ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಂಗಳೂರಿನ ಭಗವತಿ

 ಕಾಳಿ ಎಂದೂ ಕರೆಯಲ್ಪಡುವ ಚೀರುಂಭ ಭಗವತಿ ಶಿವನು ಸೂಚಿಸಿದಂತೆ ದೈವಿಕ ಹಡಗಿನ ಮೂಲಕ ಈ ಜಗತ್ತಿಗೆ ಬಂದಳು.

ಭಗವತಿ

ಭಗವತಿ

  • Share this:
ದೇವರ ನಾಡು ಕೇರಳದಲ್ಲಿ ಹಲವು ಪ್ರಸಿದ್ದ ದೇವಾಲಯಗಳಿವೆ. ಅಲ್ಲಿನ ದೇವಸ್ಥಾನಗಳ ವಾಸ್ತು ಶೈಲಿ, ಆರಾಧನಾ ಕ್ರಮ ಒಂದಷ್ಟು ವಿಭಿನ್ನವಾಗಿರುತ್ತದೆ. ಕಡಲನಗರಿ ಮಂಗಳೂರಿನಲ್ಲಿಯೂ ಕೇರಳ ಭಾಗದ ಭಗವತಿ ಕ್ಷೇತ್ರವೂಂದಿದೆ. ನಂಬಿ ಬಂದ ಭಕ್ತರಿಗೆ ಇಲ್ಲಿನ ಶಕ್ತಿಗಳು ಅವರ ಸಂಕಷ್ಟಗಳೆಲ್ಲವನ್ನು ದೂರಾ ಮಾಡುತ್ತದೆ ಎಂಬ ಮಾತಿದೆ.  ಕಡಲನಗರಿ ಮಂಗಳೂರು ಹಲವು ಪ್ರಸಿದ್ದ ದೇವಾಲಯಗಳನ್ನು ಹೊಂದಿರುವ ನಗರ. ಕೇರಳ ಗಡಿ ಭಾಗವನ್ನು ಹಂಚಿಕೊಂಡಿರುವ ಈ ಜಿಲ್ಲೆಯಲ್ಲಿ ಎಲ್ಲಾ ಭಾಗದ ಜನರು ವಾಸಿಸುತ್ತಿದ್ದಾರೆ. ಇದೇ ರೀತಿ ಕೇರಳ ಭಾಗದಲ್ಲಿ ಹೆಚ್ಚಾಗಿ ಆರಾಧನೆ ಮಾಡುವ ಭಗವತಿ ಕ್ಷೇತ್ರ ಇಲ್ಲಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಗರದ ಹೃದಯ ಭಾಗವಾದ ಕೊಡಿಯಾಲ್‌ಬೈಲ್‌ನಲ್ಲಿ ಇರುವ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರವೂ ಸಾವಿರಾರು ಭಕ್ತರ ಪಾಲಿಗೆ ನೆಮ್ಮದಿಯನ್ನು ಕಾಣುವ ಭಕ್ತಿಯ ಸ್ಥಳವಾಗಿದೆ.

ಕುದ್ರೋಳಿ ಶ್ರೀ ಭಗವತಿ ಕ್ಷೇತ್ರವೂ ಸುಮಾರು ಎರಡು ಎಕರೆ ರಮಣೀಯ ಸ್ಥಳದಲ್ಲಿದೆ. 800 ವರ್ಷಗಳ ಪರಂಪರೆಯನ್ನು ಹೊಂದಿರುವ ಈ ಕ್ಷೇತ್ರವೂ 14 ಭಗವತಿಗಳನ್ನು ಒಟ್ಟಿಗೆ ಪೂಜಿಸುವ ಏಕೈಕ ದೇವಾಲಯವಾಗಿದೆ. ಚೀರುಂಬಾ ನಲ್ವಾರ್, ಪದಂಗರ ಐವರ್ ಮತ್ತು ಪುಲ್ಲುರಲಿ ಐವಾರ್. ಇದನ್ನು ಕುದ್ರೋಲಿ ಕೂಟಕಲಾ ಎಂದೂ ಕರೆಯುತ್ತಾರೆ. ಅಂದರೆ 14 ಭಗವತಿಯವರನ್ನು ಒಟ್ಟುಗೂಡಿಸುವ ಸ್ಥಳವಾಗಿದೆ. ಇಲ್ಲಿ ತೀಯ ಸಮುದಾಯದವರು ಈ ಭಗವತಿ ಕ್ಷೇತ್ರದಲ್ಲಿ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಾರೆ.ಕಾಳಿ ಎಂದೂ ಕರೆಯಲ್ಪಡುವ ಚೀರುಂಭ ಭಗವತಿ ಶಿವನು ಸೂಚಿಸಿದಂತೆ ದೈವಿಕ ಹಡಗಿನ ಮೂಲಕ ಈ ಜಗತ್ತಿಗೆ ಬಂದಳು. ಈ ಹಿಂದೆ ಕುದ್ರೋಳಿಯಲ್ಲಿ ಶ್ರೀ ಭಗವತಿ ಕ್ಷೇತ್ರ ಸ್ಥಾಪಿಸಲಾಯಿತು. ಆದರೆ ತರುವಾಯ ಭಾರೀ ಸಮುದ್ರ ಸವೆತದಿಂದಾಗಿ ದೇವಾಲಯವನ್ನು ಸ್ಥಾಪಿಸಿದ ಸ್ಥಳವು ಹಾನಿಗೊಳಗಾಯಿತು. ಆ ಸಮಯದಲ್ಲಿ ಶ್ರೀ ಮಂಜಣ್ಣ ನಾಯಕ್ ಎಂಬ ಹೆಸರಿನ ಒಬ್ಬ ಜಮೀನ್ದಾರೊಬ್ಬರಿಗೆ ಮಕ್ಕಳಿರಿಲಿಲ್ಲ. ಹೀಗಾಗಿ ಅವರು ಭಗವತಿ ದೇವಿಯಲ್ಲಿ ಮಗುವಿಗಾಗಿ ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಪರಿಣಾಮವಾಗಿ ಅವರು ಮಗುವನ್ನು ಪಡೆದರು. ಹೀಗಾಗಿ ಮಂಗಳೂರಿನ ಕೊಡಿಯಾಲ್ ‌ಬೈಲಿನಲ್ಲಿರುವ ಈ ಭೂಮಿಯನ್ನು ಉಡುಗೊರೆಯಾಗಿ ನೀಡಿದರು. ಹೀಗಾಗಿ ಈ ಪೂಜಾ ಸ್ಥಳವನ್ನು ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಎಂದು ಕರೆಯಲಾಗುತ್ತದೆ.

ಇದನ್ನು ಓದಿ: ಚೆಕ್ ಡ್ಯಾಂನಿಂದ ಕೊಡಗಿನ ಕೊಯಿನಾಡಿನಲ್ಲಿ ಕೃತಕ ಪ್ರವಾಹ

ಈ ದೇವಾಲಯದ ಹಿರಿಮೆಯ ಮತ್ತೊಂದು ಗರಿ ಇಲ್ಲಿನ ವೀರಸ್ತಂಭ. ಸುಮಾರು 6 ಅಡಿ ಎತ್ತರದ ಸ್ತಂಭದಲ್ಲಿ ಭಗವಾನ್ ಮಹೇಶ್ವರ ಮತ್ತು ದೇವಿಯ ಕಲಾತ್ಮಕ ಕೆತ್ತನೆಯಿಂದ ಚಿತ್ರಿಸಲಾಗಿದೆ. ಸ್ತಂಭವು ತನ್ನದೇ ಆದ ದಂತಕಥೆ ಮತ್ತು ಶಕ್ತಿಯನ್ನು ಪಡೆದುಕೊಂಡಿದೆ. ಈ ವೀರಸ್ತಂಭ ಸ್ತಂಭವನ್ನು ಹಬ್ಬದ ಸಮಯದಲ್ಲಿ ಮಲ್ಲಿಗೆ ಮತ್ತು ಕನಕಂಬರ ಹೂವುಗಳಿಂದ ಅಲಂಕರಿಸಲಾಗುವುದು ಮತ್ತು ಈ ದೇವ ಸ್ತಂಭಕ್ಕೆ ಪೂಜಾ ಅರ್ಪಣೆಗಳನ್ನು ನೀಡಲಾಗುತ್ತದೆ.

ಈ ದೇವಾಲಯದಲ್ಲಿ ನಡಾವಳಿ, ಭರಾನಿ, ಕಲಿಯಾಟ, ವಿಷು, ನವರಾತ್ರಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ನವೀಕರಿಸಿದ ನಾಲ್ಕು ದೇವಾಲಯಗಳನ್ನು ಕರ್ನಾಟಕ ಮತ್ತು ಕೇರಳ ಕುಶಲಕರ್ಮಿಗಳು ಕಪ್ಪು ಗ್ರಾನೈಟ್ ಮತ್ತು ಮರದ ಕೆತ್ತನೆಗಳನ್ನು ಬಳಸಿ ನಿರ್ಮಿಸಿದ್ದಾರೆ. ದೇವಾಲಯದ ಆವರಣದಲ್ಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಬಿಳಿ ಅಮೃತಶಿಲೆಯಲ್ಲಿ ಕೆತ್ತಿ ಸ್ಥಾಪನೆ ಮಾಡಲಾಗಿದೆ. ಒಟ್ಟಿನಲ್ಲಿ ಕುದ್ರೋಳಿ ಭಗವತಿ ಕ್ಷೇತ್ರವು ತನ್ನದೇ ಆದ ಕಾರಣೀಕ ಶಕ್ತಿಯ ಮೂಲಕ ಆರಾಧ್ಯ ಕೇಂದ್ರವಾಗಿ ಹೊರ ಹೊಮ್ಮಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: