• Home
  • »
  • News
  • »
  • state
  • »
  • Mangalore Police: ಪೊಲೀಸರ ಕರ್ತವ್ಯಕ್ಕೆ ಕುಟುಂಬದಿಂದ ಈ ರೀತಿಯ ಒಂದು ಶ್ಲಾಘನೀಯ ಕಾರ್ಯ!

Mangalore Police: ಪೊಲೀಸರ ಕರ್ತವ್ಯಕ್ಕೆ ಕುಟುಂಬದಿಂದ ಈ ರೀತಿಯ ಒಂದು ಶ್ಲಾಘನೀಯ ಕಾರ್ಯ!

ಮಾಸ್ಕ್​ ತಯಾರಿ

ಮಾಸ್ಕ್​ ತಯಾರಿ

ಮುಂಚೂಣಿ ಕಾರ್ಯಕರ್ತರ ಕಾರ್ಯಕ್ಕೆ ಈಗ ಅವರ ಪತ್ನಿಯರು ಜೊತೆಯಾಗಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ

  • Share this:

ಮಂಗಳೂರು (ಮೇ. 3): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪೊಲೀಸ್​ ಇಲಾಖೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್​ ನಡುವೆಯೂ ಅವರ ಕಾರ್ಯ ಮೆಚ್ಚುಗೆ ಪಾತ್ರವಾದದ್ದು. ಇಂತಹ ಮುಂಚೂಣಿ ಕಾರ್ಯಕರ್ತರ ಕಾರ್ಯಕ್ಕೆ ಈಗ ಅವರ ಪತ್ನಿಯರು ಜೊತೆಯಾಗಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜೀವದ ಹಂಗು ತೊರೆದು ಸೋಂಕು ನಿಯಂತ್ರಣಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ರಕ್ಷಣೆ ಕೂಡ ಅಗತ್ಯವಾಗಿರುವ ಹಿನ್ನಲೆ ಅವರಿಗಾಗಿ ವಿಶೇಷ ಮಾಸ್ಕ್​ ತಯಾರಿಸಲು ಆರಕ್ಷಕರ ಹೆಂಡತಿಯರು ಮುಂದಾಗಿದ್ದಾರೆ. ಪೊಲೀಸ್​ ಇಲಾಖೆ ಸಿಬ್ಬಂದಿಗಾಗಿ ಈ ವಿಶೇಷ ಮಾಸ್ಕ್​ಗಳನ್ನು ಪೊಲೀಸರ ಹೆಂಡತಿಯರೇ ತಯಾರಿಸುತ್ತಿರುವ ವಿಶೇಷವಾಗಿದೆ. 


ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2 ಸಾವಿರ ಜನ ಪೊಲೀಸರು ಕರ್ತವ್ಯ ಮಾಡುತ್ತಿದ್ದು ಅವರಿಗೆ ಮಾಸ್ಕ್ ನ್ನು ತಾವೇ ತಯಾರಿಸಿ ಕೊಡುವ ಜವಬ್ದಾರಿಯನ್ನು ಪೊಲೀಸರ ಮನೆಯವರು ವಹಿಸಿಕೊಂಡಿದ್ದಾರೆ.  ​ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಕೂಡ ಈ ಮಹಿಳೆಯರನ್ನು ಭೇಟಿ ಮಾಡಿ,  ಇಲಾಖೆ ವತಿಯಿಂದ ತಾವೇ ಬಟ್ಟೆ ಇತರೆ ಉಪಕರಣ ಕೊಡಿಸುವುದಾಗಿ ಹೇಳಿದ್ದಾರೆ. ಉಚಿತವಾಗಿ ಕೊಡುವ ನಿರ್ಧಾರಿಸ ಮಹಿಳೆಯರಿಗೆ ಗೌರವ ಧನ ನೀಡಲು ಮುಂದಾಗಿದ್ದು, 10 ಸಾವಿರ ಮಾಸ್ಕ್ ಗೆ ಆರ್ಡರ್ ಕೊಟ್ಟಿದ್ದಾರೆ


ಮಂಗಳೂರಿನ ಪೊಲೀಸ್ ಕ್ವಾಟ್ರಸ್ ಬಳಿಯಿರುವ  ಕಟ್ಟಡದಲ್ಲಿ ಮಾಸ್ಕ್ ತಯಾರಿ ನಡೆಯುತ್ತಿದ್ದು, ಮಹಿಳೆಯರು ತಮ್ಮವರಿಗಾಗಿ ಶ್ರಮದಾನ ಮಾಡುತ್ತಿದ್ದಾರೆ. ಮಂಗಳೂರಿನ ಪಾಂಡೇಶ್ವರದ ಪೊಲೀಸ್ ಲೇನ್ ನ ಪೊಲೀಸರ ಪತ್ನಿಯರೇ ನಿರ್ಮಿಸಿರುವ ಜ್ಞಾನೋದಯ ಮಹಿಳಾ ಮಂಡಳಿಯಲ್ಲಿ ಪೊಲೀಸರನ್ನು ಕೊರೊನಾ ದಿಂದ ಕಾಪಾಡುವ ಕಾರ್ಯ ನಡೆಯುತ್ತಿದೆ.


ಬೇರೆ ಸಮಯದಲ್ಲಿ ಮನೆಯಲ್ಲಿಯೇ ಹೊಲಿಗೆ ಎಂಬ್ರಾಡ್ಡರಿ ಮೂಲಕ ಸಂಪಾದನೆಯನ್ನು ಮಹಿಳೆಯರು ಮಾಡುತ್ತಿದ್ದರು. ಈಗ  ಲಾಕ್ ಡೌನ್ ವೇಳೆ ಮನೆಯಲ್ಲಿಯೇ ಸುಮ್ಮನಿರುವ ಪೊಲೀಸರ ಹೆಂಡತಿಯರಿಗೆ ಕಮೀಷನರ್ ಕೆಲಸ ನೀಡಿದ್ದಾರೆ. ಪೊಲೀಸರಿಗೆ ಧರಿಸಲು ಮಾಸ್ಕ್ ತಯಾರಿಸಲು ಕಮಿಷನರ್ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಎಂಟು ಮಹಿಳೆಯರಿಂದ ಪೊಲೀಸರಿಗಾಗಿ ಮಾಸ್ಕ್ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ.


ಇದನ್ನು ಓದಿ: ಕೋವಿಡ್​ಗೆ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅಣ್ಣ ಬಲಿ


ಹತ್ತು ಸಾವಿರ ಮಾಸ್ಕ್ ತಯಾರಿಸಲು ಸೂಚನೆ ನೀಡರುವ ಕಮೀಷನರ್,ಕಮೀಷನೇಟರ್ ವ್ಯಾಪ್ತಿಯ ಎಲ್ಲಾ ಪೊಲೀಸರಿಗೆ ಮಾಸ್ಕ್ ನೀಡಲು ಯೋಜನೆ ರೂಪಿಸಿದ್ದಾರೆ. ಕಮೀಷನೇಟರ್ ವ್ಯಾಪ್ತಿಯಲ್ಲಿ  ಎರಡು ಸಾವಿರ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದು, ಒಬ್ಬೊಬ್ಬರಿಗೆ ಕನಿಷ್ಠ 5 ಮಾಸ್ಕ್ ನೀಡಲು  ಯೋಜನೆ ರೂಪಿಸಿದ್ದಾರೆ. ಎಲ್ಲವೂ ಖಾಕಿ ವಸ್ತ್ರದ ಮಾಸ್ಕ್ ಆಗಿದ್ದು, ಯೂನಿಫಾರ್ಮ್ ಗೆ ಹೊಂದುವಂತೆ ತಯಾರಿಸಲಾಗಿದೆ. ಪ್ರತಿ ನಿತ್ಯ 90 ಮಾಸ್ಕ್ ಹೊಲಿಯುವ ಎಂಟು ಮಂದಿ ಮಹಿಳೆಯರು, ಈಗಾಗಲೇ ಮೂರೂವರೆ ಸಾವಿರಕ್ಕೂ ಅಧಿಕ ಮಾಸ್ಕ್ ಗಳನ್ನು ತಯಾರಿಸಿದ್ದಾರೆ.


ಇದನ್ನು ಓದಿ: ಉಸಿರು ಕೊಟ್ಟವಳ ಬದುಕಿಸಲು ಉಸಿರು ನೀಡಿದ ಮಕ್ಕಳು; ಆದರೂ ಉಳಿಯಲಿಲ್ಲ ತಾಯಿ


ಮಾಸ್ಕ್ ಹೊಲಿಗೆ ಕೆಲಸಕ್ಕೆ ಯಾವುದೇ ಹಣ ಬೇಡ, ನಮ್ಮವರಿಗಾಗಿ ನಾವು ಸಣ್ಣ ಸೇವೆ ಮಾಡುತ್ತಿದ್ದೇವೆ ಎಂದು ಮಹಿಳೆಯರು ನಿಸ್ವಾರ್ಥದ ಸೇವೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಎಂಟು ಮಂದಿ ಮಹಿಳೆಯರಿಗೂ ಗೌರವ ಧನ ನೀಡುವ ಮೂಲಕ ಕೆಲಸಕ್ಕೆ ಉತ್ತೇಜನ ನೀಡುವುದಾಗಿ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದು, ಮಹಿಳೆಯರ ಸೇವೆಗಾಗಿ ಅಭಿನಂದಿಸಿದ್ದಾರೆ.


ಮುಂಚೂಣಿ ಕಾರ್ಯಕರ್ತರ ಪೊಲೀಸರ ಸೇವೆಗೆ ಅವರ ಕುಟುಂಬಸ್ಥರಿಂದ ಬೆಂಬಲ ವ್ಯಕ್ತವಾಗಿರುವುದು ನಿಜಕ್ಕೂ ಶ್ಲಾಘನೀಯ. ಜನರ ರಕ್ಷಣೆಗಾಗಿ ನಿಂತ ತಮ್ಮ ಕುಟುಂಬಸ್ಥರಿಗೆ ಈ ರೀತಿಯ ಕಾಳಜಿ ವಹಿಸುವ ಮೂಲಕ ಮಹಿಳೆಯರ ಕಾರ್ಯ ಮೆಚ್ಚುಗೆ ಪಡೆದಿದೆ.

Published by:Seema R
First published: