• Home
  • »
  • News
  • »
  • state
  • »
  • Mangalore: ದೇವಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕುತ್ತಿದ್ದ ನೀಚ.. ಸಿಕ್ಕಿಬಿದ್ದಾಗ ಹೇಳಿದ್ದೇನು ಗೊತ್ತಾ?

Mangalore: ದೇವಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕುತ್ತಿದ್ದ ನೀಚ.. ಸಿಕ್ಕಿಬಿದ್ದಾಗ ಹೇಳಿದ್ದೇನು ಗೊತ್ತಾ?

ಆರೋಪಿ ದೇವದಾಸ್ ದೇಸಾಯಿ

ಆರೋಪಿ ದೇವದಾಸ್ ದೇಸಾಯಿ

ಭೂಮಿಗೆ ಅಂತ್ಯ ಬರುವ ಮೊದಲು ಲೋಕದ ಎಲ್ಲಾ ದೇಶಗಳ ಸ್ತ್ರೀ-ಪುರುಷರಿಗೆ ಏಸು ಕ್ರಿಸ್ತ ರಕ್ಷಣೆ ಕೊಡುತ್ತಾನೆ ಎಂಬ ಬೈಬಲ್‌ನ ವಾಕ್ಯವನ್ನು ಜೆರಾಕ್ಸ್ ಮಾಡಿ ದೇವಸ್ಥಾನ ಮತ್ತು ಮಸೀದಿಯ ಹುಂಡಿಗಳಿಗೆ ಹಾಕುತ್ತಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ..

  • Share this:

ಮಂಗಳೂರು: ತುಳುನಾಡಿನ ಆರಾಧ್ಯ ದೈವ ಸ್ಥಾನಗಳು ಸೇರಿದಂತೆ ಕೊರಗಜ್ಜನ ಕಟ್ಟೆಗೆ (Koragajja Temple) ಕಾಂಡೋಮ್​ (Condoms) ಎಸೆದು ಅಪವಿತ್ರ ಗೊಳಿಸುತಿದ್ದ ಕಿರಾತಕ ಕೊನೆಗೂ ಮಂಗಳೂರು ಪೊಲೀಸರಿಗೆ (mangalore police) ಸಿಕ್ಕಿಬಿದ್ದಿದ್ದಾನೆ. ಈತ ದೇವಸ್ಥಾನ ಮಾತ್ರವಲ್ಲ, ಒಟ್ಟು 18 ಧಾರ್ಮಿಕ ಕೇಂದ್ರಗಳಿಗೆ ಅಶ್ಲೀಲ ವಸ್ತು ಎಸೆದು ಅಪಚಾರ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ದೇವರಿಗೆ ಪಾವಿತ್ರ್ಯತೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಇನ್ನು ಭಕ್ತರನ್ನು ಕಾಪಾಡಲು ಸಾಧ್ಯವೇ? ಎಂಬ ಸಂದೇಶ ಸಾರಲು ಈ ರೀತಿ ಕೃತ್ಯ ಎಸಗುತ್ತಿ ದ್ದ. ಕಳೆದ ಕೆಲವು ತಿಂಗಳಿಂದ ಮಂಗಳೂರು ಸುತ್ತಮುತ್ತ  ವಿರುವ ದೈವಸ್ಥಾನಗಳು ಸೇತಿದಂತೆ ದೇವಸ್ಥಾನ ಗಳನ್ನು ಅಪವಿತ್ರ ಗೊಳಿಸುವ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನಿರಂತರ ನಡೆಯುತಿದ್ದ ಈ ಪ್ರಕರಣಗಳನ್ನು ಭೇದಿಸುವುದೇ ಪೊಲೀಸರಿಗೆ ಸವಾಲಾಗಿತ್ತು. ಎರಡು ದಿನಗಳ ಹಿಂದೇ ಇಂತಹದ್ದೇ ಕೃತ್ಯ ನಗರದ ಮಾರ್ನಮಿ ಕಟ್ಟೆಯಲ್ಲಿ ಬೆಳಕಿಗೆ ಬಂದಿತ್ತು. ಇಲ್ಲಿಯ ಕೊರಗಜ್ಜನ ಕಟ್ಟೆ ಅಪವಿತ್ರ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ಮಹತ್ವದ ಬ್ರೇಕ್ ಥ್ರೂ ಸಿಕ್ಕಿತ್ತು.


ಕೊನೆಗೂ ಸಿಕ್ಕಿಬಿದ್ದ ಕಿಡಿಗೇಡಿ..! 


ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.  ಮಂಗಳೂರಿನ ವಿವಿದೆಡೆಯ ದೈವಸ್ಥಾನಗಳು, ಕೊರಗಜ್ಜನಕಟ್ಟೆ, ಕಲ್ಲುರ್ಟಿ ಗುಡಿ, ಮಲರಾಯ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ ಸೇರಿದಂತೆ 18ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಡೋಮ್ ಇರಿಸಿ ಅಪವಿತ್ರಗೊಳಿಸಿದ್ದ ಕೃತ್ಯವನ್ನು ತಾನೇ ಮಾಡಿದ್ದಾಗಿ ಬಂಧಿತ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ದೈವಸ್ಥಾನ, ಕೊರಗಜ್ಜನ ಕಟ್ಟೆ ಮಾತ್ರ ವಲ್ಲದೇ  ಮಸೀದಿ, ಸಿಖ್ ಗುರುದ್ವಾರ ಸೇರಿದಂತೆ ಹಲವು ಕಡೆ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿರುದಾಗಿ ಒಪ್ಪಿಕೊಂಡಿದ್ದಾನೆ.


ಇದನ್ನೂ ಓದಿ: ತಾಯಿ ಜೊತೆ ಅಕ್ರಮ ಸಂಬಂಧ.. ಮಗಳ ಜೊತೆ ಲವ್ವಿಡವ್ವಿ.. Affair-Love-Murder ಸ್ಟೋರಿ ಬಯಲು!


ಆರೋಪಿಗೆ ದೇವರ ಬಗ್ಗೆ ವೈರಾಗ್ಯ..! 


ಬಂಧಿತ ಆರೋಪಿಯನ್ನು ದೇವದಾಸ್ ದೇಸಾಯಿ (62) ಎಂದು ಗುರುತಿಸಲಾಗಿದ್ದು,  ಈತ ಮೂಲತಃ ಹುಬ್ಬಳ್ಳಿ ಮೂಲದವನಾಗಿದ್ದಾನೆ.  ಸದ್ಯ ಮಂಗಳೂರು ಹೊರವಲಯದ ಕೋಟೇಕಾರು ಬಳಿ ವಾಸ. ಭೂಮಿ ಅಂತ್ಯ ವಾಗುತಿದ್ದು ತಾ ನಂಬಿದ ದೇವರು ಮಾತ್ರ ರಕ್ಷಣೆ ನೀಡಬಲ್ಲ. ಮುಕ್ತಿ ನೀಡ ಬಲ್ಲ ಎಂದು ನಂಬುರುವ ಬಂಧಿತ ಆರೋಪಿ ಈ  ದೇವರುಗಳಿಗೆ  ಅವರ ಪಾವಿತ್ರ್ಯತೆ ಕಾಪಾಡಲು ಸಾಧ್ಯ ಆಗುತ್ತಿಲ್ಲ ಎಂದಾದರೆ ಇನ್ನು ನಿಮ್ಮನ್ನು ಹೇಗೆ ಕಾಪಾಡಲು ಸಾಧ್ಯ ಎಂಬ ಸಂದೇಶ ಸಾರಲು ಈ ರೀತಿ ಕೃತ್ಯ ಎಸಗಿರುವುದಾಗಿ ಬಂಧಿತ ಆರೋಪಿ ತನ್ನಕೃತ್ಯ ಸಮರ್ಥಿಸಿ ಕೊಂಡಿದ್ದಾನೆ.


ತನ್ನೆಲ್ಲಾ ಪಾಪ ಕೃತ್ಯಗಳನ್ನು ಒಪ್ಪಿಕೊಂಡ ಪಾಪಿ 


ಆರೋಪಿ ದೇವದಾಸ್ ದೇಸಾಯಿಯನ್ನು‌ ವಿಚಾರಣೆಗಳಪಡಿಸಿದಾಗ ಸುಮಾರು 18 ಕಡೆಗಳಲ್ಲಿ ಕಾಂಡೋಮ್,ಭಿತ್ತಿಪತ್ರ,ಏಸುವಿನ ಕುರಿತ ಲೇಖನ ಹಾಕಿರೋದು ಗೊತ್ತಾಗಿದೆ..
ಮಂಗಳೂರಿನ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ,ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ,ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ,ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ ,ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಫು ನಾಗನ ಕಟ್ಟೆ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ,ಕುತ್ತಾರು ಕೊರಗಜ್ಜನ ಕಟ್ಟೆ,ಕುಡುಪು ದೈವಸ್ಥಾನ,ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ,ನಂದಿಗುಡ್ಡೆಯ ಕೊರಗಜ್ಜನ ಗುಡಿ,ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ,ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು,ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್,ಮತ್ತು ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪುವಿನಲ್ಲಿ ಈ ಅಪಚಾರ ಎಸಗಿರುವ ಬಗ್ಗೆ ಆರೋಪಿ ದೇವದಾಸ್ ಒಪ್ಪಿಕೊಂಡಿದ್ದಾನೆ.


ಇದನ್ನೂ ಓದಿ: Bengaluru: ಸೆಕ್ಸ್ ಗೆ ಪೀಡಿಸ್ತಾಳೆ, ಊಟ ಹಾಕದೇ ಹಿಂಸೆ ನೀಡ್ತಾಳೆ: ಪತ್ನಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತಿ


ಭೂಮಿಗೆ ಅಂತ್ಯಬರುವ ಮೊದಲು ಲೋಕದ ಎಲ್ಲಾ ದೇಶಗಳ ಸ್ತ್ರೀ-ಪುರುಷರಿಗೆ ಏಸು ಕ್ರಿಸ್ತ ರಕ್ಷಣೆ ಕೊಡುತ್ತಾನೆ"ಎಂಬ ಬೈಬಲ್‌ನ ವಾಕ್ಯವನ್ನು ಜೆರಾಕ್ಸ್ ಮಾಡಿ ದೇವಸ್ಥಾನ, ದೇವಸ್ಥಾನ ಮತ್ತು ಮಸೀದಿಯ ಹುಂಡಿಗಳಿಗೆ ಹಾಕುತ್ತಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತ ದೇವದಾಸ್ ವಿಕ್ಷಿಪ್ತ ಮನಸ್ಸಿನವನಾಗಿದ್ದು, ಈತನ ಮಾನಸಿಕ ಸ್ಥಿಮಿತದ ಬಗ್ಗೆ ವೈದ್ಯರಲ್ಲಿ ವರದಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿ ತೆಗೆದು ಇನ್ನಷ್ಟು ವಿಚಾರಣೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.  ದೈವಸ್ಥಾನ ಅಪವಿತ್ರ ಪ್ರಕರಣ ಪೊಲೀಸರಿಗೆ ಬಹಳಷ್ಟು ಸವಾಲು ಸೃಷ್ಟಿಸಿತ್ತು. ಕಡೆಗೂ ಒಂದು ಸುಳಿವು ಆಧರಿಸಿ ಹೋದ ಪೊಲೀಸರಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

Published by:Kavya V
First published: