್ತಾ-ಮುತ್ತಲಿನಲ್ಲೇ  ಚಿತ್ರೀಕರಣ ಮಾಡಿದ್ದಾರೆ. ಸಿನಿಮಾಟೋಗ್ರಾಫಿಯಲ್ಲೂ ಪರಿಣತಿ ಹೊಂದಿರುವ ಸಚಿನ್ ಶೆಟ್ಟಿ, ಅದ್ಭುತ ಪ್ರಯತ್ನದಿಂದ ಮೂಲ ಟೀಸರ್ ನಂತೆಯೇ ವಿಡಿಯೋ ಮೂಡಿ ಬಂದಿದ್ದ, ಟೀಸರ್ ಕೊನೆಗೆ ನಟ ರಕ್ಷಿತ್ ಶೆಟ್ಟಿಯವರ ರೀತಿಯೇ ಮುಖಭಾವ ಹೊಂದಿರುವ ಸ್ನೇಹಿತನನ್ನು ಬಳಸಿ ಟೀಸರ್ ಗೆ ನವೀನಸ್ಪರ್ಶ ನೀಡಿದ್ದಾರೆ. ಅಲ್ಲದೇ ಇಡೀ ವಿಡಿಯೋ ಉದ್ದಕ್ಕೂ ಚಾರ್ಲಿ777 ಹಾಡನ್ನೇ ಬಳಸಿ ಅದ್ಭುತವಾಗಿ ಸಂಕಲನ ಮಾಡಿದ್ದಾರೆ.

ಇದನ್ನು ಓದಿ: ಎರಡೇ ವರ್ಷದಲ್ಲಿ ಟಿಎಂಸಿ ಸ್ಟಾರ್​​ ಸಂಸದೆ ಮದುವೆಯಲ್ಲಿ ಬಿರುಕು; ಅಸಲಿ ಕಾರಣವೇನು?

ಸಚಿನ್ ಶೆಟ್ಟಿ 'ಶಟರ್ ಬಾಕ್ಸ್ ಫಿಲಂಸ್' ಎಂಬ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದು, 85ಸಾವಿರಕ್ಕೂ ಹೆಚ್ಚು ಸಬ್ ಸ್ಕ್ರೈಬರ್ ಗಳನ್ನು ಹೊಂದಿದ್ದಾರೆ. ಅಲ್ಲದೇ ಹವ್ಯಾಸಿ ಬೈಕ್ ರೈಡರ್ ಕೂಡಾ ಆಗಿದ್ದು, ಭಾರತಾದ್ಯಂತ ಬೈಕ್ ನಲ್ಲೇ ಸುತ್ತಿ ಪ್ರಸಿದ್ಧಿಗಳಿಸಿದ್ದಾರೆ. ತುಳುನಾಡಿನ ವಿವಿಧ ಆಚರಣೆ,ಜಾನಪದ ಕ್ರೀಡೆ,ಮೀನುಗಾರಿಕೆ ಸೇರಿದಂತೆ ವಿವಿಧ ಪ್ರಕಾರಗಳನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಚುರ ಪಡಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಿಗೆ ಬೈಕ್ ನಲ್ಲೇ ತೆರಳಿ ಅಲ್ಲಿನ ಕಲೆ-ಸಂಸ್ಕೃತಿ- ಆಹಾರ-ವೈವಿಧ್ಯತೆಯನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬಿತ್ತರಿಸಿ ಪ್ರಸಿದ್ಧಿಪಡೆದಿದ್ದಾರೆ...
ಚಾರ್ಲಿ777 ನ ಟೀಸರ್ ವಿಡಿಯೋವನ್ನು ಒಂದು ಲಕ್ಷಕ್ಕಿಂತ ಹೆಚ್ಚು ಜನ ವೀಕ್ಷಣೆ ಮಾಡಿದ್ದು,ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸ್ವತಃ ನಟ ರಕ್ಷಿತ್ ಶೆಟ್ಟಿಯವರೇ ಮೆಚ್ಚುಗೆ ವ್ಯಕ್ತಪಡಿಸಿ ಯೂಟ್ಯೂಬ್ ವಿಡಿಯೋ ಲಿಂಕ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು,ಪ್ರಯತ್ನಕ್ಕೆ ಶಹಬ್ಬಾಸ್ ಅಂದಿದ್ದಾರೆ.

Youtube Video




ಅಲ್ಲದೇ ಚಾರ್ಲಿ777 ಚಲನಚಿತ್ರದ ನಿರ್ದೇಶಕರಾದ ಕಿರಣ್ ರಾಜ್ ಕೂಡಾ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತ..ಈ ವಿಡಿಯೋ ನನ್ನ ಮುಖದಲ್ಲಿ ಸಂತೋಷದ ನಗು ಮೂಡಿಸಿದೆ. ಗೌರವಿಸಬೇಕಾದ ಶ್ರಮ ಇದಾಗಿದೆ ಎಂದು  ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿನ್ ಶೆಟ್ಟಿಯ ಚಾರ್ಲಿ ವಿಡಿಯೋ ವನ್ನು ಒಂದು ಲಕ್ಷಕ್ಕೂ ಅಧಿಕ ವೀವ್ಸ್ ಆಗಿದ್ದು, ಮೂಲ ವಿಡಿಯೋ ಗೂ ಈ ವಿಡಿಯೋ ಗೂ ಯಾವುದೇ ವ್ಯತಾಸ್ಯಗಳಿಲ್ಲ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೊಂಟನ ತುಂಟಾಟ,ಅದ್ಭುತವಾದ ವಿಡಿಯೋಗ್ರಾಫಿ,ಸಂಕಲನವೆಲ್ಲವೂ ಅತ್ಯುತ್ತಮವಾಗಿ ಮೂಡಿ ಬಂದಿದೆ ಅಂತಾ ಜನರು ಮೆಚ್ಚುಗೆ ಸೂಚಿಸಿದ್ದಾರೆ.https://youtu.be/4NZVtXOaZzA

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 10, 2021, 6:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories