Mangaluru Collages: ಮಂಗಳೂರಿನ ಈ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹೊಸ ಹೊಸ ಕೋರ್ಸ್ ಶುರು!

Mangaluru News: ರಾಜ್ಯದಲ್ಲಿಯೇ ಮೊದಲನೆಯದಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದ ಮಂಗಳೂರು ವಿಶ್ವ ವಿದ್ಯಾಲಯವು ಇದೀಗ ಹಲವು ಕೋರ್ಸ್​ಗಳ ಆರಂಭಕ್ಕೆ ಅಸ್ತು ಎಂದಿದೆ. ಅದರಂತೆ ಹಲವು ಖಾಸಗಿ ಕಾಲೇಜುಗಳು, ಯುಜಿ ಹಾಗೂ ಪಿಜಿ ಪದವಿಗಳ ಮೂಲಕ ವೃತ್ತಿಪರ ಕೋರ್ಸ್​ಗಳನ್ನು ಕಲಿಸಲು ಮುಂದಾಗಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಮಂಗಳೂರು: ಕೇಂದ್ರ ಸರಕಾರದ ಮಹತ್ವದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ (Mangalore University) ಹಲವು ಕಾಲೇಜುಗಳಲ್ಲಿ ವಿವಿಧ ಕೋರ್ಸ್​ಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಈ ವರ್ಷದ ಶೈಕ್ಷಣಿಕ ಆರಂಭದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ವೃತ್ತಿಪರ ಕೋರ್ಸ್​ಗಳಿಗೆ ಹೆಚ್ಚಿನ ಆದ್ಯತೆ ನೀಡಲು ಕಡಲತಡಿಯ ಖಾಸಗಿ ಕಾಲೇಜುಗಳು ಮುಂದಾಗಿವೆ. ಮಂಗಳೂರು ನಗರದ (Mangaluru News) ಕೆಲವು ಕಾಲೇಜುಗಳು ಈ ಶೈಕ್ಷಣಿಕ ವರ್ಷಾರಂಭದಿಂದಲೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳಲ್ಲಿ ಹೆಚ್ಚುವರಿ ಕೋರ್ಸ್​ಗಳನ್ನು​ (New Courses Under NEP)  ಅಳವಡಿಸಿಕೊಳ್ಳಲು ನಿರ್ಧರಿಸಿವೆ. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ವೃತ್ತಿಪರ ತರಬೇತಿ, ಉದ್ಯೋಗಾವಕಾಶ ಹೀಗೆ ಹಲವು ಉದ್ದೇಶಗಳ ಅಡಿಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಕೋರ್ಸ್​ಳನ್ನು ಅಳವಡಿಸಿಕೊಳ್ಳುತ್ತಿದೆ.

    ಸಂತ ಆಗ್ನೆಸ್ ಕಾಲೇಜಿನಲ್ಲಿವೆ ಈ ಕೋರ್ಸ್​ಗಳು
    ಬಿಎ : ಈ ಶೈಕ್ಷಣಿಕ ವರ್ಷದಿಂದ ಬಿಎ ಪದವಿ ಜೊತೆಗೆ ಅನಿಮೇಶನ್, ನ್ಯೂಟ್ರಿಶನ್ ಹಾಗೂ ಹೆಲ್ತ್ ಸೈನ್ಸ್ ವಿಷಯಗಳನ್ನು ಹೊಸದಾಗಿ ಪರಿಚಯಿಸುತ್ತಿದೆ.

    ಬಿಎಸ್​ಸಿ : ಬಿಎಸ್​ಸಿ ಕೋರ್ಸ್ ಮೂಲಕವೂ ಅನಿಮೇಶನ್, ನ್ಯೂಟ್ರಿಶನ್ ಹಾಗೂ ಹೆಲ್ತ್ ಸೈನ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

    ಸರ್ಟಿಫಿಕೇಟ್ ಕೋರ್ಸ್ : ಸರ್ಟಿಫಿಕೇಟ್ ಕೋರ್ಸ್ ಮೂಲಕ ಏವಿಯೇಶನ್, ಲಾಜಿಸ್ಟಿಕ್ಸ್, ಸಪ್ಲೈ ಚೈನ್ ಮ್ಯಾನೇಜ್ ಮೆಂಟ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್ ಕೋರ್ಸ್ ಗಳನ್ನು ಕಲಿಯಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ
    ಯುಜಿ ವಿಭಾಗ : 0824-2218414
    ಪಿಜಿ ವಿಭಾಗ: 0824-2213794

    ಉಳ್ಳಾಲದ ಮೆರಿಡಿಯನ್ ಕಾಲೇಜು
    ಮಂಗಳೂರು ನಗರದ ಹೊರವಲಯದ ಉಳ್ಳಾಲದಲ್ಲಿರುವ ಮೆರಿಡಿಯನ್ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷಾರಂಭದಿಂದ ಹೊಸದಾಗಿ ಡಾಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್ ಗಳನ್ನು ಪರಿಚಯಿಸುತ್ತಿದೆ.

    ಹೆಚ್ಚಿನ ಮಾಹಿತಿಗಾಗಿ
    ದೂರವಾಣಿ : 0824-2463674/75/76
    ಮೊಬೈಲ್: 9060773557, 9480064864

    ಸಂತ ಅಲೋಶಿಯಸ್ ಕಾಲೇಜಿನಲ್ಲೂ ಹೊಸ ಪ್ರಯೋಗ
    ಮಂಗಳೂರು ನಗರ ಹಾಗೂ ಉಳ್ಳಾಲದ ಕೋಟೆಕಾರ್ ಬಳಿ ಕಾಲೇಜುಗಳನ್ನು ಹೊಂದಿರುವ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲೂ ಹಲವು ಕೋರ್ಸ್ ಗಳನ್ನು ಪರಿಚಯಿಸುತ್ತಿದೆ. ಹೀಗಾಗಿ ಕಾಲೇಜು ತರಗತಿಗಳನ್ನು ಬೆಳಿಗ್ಗೆ 7 ರಿಂದ ಆರಂಭಿಸಲಿದೆ. ಈ ಸಮಯದಲ್ಲಿ ವಿವಿಧ ಕೋರ್ಸ್ ಗಳು ಹಾಗೂ ಸಾಮಾನ್ಯ ಅವಧಿಯಲ್ಲಿ ಕಾಲೇಜು ತರಗತಿಗಳ ಜೊತೆಗೆ, ಸಾಯಂಕಾಲ ಅವಧಿಯಲ್ಲೂ ಕೋರ್ಸ್ ಗಳು ನಡೆಯಲಿದೆ ಎಂದು ಸಂಸ್ಥೆಯು ತಿಳಿಸಿದೆ.

    ಯಾವೆಲ್ಲ ಕೋರ್ಸ್ ಗಳು?
    ಸಂತ ಅಲೋಶಿಯಸ್ ಕಾಲೇಜು ಹೊಸದಾಗಿ ಬ್ಯಾಚುಲರ್ ಆಫ್ ವೊಕೇಶನ್ ಪದವಿ ಮೂಲಕ ಎನರ್ಜಿ ಹಾಗೂ ಡೆವಲಪ್ ಮೆಂಟ್ ವಿಷಯವನ್ನು ಅಳವಡಿಸಿಕೊಂಡಿದೆ. ಜೊತೆಗೆ, ಸಾಯಂಕಾಲದ ಬ್ಯಾಚ್ ನಲ್ಲಿ ಬ್ಯಾಚುಲರ್ ಆಫ್ ವೊಕೇಶನ್ ಪದವಿಯಲ್ಲಿ ಸಾಫ್ಟವೇರ್ ಡೆವಲಪ್ಮೆಂಟ್ ಹಾಗೂ ಎಂ.ಕಾಂ ಪದವಿ ಜೊತೆಗೆ ಫೈನಾನ್ಸ್ ಹಾಗೂ ಅನಾಲಿಟಿಕ್ಸ್ ಕೋರ್ಸ್ ಗಳನ್ನು ಅಭ್ಯಸಿಸಬಹುದಾಗಿದೆ. ಇನ್ನು ವೃತ್ತಿಪರ ಕನ್ನಡ ಕೋರ್ಸ್ ಗಳನ್ನೂ ಅಭ್ಯಸಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ
    ಯುಜಿ ವಿಭಾಗ: 0824-4117704
    ಪಿಜಿ ವಿಭಾಗ: 0824-4117702

    ಇದನ್ನೂ ಓದಿ: Mangaluru To Mumbai: ಇನ್ಮುಂದೆ ಪ್ರತಿದಿನವೂ ಮಂಗಳೂರಿನಿಂದ ಮುಂಬೈಗೆ ಹಾರಿರಿ! ಹೊಸ ವಿಮಾನ ಆರಂಭ

    ಮಂಗಳೂರು ವಿವಿಯಲ್ಲಿ ಯೋಗ ಕೋರ್ಸ್
    ಮಂಗಳೂರು ಯೂನಿವರ್ಸಿಟಿ ಕಾಲೇಜುಗಳಲ್ಲಿ ಯೋಗ ಕೋರ್ಸ್ ಅನ್ನು ಬಿಎಸ್ಸಿ ಹಾಗೂ ಎಂಎಸ್ಸಿ ಜೊತೆ ಅಳವಡಿಸುವ ಚಿಂತನೆ ನಡೆಸಿದೆ. ಅದಲ್ಲದೇ, ಬಿಎಸ್ಸಿ ಹಾಗೂ ಬಿಎಸ್ಸಿ ಅನ್ನು ಭೂಗೋಳ ಶಾಸ್ತ್ರದಲ್ಲಿ ಅಭ್ಯಸಿಸುವ ಬಗ್ಗೆಯೂ ಮಂಗಳೂರು ವಿವಿ ನಿರ್ಧರಿಸಿದೆ. ಈ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಮಂಗಳೂರು ವಿವಿ ಉಪ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ
    ದೂರವಾಣಿ : 0824-2287260/2287524

    ಇದನ್ನೂ ಓದಿ: Mangaluru Power Cut: ಶುಕ್ರವಾರ ಮಂಗಳೂರು ನಗರದ ಈ ಪ್ರದೇಶಗಳಲ್ಲಿ ಪವರ್ ಕಟ್

    NEP ಜಾರಿ ಮಾಡಿದ್ದ ಮೊದಲ ವಿವಿ
    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲ ಬಾರಿಗೆ ಮಂಗಳೂರು ವಿವಿ ಅಳವಡಿಸಿಕೊಂಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರು ಮಂಗಳೂರು ಯೂನಿವರ್ಸಿಟಿಯ ಮಂಗಳ ಗಂಗೋತ್ರಿಯ ಸಭಾಂಗಣದಲ್ಲಿ ಉದ್ಘಾಟಿಸಿದ್ದರು.
    Published by:guruganesh bhat
    First published: