ಕಂಬಳದಲ್ಲಿ ಹಲವು ನಿಯಮಗಳ ಸೇರ್ಪಡೆ; ಏನೆಲ್ಲಾ ಬದಲಾವಣೆ?

ಕಂಬಳದಲ್ಲಿ ನಡೆಯುವ ಎಲ್ಲಾ ಆಯಾಮಗಳು ನಿಯಮದ ಚೌಕಟ್ಟಿನಲ್ಲಿ ಬರಬೇಕೆಂದು ಕಂಬಳ ಸಮಿತಿ ನಿರ್ಧಾರ ಮಾಡಿದೆ.

ಕಂಬಳ

ಕಂಬಳ

 • Share this:
  ಮಂಗಳೂರು (ಜು. 21):  ಕರಾವಳಿಯ ಜಾನಪದ ಕ್ರೀಡೆ ಕಂಬಳ .ಕಂಬಳ ಕ್ಕೆ ಮಾರುಹೋಗದ ಕರಾವಳಿಗನಿಲ್ಲ. ಕಂಬಳ‌ನೋಡದ ಅಭಿಮಾನಿಯಿಲ್ಲ‌.ಅಷ್ಟರ ಮಟ್ಟಿಗೆ ಕಂಬಳ ಪ್ರಸಿದ್ಧಿ. ಹಗಲು-ರಾತ್ರಿ ನಡೆಯುವ ಕಂಬಳ ಕೂಟದಲ್ಲಿ ಸಾವಿರಾರು ಜನ ಭಾಗವಹಿಸುತ್ತಾರೆ. ರಾತ್ರಿ ಯ ನಿದ್ದೆ ಬಿಟ್ಟು ಕಂಬಳ ದ ಕೋಣಗಳ ಓಟದ ಅಂದವನ್ನು ನೋಡೋದಕ್ಕೇನೇ ಲಕ್ಷಾಂತರ ಕಣ್ಣುಗಳು ಕಾಯುತ್ತಿರುತ್ತದೆ. ಹೀಗಿರುವಾಗ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ವಿಶ್ವ ಮಾನ್ಯತೆ ದೊರಕಿದೆ. ಕಂಬಳ ಪ್ರಸಿದ್ಧಿಯ ಉತ್ತುಂಗದಲ್ಲಿರುವಂತೆಯೇ ಕಂಬಳ ದ ಕೆಲ ನಿಯಮಗಳನ್ನು ಮಾರ್ಪಾಟು ಮಾಡಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ. ಕಂಬಳದಲ್ಲಿ ನಡೆಯುವ ಎಲ್ಲಾ ಆಯಾಮಗಳು ನಿಯಮದ ಚೌಕಟ್ಟಿನಲ್ಲಿ ಬರಬೇಕೆಂದು ಕಂಬಳ ಸಮಿತಿ ನಿರ್ಧಾರ ಮಾಡಿದೆ.

  ಕಂಬಳ ಶಿಸ್ತು ಪಾಲನಾ ಸಮಿತಿ ಕಂಬಳ ನಿಯನದಲ್ಲಿ ಹಲವು ಮಾರ್ಪಾಟುಗಳನ್ನು ಮಾಡಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಹಲವು ನಿರ್ಧಾರ ಗಳನ್ನು ಮಾಡಿದೆ. ಒಬ್ಬ ಓಟಗಾರ ನಿಗೆ ಮೂರು ಜೊತೆ ಕೋಣೆಗಳನ್ನು ಓಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಒಂದೇ ತಂಡದ ಎರಡು ಜೊತೆ ಯ ಕೋಣಗಳಿದ್ದರೆ ಮಾತ್ರ 4 ಜೊತೆ ಕೋಣಗಳನ್ನು ಓಡಿಸಬಹುದಾಗಿದೆ. ಇದರಿಂದ ಹೊಸ ಓಟಗಾರರಿಗೆ ಅವಕಾಶ ನೀಡಿದಂತಾಗುತ್ತದೆ.

  ಇನ್ನು ಕಂಬಳವನ್ನು 24 ಗಂಟೆಯೊಳಗೆ ಮುಗಿಸಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ. ಬೆಳಗ್ಗೆ 9 ಗಂಟೆಗೆ ಕಂಬಳ ಆರಂಭ ಮಾಡಿ ಮರುದಿನ ಬೆಳಿಗ್ಗೆ9 ಗಂಟೆಗೆ ಕಂಬಳವನ್ನು ಮುಗಿಸಬೇಕೆಂದು ತೀರ್ಮಾನ ಮಾಡಲಾಗಿದೆ.

  ಕಂಬಳ ವಿಳಂಬವಾಗುವುದನ್ನು ತಪ್ಪಿಸಲು ಕಂಬಳ ಕೋಣಗಳನ್ನು 5 ನಿಮಿಷದ ಒಳಗಾಗಿ ಕಂಬಳದ ಗದ್ದೆಗೆ ತೆರಬೇಕೆಂಬ ನಿಯಮ ಮಾಡಲಾಗಿದೆ. ತಡವಾದರೆ ಆ ತಂಡವನ್ನು ಕೈ ಬಿಟ್ಟು ವಾಕ್ ಓವರ್ ಅಂತಾ ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ.

  ಇದನ್ನು ಓದಿ: 2024ರವರೆಗೂ ಸೋನಿಯಾ ಗಾಂಧಿಯೇ ಕಾಂಗ್ರೆಸ್​ ಅಧ್ಯಕ್ಷೆ

  ಇನ್ನು ಕಂಬಳದ‌ ತೀರ್ಪುಗಾರರ ಮದ್ಯಪಾನ ಮಾಡಿ ಬರುವಂತಿಲ್ಲ ಎಂಬುವುದಾಗಿ ಆದೇಶ ಮಾಡಲಾಗಿದೆ. ಇನ್ನು ಕಂಬಳದ ಬಗ್ಗೆ ಯಾವುದಾದರೂ ದೂರುಗಳಿದ್ದರೂ ಜಿಲ್ಲಾ ಕಂಬಳ ಸಮಿತಿಯ ಗಮನಕ್ಕೆ ತರಬೇಕು. ಯಾವುದಾದರೂ ತಂಡ ದ ತಪ್ಪು ಸಾಬೀತಾದರೆ ಒಂದು ವರ್ಷಗಳ‌ ಕಾಲ ಆ ತಂಡವನ್ನು ಕಂಬಳದಿಂದ ಅಮಾನತು ಮಾಡುವ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ..ಕಂಬಳ ಓಟಗಾರರು ಮತ್ತು ಕೋಣಗಳ ಯಜಮಾನರು ಕಂಬಳ ಸಮಿತಿಯ ಸದಸ್ಯತ್ವ ಪಡೆಯಬೇಕೆಂಬ ನಿರ್ಧಾರವನ್ನೂ ಮಾಡಲಾಗಿದೆ.

  ಕಂಬಳದಲ್ಲಿ ಕನೆಹಲಗೆ, ಹಗ್ಗದ ಹಿರಿಯ, ಹಗ್ಗದ ಕಿರಿಯ, ನೇಗಿಲು ಕಿರಿಯ, ನೇಗಿಲು ಹಿರಿಯ ಎಂಬ ವಿಧಗಳಿವೆ. ಕಂಬಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ,ಕಾಸರಗೋಡು ಜಿಲ್ಲೆಯಲ್ಲೂ ನಡೆಯುತ್ತದೆ. ನವೆಂಬರ್ ಎರಡನೇ ವಾರದಲ್ಲಿ ಕಂಬಳ ಆರಂಭವಾಗುವ ಕಂಬಳ ಎಪ್ರಿಲ್ ತಿಂಗಳಿನವರೆಗೂ ನಡೆಯುತ್ತದೆ. ದಕ್ಷಿಣ ಕನ್ನಡ,ಉಡುಪಿ,ಮತ್ತು ಕಾಸರಗೋಡು ಜಿಲ್ಲೆಯಲ್ಲೂ ಕಂಬಳ ನಡೆಯುತ್ತದೆ. ಆಧುನಿಕ ಕಂಬಳದಲ್ಲಿ  ಹಲವು ನಿಯಮಗಳನ್ನು ಮಾಡಲಾಗಿದೆ..ಕಂಬಳದ ಗದ್ದೆಯಲ್ಲಿ ಕಂಬಳದ ಕೋಣವನ್ನು ಬಿಡುವ ಸಂದರ್ಭದಲ್ಲಿ ಲೇಸರ್ ತಂತ್ರಜ್ಞಾನ ವನ್ನು ಮಾಡಲಾಗಿದೆ. ಕೋಣಗಳನ್ನು ಗುರಿ ತಲುಪುವ ಸಂದರ್ಭದಲ್ಲೂ ಲೇಸರ್ ತಂತ್ರಜ್ಞಾನ ದ ಮೂಲಕ ತೀರ್ಪು ನೀಡಲಾಗುತ್ತದೆ. ಹೀಗಾಗಿ ಮತ್ತಷ್ಟು ತಂತ್ರಜ್ಞಾನ ವನ್ನು ಉಪಯೋಗಿಸುವ ಮೂಲಕ ಕಂಬಳಕ್ಕೆ ನೂತನ ಸ್ಪರ್ಶ ನೀಡಲು ಕಂಬಳ ಸಮಿತಿ ನಿರ್ಧಾರ ಮಾಡಿದೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: