• Home
  • »
  • News
  • »
  • state
  • »
  • ಮಂಗಳೂರು ನರ್ಸಿಂಗ್​ ವಿದ್ಯಾರ್ಥಿ ಆತ್ಮಹತ್ಯೆಯ ಅಸಲಿ ಕಾರಣ ಡೆತ್​ ನೋಟ್​ನಲ್ಲಿ ಬಹಿರಂಗ

ಮಂಗಳೂರು ನರ್ಸಿಂಗ್​ ವಿದ್ಯಾರ್ಥಿ ಆತ್ಮಹತ್ಯೆಯ ಅಸಲಿ ಕಾರಣ ಡೆತ್​ ನೋಟ್​ನಲ್ಲಿ ಬಹಿರಂಗ

ನೀನಾ ಸತೀಶ್

ನೀನಾ ಸತೀಶ್

ನರ್ಸಿಂಗ್ ವಿದ್ಯಾರ್ಥಿನಿ ನೀನಾ ಸತೀಶ್,ಸಾವಿನ ಬಗ್ಗೆ ಹಲವು ಆರೋಪಗಳು ಕೇಳಿಬಂದಿತ್ತು.

  • Share this:

ಮಂಗಳೂರು (ಅ. 6): ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬಳು ನೇಣಿಗೆ (manglore nursing Student suicide) ಕೊರಳೊಡ್ಡಿದ್ದಾಳೆ. ಫೀಸ್ ಕಟ್ಟುವ (college Fees) ವಿಚಾರದಲ್ಲಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್‌ನೋಟ್‌ನಲ್ಲಿ (death note) ಇನ್ಯಾವತ್ತಿಗೂ ತಾಯಿಗೆ ಭಾರ ಆಗಿ ಇರಲ್ಲ ಅಂತಾ ಹೇಳಿ ಇನ್ನೆಂದು ಬಾರದ ಲೋಕಕ್ಕೆ ತೆರಳಿದ್ದಾಳೆ. ಹುಡುಗಿಯ ಹೆಸರು ನೀನಾ ಸತೀಶ್. ಈಕೆ ಮೂಲತ ಕೇರಳದ ಕಾಸರಗೋಡು ಮೂಲದ ವಿದ್ಯಾರ್ಥಿನಿ. ಮಂಗಳೂರು ನಗರದ ಕೊಲಾಸೋ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ತಾನು ವಾಸ್ತವ್ಯವಿದ್ದ ಹಾಸ್ಟೇಲ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಳು. 


ಬಾತ್‌ರೂಮ್‌ನಲ್ಲಿನ ಕಿಟಕಿಗೆ ನೇಣುಬಿಗಿದುಕೊಂಡಿದ್ದಳು. ಇದನ್ನು ಗಮನಿಸಿದ ರೂಮ್‌ಮೇಟ್‌ಗಳು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಆದ್ರೆ ನೀನಾ ಸತೀಶ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ.


ವಿದ್ಯಾರ್ಥಿ ಸಾವಿಗೆ ಶಾಲಾ ಶುಲ್ಕವೇ ಮುಳುವಾಯಿತಾ?


ಕೇರಳದ ಕಾಸರಗೋಡು ನಿವಾಸಿ ನೀನಾ ಸತೀಶ್,  ಡಾ.ಲ್ಯಾಡೋ ಕೊಲಾಸೋ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ಕೋರ್ಸ್ ಗೆ ದಾಖಲಾಗಿದ್ದರು..ಕೊಲಾಸೋ ಕಾಲೇಜಿನ ಹಾಸ್ಟೆಲ್‌ನಲ್ಲಿ ನೀನಾ ಸತೀಶ್ ವಾಸ್ತವ್ಯ ಮಾಡುತ್ತಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ನೀನಾ ಸತೀಶ್ ಹಾಸ್ಟೆಲ್ ನ ಬಾತ್ ರೂಂನಲ್ಲಿ‌ ನೇಣಿಗೆ ಶರಣಾಗಿದ್ದಾಳೆ..ನೀನಾ ಸತೀಶ್ ಸಾವಿನ ಹಿಂದೆ ಕಾಲೇಜಿನ ಫೀಸ್ ಕಟ್ಟಬೇಕೆಂಬ ಒತ್ತಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದೆ. ಆದರೆ ಈ ಆರೋಪದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್,ನರ್ಸಿಂಗ್ ವಿದ್ಯಾರ್ಥಿನಿ ನೀನಾ ಸತೀಶ್,ಸಾವಿನ ಬಗ್ಗೆ ಹಲವು ಆರೋಪಗಳು ಕೇಳಿಬಂದಿತ್ತು. ಪೊಲೀಸರೂ ಅಡ್ಮಿಷನ್ ಲಾಬಿ ಮಾಡುತ್ತಿದ್ದಾರೆ ಅಂತಾ ಆರೋಪ ಕೇಳಿಬಂದಿದೆ. ಆದರೆ ಈ ಆರೋಪ ಸತ್ಯಕ್ಕೆ ದೂರವಾಗಿದೆ.


ನಾನೇ ಖುದ್ದಾಗಿ ಕೊಲಾಸೋ ಕಾಲೇಜು,ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಾಸ್ಟೆಲ್,ಶವಗಾರಕ್ಕೆ ಭೇಟಿ ನೀಡಿದ್ದೇನೆ. ವಿದ್ಯಾರ್ಥಿನಿ ಯ ಹೆತ್ತವರು ಮತ್ತು ಸ್ನೇಹಿತೆಯರ ಜೊತೆ ಮಾತನಾಡಿದ್ದೇನೆ.  ಕಾಲೇಜು ಫೀಸ್ ಕಟ್ಟಬೇಕೆಂಬ ಒತ್ತಡಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ.


ಇದನ್ನು ಓದಿ: ಕರಾಳ ಅಮವಾಸ್ಯೆಗೆ ಒಂದೇ ಕುಟುಂಬದ ಏಳು ಜನ ಬಲಿ; ಮಳೆಗೆ ಮನೆ ಬಿದ್ದು ದುರ್ಘಟನೆ


ಡೇಟ್​ನೋಟ್​ನಲ್ಲಿನ ಅಂಶವೇನು?


ನೀನಾ ಸತೀಶ್ ಆತ್ಮಹತ್ಯೆಗೂ ಹಿಂದಿನ ದಿನವೇ ಒಂದು ಡೆತ್‌ನೋಟ್ ಬರೆದಿಟ್ಟಿದ್ದಳು. ಕಾಲೇಜೆಗೆ ಈಗಾಗಲೇ 75 ಸಾವಿರ ಫೀಸು ಕಟ್ಟಿದ್ದೇವೆ. ಇನ್ನುಳಿದ ಫೀಸ್ ಕಟ್ಟಿದ್ರೆ ಮಾತ್ರ ಕಾಲೇಜಿನಿಂದ ಯುನಿಫಾರ್ಮ್ ಎಲ್ಲಾ ಕೊಡೊದಾಗಿ ಹೇಳಿದ್ದಾರೆ. ಆದ್ರೆ ತಾಯಿ ಬಹಳ ಕಷ್ಟದಲ್ಲಿದ್ದಾರೆ. ನಾನು ಸಹ ವಿದ್ಯಭ್ಯಾಸದಲ್ಲಿ ಹಿಂದೆ ಬಿದ್ದಿದ್ದೇನೆ. ಹೀಗಾಗಿ ಮುಂದೆ ತಾಯಿಗೆ ಇನ್ನಷ್ಟು ಕಷ್ಟ ಕೊಡಲು ನನಗಿಷ್ಟವಿಲ್ಲ. ನಾನು ಸತ್ತು ತಾಯಿಗೆ ಭಾರ ಕಡಿಮೆ ಮಾಡುತ್ತೇನೆ. ನಾಳೆ ರೂಮ್‌ಮೇಟ್ಸ್ ಯಾರು ಇಲ್ಲದೇ ಇದ್ದಾಗ ಬಾತ್‌ರೂಂನ ಟ್ಯಾಪ್‌ನಲ್ಲಿ ಜೋರಾಗಿ ನೀರು ಬಿಟ್ಟು ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಲಯಾಳಂ ಭಾಷೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.


ಇದನ್ನು ಓದಿ: ರಶ್ಮಿಕಾಯಿಂದ ಸಮಂತಾವರೆಗೆ: ಮುರಿದು ಬಿದ್ದ ದಕ್ಷಿಣ ಭಾರತೀಯ ನಟಿಯರ ಪ್ರೇಮ ಕಥೆಗಳು


ಕದ್ರಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ನೀನಾ ಸತೀಶ್ ಪೋಷಕರು, ಸಹಪಾಠಿಗಳು, ಕಾಲೇಜು ಆಡಳಿತ ಮಂಡಳಿಯವರನ್ನು ವಿಚಾರಣೆ ನಡೆಸಿದ್ದಾರೆ. ಕಾಲೇಜು ಕಡೆಯಿಂದ ಫೀಸು ಕಟ್ಟುವಂತೆ ಒತ್ತಡ ಹಾಕಲಾಗಿತ್ತಾ ಎಂಬ ಬಗ್ಗೆಯು ತನಿಖೆ ಮಾಡಿದ್ದಾರೆ. ಒಟ್ಟಿನಲ್ಲಿ ಏನೇ ಇರಲಿ ಕುಳಿತು ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗೆ ಜೀವವನ್ನೇ ಬಲಿ ಕೊಟ್ಟಿರೋದು ನಿಜಕ್ಕೂ ದುರಂತ.

Published by:Seema R
First published: