Women Safety: ಮಹಿಳೆಯ ರಕ್ಷಣೆಗೆ ಮಂಗಳೂರು ಪೊಲೀಸರ ನೂತನ ಯೋಜನೆ

ಮೈಸೂರು ಗ್ಯಾಂಗ್ ರೇಪ್ ಘಟನೆ ಬಳಿಕ ಮಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳ ಸುರಕ್ಷೆತೆಗೆ ಹದ್ದಿನ ಕಣ್ಣಿಟ್ಟಿದ್ದಾರೆ. ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ ತುರ್ತು ವಾಹನ ಸದುಪಯೋಗಪಡಿಸುವಂತೆ ಕರೆ ನೀಡಿದ್ದಾರೆ.

ಮಹಿಳೆಯ ರಕ್ಷಣೆಗೆ ಮಂಗಳೂರು ಪೊಲೀಸರ ನೂತನ ಯೋಜನೆ

ಮಹಿಳೆಯ ರಕ್ಷಣೆಗೆ ಮಂಗಳೂರು ಪೊಲೀಸರ ನೂತನ ಯೋಜನೆ

  • Share this:
ಮಂಗಳೂರು (ಆ. 28): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ನಡೆದ ಬಳಿಕ ಎಜುಕೇಶನ್ ಹಬ್ ಎಂದು ಕರೆಸಿಕೊಂಡಿರುವ ಮಂಗಳೂರಿನಲ್ಲಿ ಪೊಲೀಸರು (Mangalore Police) ಇನ್ನಷ್ಟು ಅಲರ್ಟ್ ಆಗಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರ ಸುರಕ್ಷೆತೆಗಾಗಿ ಇಲ್ಲಿನ ಅಧಿಕಾರಿ ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಮಹಿಳಾ ಸುರಕ್ಷೆತೆಗಾಗಿ (women safety) ಒಂದು ದಿನ ಎಂಬ ಜಾಗೃತಿ ಕಾರ್ಯ ನಡೆಸಲಾಯಿತು. ಪೊಲೀಸ್ ಇಲಾಖೆಯಲ್ಲಿ ಲೋಕಾರ್ಪಣೆ ಮಾಡಿರುವ ಇ.ಆರ್.ಎಸ್.ಎಸ್ ಎಮರ್ಜೆನ್ಸಿ ವೆಹಿಕಲ್ ಹೆಚ್ಚು ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು.  ಓಲಿಂಪಿಯನ್ ಎಂ.ಆರ್ ಪೂವಮ್ಮ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಇ.ಆರ್.ಎಸ್.ಎಸ್ ವೆಹಿಕಲ್‌ನ್ನು ಕಳೆದ ಎಂಟು ತಿಂಗಳ ಹಿಂದೆ ಲೋಕಾರ್ಪಣೆ ಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ 112 ನಂಬರ್‌ಗೆ ಕರೆ ಮಾಡಿದ ತಕ್ಷಣ ಬೆಂಗಳೂರಿನ ಕಂಟ್ರೋಲ್ ರೂಂಗೆ ಈ ಕರೆ ಹೋಗುತ್ತದೆ. ಕ್ಷಣ ಮಾತ್ರದಲ್ಲಿ ಕರೆ ರಿಸೀವ್ ಆಗಿ ಕರೆ ಮಾಡಿದವರ ವಿವರ, ಸ್ಥಳ, ಆಗಿರುವ ತೊಂದ್ರೆಯ ಮಾಹಿತಿ ಪಡೆದು ಆ ಸ್ಥಳಕ್ಕೆ ಹತ್ತಿರವಿರುವ ಇ.ಆರ್.ಎಸ್.ಎಸ್ ವೆಹಿಕಲ್,ಪೊಲೀಸ್ ಅಧಿಕಾರಿ,ಸಿಬ್ಬಂದಿಗಳನ್ನು ಕಳುಹಿಸಿಕೊಡಲಾಗುತ್ತದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಲ್ಲಿ ಈ ರೀತಿ 4000ಕ್ಕೂ ಹೆಚ್ಚು ಕರೆ ಬಂದಿದ್ದು ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸ್ಪಂದಿಸಿದೆ. ಇಂದು ಸ್ವಂತ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿ.ಸಿ.ಪಿ ಸೇರಿದಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಈ ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದರು. ಪ್ರಾಯೋಗಿಕವಾಗಿ ಕಮೀಷನರ್ ಅವರೆ ಕರೆ ಮಾಡಿ ಇದರ ಪರಿಶೀಲನೆ ನಡೆಸಿದರು.

ಇದನ್ನು ಓದಿ: ರಜೆಗಳ ಸಾಲು ಎಂದು ಟ್ರಿಪ್​ ಪ್ಲಾನ್​ ಮಾಡುವ ಮುನ್ನ ಈ ವಿಷಯದ ಬಗ್ಗೆ ಇರಲಿ ಗಮನ

ಇಂದು ಈ ಇ.ಆರ್.ಎಸ್.ಎಸ್ ವೆಹಿಕಲ್‌ನಲ್ಲಿ 100 ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳು ಟೀಂ ವರ್ಕ್ ಮಾಡಿದರು. 20 ಕ್ಕೂ ಹೆಚ್ಚು ಎಮರ್ಜೆನ್ಸಿ ಪೊಲೀಸ್ ವೆಹಿಕಲ್ ಬಳಕೆ ಮಾಡಲಾಯಿತು. ಒಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಗರಿಷ್ಠ 15 ನಿಮಿಷದ ಒಳಗೆ, ನಗರ ವ್ಯಾಪ್ತಿಯಲ್ಲಿ ಕನಿಷ್ಟ 5 ನಿಮಿಷದ ಒಳಗೆ ಸ್ಥಳಕ್ಕೆ ಬಂದು ರೆಸ್ಪಾನ್ಸ್ ಮಾಡುವ ಈ ಸೇವೆಯನ್ನು ಎಲ್ಲರೂ ಅಗತ್ಯ ಸಂದರ್ಭ ಬಳಸಬಹುದಾಗಿದೆ.

ಈ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಈವರೆಗ ಹಲವು ಗಲಾಟೆಗಳು ನಡೆದ ಸಂದರ್ಭದಲ್ಲಿ ಪೊಲೀಸರು ಬರುವಾಗ ತಡವಾಗಿ ಅನಾಹುತವೇ ಆಗಿದೆ. ಈಗ ಪೊಲೀಸ್ ಇಲಾಖೆ ಈ ವ್ಯವಸ್ಥೆ ತಂದಿರುವುದರಿಂದ ಗಲಾಟೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ  ಎನ್ನುವುದು ಜನರ ಅಭಿಪ್ರಾಯವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: