Mangalore: ಪ್ರವಾಹದಿಂದ ಮನೆಯನ್ನು ರಕ್ಷಿಸಲು ಮಾಡಿರುವ ಮಾಸ್ಟರ್ ಪ್ಲ್ಯಾನ್ ಇಲ್ಲಿದೆ ನೋಡಿ..

ಮಳೆ ಅವಾಂತರಗಳಿಂದ ಎದುರಾಗುವ ಸಮಸ್ಯೆಗಳಿಗೆ ಸ್ಥಳೀಯರೊಬ್ಬರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ನೆಲ ಮಟ್ಟದಿಂದ ಮನೆಯನ್ನು ಸುಮಾರು 3 ಅಡಿಗಳಷ್ಟು ಎತ್ತರಿಸಿದ್ದಾರೆ.

ಮನೆಯ ಕಾಮಗಾರಿ

ಮನೆಯ ಕಾಮಗಾರಿ

  • Share this:
    ಮಂಗಳೂರು: ಜಿಲ್ಲೆಯಲ್ಲಿ ಭಾರೀ ಮಳೆ (Heavy Rainfall) ಬಂದ್ರೆ ಸಾಕು ಕಡಲಂಚಿನ ಜನ ಪ್ರವಾಹದ (Flood) ಭೀತಿಯಿಂದ ಕಾಲ ಕಳೆಯುತ್ತಾರೆ. ಈಗಾಗ್ಲೇ ಮಂಗಳೂರಲ್ಲಿ (Mangalore) ಮಳೆಯ ಅಬ್ಬರದಿಂದಾಗಿ ಹಲವು ಭಾರಿ ಪ್ರವಾಹ ಎದುರಾಗಿ ಜನ ಭೀಕರ ನಷ್ಟ ಅನುಭವಿಸಿದ್ದಾರೆ. ಅದೆಷ್ಟೋ ಮನೆಗಳು, ವಾಹನಗಳು, ವಸ್ತುಗಳು ನೀರಲ್ಲಿ ಕೊಚ್ಚಿ ಹೋಗಿವೆ. ವರುಣನ ಅಬ್ಬರಕ್ಕೆ ಮನೆಗಳು ಕುಸಿದು ಬಿದ್ದಿವೆ, ಮನೆಗಳಿಗೆ ನೀರು ನುಗ್ಗಿ ಪರದಾಡಿದ್ದಾರೆ. ಹೀಗೆ ಮನೆ ಕಳೆದು ಕೊಂಡವರ ಪರಿಸ್ಥಿತಿಯಂತೂ ಹೇಳತೀರದು. ಮಳೆ ಅವಾಂತರಗಳಿಂದ ಎದುರಾಗುವ ಈ ಸಮಸ್ಯೆಗಳಿಗೆ ಸ್ಥಳೀಯರೊಬ್ಬರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ನೆಲ ಮಟ್ಟದಿಂದ ಮನೆಯನ್ನು ಸುಮಾರು 3 ಅಡಿಗಳಷ್ಟು ಎತ್ತರಿಸಿದ್ದಾರೆ.

    ಮನೆಯನ್ನು ಎತ್ತರಕ್ಕೆ ಏರಿಸಿದ್ದು ಹೇಗೆ? 

    ಕಡಲ ನಗರಿ ಮಂಗಳೂರಿನಲ್ಲಿ ಭಾರಿ ಮಳೆ ಬಂದ್ರೆ ಸಾಕು ಅಕ್ಷರಶ ನಡುಗಿ ಹೋಗುತ್ತದೆ. ಕಡಲಂಚಿನ ಮನೆಗಳಂತೂ ವರುಣನ ಅಬ್ಬರಕ್ಕೆ ಎಷ್ಟೋ ಭಾರಿ ಜಖಂ ಆಗಿ ಬಿಟ್ಟಿವೆ. ಹೀಗಾಗಿ ಮಂಗಳೂರಲ್ಲಿ ಪ್ರವಾಹದಿಂದ ಮನೆ ಕಾಪಾಡಲು ಸ್ಥಳೀಯರೊಬ್ಬರು 200 ಜಾಕ್‌ಗಳನ್ನೂ ಬಳಸಿಕೊಂಡು ನೆಲದಿಂದ 3 ಅಡಿ ಮನೆ ಎತ್ತರಿಸಿದ್ದಾರೆ. ಮಳೆಗಾಲದಲ್ಲಿ ಸುರಿಯುವ ಭಾರಿ ಮಳೆಗೆ ಮಂಗಳೂರಿನ ಕೆಲವು ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತವೆ. ಕೊಟ್ಟಾರ ಚೌಕಿ, ಮಾಲೇಮಾರ್, ಮಾಲಾಡಿ ಸೇರಿ ಸುತ್ತ ಮುತ್ತ ಊರುಗಳಲ್ಲಿ ಪ್ರವಾಹ ಕಟ್ಟಿಟ್ಟ ಬುತ್ತಿ. ಪ್ರವಾಹದ ಭೀಕರತೆಗೆ ಮನೆಗಳು ಕೊಚ್ಚಿ ಹೋಗುತ್ತವೆ, ಮನೆಗಳಿಗೆ ನೀರು ತುಂಬಿ ಹೋಗುತ್ತದೆ. ಅಲ್ಲದೆ ಮಳೆ ನೀರಿನ ಜೊತೆ ಕೆಸರು, ಹಾವು, ಹುಳ, ಹುಪ್ಪಟ್ಟೆಗಳು ಕೂಡ ಮನೆ ಸೇರಿ ಕೊಳ್ಳುತ್ತವೆ. ಹೀಗೆ ಇನ್ನಿಲ್ಲದ ಕಷ್ಟ ಅನುಭವಿಸುವಂತಾಗುತ್ತದೆ.

    ಇದನ್ನೂ ಓದಿ: Kodagu: ಮಾಂತ್ರಿಕರ ಮಾತು ಕೇಳಿ ನಿಧಿಗಾಗಿ ಮನೆಯನ್ನೆಲ್ಲಾ ಅಗೆದ ಯುವಕ.. ಆದರೆ ಸಿಕ್ಕಿದ್ದು ಇದೇ ನೋಡಿ..

    ಪ್ರವಾಹ ಮನೆಗೆ ನುಗ್ಗದಂತೆ ಮಾಸ್ಟರ್​ ಪ್ಲಾನ್​

    ಇದಕ್ಕೆಲ್ಲ ಸುರೇಶ್ ಎಂಬುವರು 200 ಜಾಕ್ ಉಪಯೋಗಿಸಿಕೊಂಡು 1,000 ಚದರಡಿಯಷ್ಟು (sqft ) ಮನೆಯನ್ನು ನೆಲ ಬಿಟ್ಟು ಎತ್ತರಿಸಿದ್ದಾರೆ. ಇದರಿಂದಾಗಿ ಮಳೆನೀರು ಮನೆಯೊಳಗೆ ನುಗ್ಗುವುದನ್ನು ಹಾಗು ಮನೆಗಳು ಕೊಚ್ಚಿ ಹೋಗದಂತೆ ಆನೆಬಲ ನೀಡುತ್ತದೆ ಎಂದು ಸುರೇಶ್ ಹೇಳಿದ್ದಾರೆ. ಈ ಕಾಮಗಾರಿಯನ್ನು ಉತ್ತರ ಪ್ರದೇಶ ಮೂಲದ ಕಂಪನಿಯೊಂದು ನಿರ್ವಹಿಸುತ್ತಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಸುರೇಶ್ ಹೇಳಿದ್ದಾರೆ. ಎಲಿವೇಟ್ ಒದಗಿಸಿ ಮನೆಯನ್ನು ಮೂರು ಅಡಿಗಳಷ್ಟು ಮೇಲಕ್ಕೆತ್ತಲಾಗಿದೆ. ಕಳೆದ ವರ್ಷದಿಂದ ಅಂದರೆ 2021 ಡಿಸೆಂಬರ್ 9ರಂದು ಕಾಮಗಾರಿ ಆರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ. ಮನೆ ಕೆಲಸ ಗುತ್ತಿಗೆ ಹಿಡಿದ ಗುತ್ತಿಗೆದಾರರು ಮನೆ ಗೋಡೆ, ವಸ್ತುಗಳು, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗದಂತೆ ಕಾಮಗಾರಿ ಮುಗಿಸಿದ್ದಾರೆ.

    ಚದರಡಿಗೆ 250 ರೂಪಾಯಿ ವೆಚ್ಚ

    ಸುರೇಶ್ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು ಪ್ರವಾಹದಿಂದ ಆಗುವ ತೊಂದರೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. 12 ಕೆಲಸಗಾರರು ಪ್ರತಿ ನಿತ್ಯ ಕೆಲಸ ಮಾಡಿದ್ದಾರೆ. ಇದಕ್ಕೆ ಚದರಡಿಗೆ 250 ರೂಪಾಯಿಗಳನ್ನು ತೆಗೆದುಕೊಂಡಿದ್ದು, ಸದ್ಯ ಕಾಮಗಾರಿಯು ಮುಕ್ತಾಯದ ಹಂತಕ್ಕೆ ತಲುಪಿದೆ.ಬ್ಯಾಂಕ್ ನಿವೃತ್ತ ಅಧಿಕಾರಿ ಸುರೇಶ್ ಅವರು ಸುಮಾರು 20 ವರ್ಷಗಳ ಹಿಂದೆ ತಮ್ಮ ಈ ಮನೆಯನ್ನು ಕಟ್ಟಿದ್ದರು. ಮಳೆ ಬಂದಾಗೆಲ್ಲ ನಾವು ಕಷ್ಟ ಪಡುತ್ತಿದ್ದೆವು. ಅಂಡರ್‌ಗ್ರೌಂಡ್ ಡ್ರೈನೇಜ್‌ನ ಕೊಳಚೆ ನೀರು ಕೂಡ ಮನೆಗಳಿಗೆ ಬರುತ್ತಿತ್ತು. ಚರಂಡಿಗಳಲ್ಲಿ ಮಳೆ ನೀರಿನ ಕೆಸರು ಸಂಗ್ರಹವಾಗುವುದರಿಂದ ಮಳೆ ನೀರು ಬೇಗ ಮನೆಯೊಳಗೆ ನುಗ್ಗುತ್ತಿತ್ತು ಎಂದಿದ್ದಾರೆ.

    ಇದನ್ನೂ ಓದಿ: Puttur: ಪುತ್ತೂರಿನಲ್ಲಿ ಕೈಗಾರಿಕಾ ಕಾರಿಡಾರ್ ರಚನೆಗೆ ಸಿದ್ಧತೆ; 100 ಎಕರೆಯಲ್ಲಿ ತಲೆ ಎತ್ತಲಿದೆ ಯೋಜನೆ

    ಒಳ ಚರಂಡಿಗಳನ್ನು ಸರಿಯಾದ ರೀತಿಯಲ್ಲಿ ರಚಿಸಿಲ್ಲ ಎಂದು ಸರ್ಕಾರದ ಚರಂಡಿ, ಮೇಲ್ಸೇತುವೆ ನಿರ್ಮಾಣದ ಕಳಪೆ ಕಾರ್ಯದ ಬಗ್ಗೆಯೂ ಆರೋಪಿಸಿದರು. ಸುರೇಶ್ ಅವರ ಈ ಪ್ಲ್ಯಾನ್ ಮಳೆಗಾಲದಲ್ಲಿ ಯಶಸ್ಸು ಪಡೆದರೆ ಮುಂದಿನ ದಿನಗಳಲ್ಲಿ ಕಡಲಂಚಿನಲ್ಲಿರುವ ಅನೇಕರು ಈ ರೀತಿಯಾಗಿ ಮನೆಗಳನ್ನು ನಿರ್ಮಿಸಿಕೊಳ್ಳಬಹುದು.
    Published by:Kavya V
    First published: