ಮಾಜಿ ಶಾಸಕರ ಸೊಸೆಗೆ ISIS ನಂಟು.. ಮಂಗಳೂರಿನಲ್ಲಿ NIAನಿಂದ ಬಂಧನ: ಹಿಂದೂ ಯುವತಿ ಹೀಗಾಗಿದ್ದೇಗೆ?

ಮೂಲತಃ ಹಿಂದೂ ಧರ್ಮದವಳಾದ ದೀಪ್ತಿ ಮಾರ್ಲ ಕೊಡಗು ಮೂಲದಾಕೆ. ಮುಸ್ಲಿಂ ಆಗಿ ಮತಾಂತರಗೊಂಡು10 ವರ್ಷಗಳ ಹಿಂದೆ ಅನಾಸ್ ಅಬ್ದುಲ್ ರೆಹಮಾನ್ ನನ್ನು ಮದುವೆಯಾಗಿ ಕಟ್ಟರ್ ಮೂಲಭೂತವಾದಿಯಾದಳು.

ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ

ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ

  • Share this:
ಮಂಗಳೂರು: ಕರಾವಳಿಯ ಮಾಜಿ ಶಾಸಕ ಇದಿನಬ್ಬ (Ullala ex MLA Idinabba) ಪುತ್ರನ ಮನೆಗೆ NIA ಅಧಿಕಾರಿಗಳು ಎರಡನೇ ಬಾರಿ‌ ದಾಳಿ ನಡೆಸಿದ್ದಾರೆ. ಕಳೆದ ಬಾರಿ ಇದಿನಬ್ಬ ಪುತ್ರನ ಮಗನನ್ನ ಅರೆಸ್ಟ್ (Arrest) ಮಾಡಿದ್ದರೆ, ಈ ಬಾರಿ‌ ಸೊಸೆಯನ್ನ (Daughter in Law) ಬಂಧಿಸಿ ದೆಹಲಿಗೆ ಕರೆದೊಯ್ಯಲಿದ್ದಾರೆ. ಉಗ್ರ ಸಂಘಟನೆ ಐಸಿಸ್ ಜೊತೆ ನಂಟಿದ್ದ ಈ ಮಹಿಳೆಯನ್ನು NIA ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.  ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ದಿ.ಇದಿನಬ್ಬ ಪುತ್ರ ಬಿ.ಎಂ ಭಾಷಾ ಮನೆಗೆ ಎನ್.ಐ.ಎ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ‌. ದೆಹಲಿಯಿಂದ ಬಂದಿದ್ದ ಎನ್.ಐ.ಎ ತನಿಖಾಧಿಕಾರಿ ಡಿ.ಎಸ್ಪಿ ಕೃಷ್ಣಕುಮಾರ್ ನೇತೃತ್ವದ ಮೂವರ ತಂಡ ಈ ದಾಳಿ ನಡೆಸಿದೆ.

ಮರಿಯಂ ಬಂಧನ 

ಈ ಸಂದರ್ಭ ಬಿ.ಎಂ ಭಾಷಾ ಸೊಸೆ‌‌‌ ದೀಪ್ತಿ ಮಾರ್ಲಾ ಆಲಿಯಾಸ್ ಮರಿಯಂ ಅವರನ್ನು ಉಗ್ರ ಸಂಘಟನೆ ಐಸಿಸ್ ಜೊತೆ ನಂಟು‌ ಹೊಂದಿರುವ ಆರೋಪದಲ್ಲಿ ಬಂಧಿಸಲಾಗಿದೆ.‌ ದೀಪ್ತಿ‌ ಮಾರ್ಲನನ್ನು ಬಂಧಿಸಿ ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದುಕೊಂಡು ಎನ್ ಐಎ ತಂಡ ವೆನ್ ಲಾಕ್ ಜಿಲ್ಲಾಸ್ಪತ್ರೆಗೆ ಕರೆ ತಂದಿತ್ತು. ಮರಿಯಂ ಆರೋಗ್ಯ ತಪಾಸಣೆ ಬಳಿಕ ಜಿಲ್ಲಾ ಕೋರ್ಟ್ ಗೆ ಹಾಜರುಪಡಿಸಿ ದೆಹಲಿಗೆ ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಿದ್ದಾರೆ.

ಇದನ್ನೂ ಓದಿ: High Court: ಅಕ್ರಮ ಸಂಬಂಧ ಬಯಲುಮಾಡಲು ವೈದ್ಯಕೀಯ ದಾಖಲೆಗಳನ್ನು ಬಳಸುವಂತಿಲ್ಲ

2ನೇ ಬಾರಿ NIA ದಾಳಿ 

ಕಳೆದ ಬಾರಿ ಆಗಸ್ಟ್ 4ರಂದು ದಾಳಿ ನಡೆಸಿದ್ದ ಎನ್.ಐ ಅಧಿಕಾರಿಗಳ ತಂಡ ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅಮ್ಮರ್ ನನ್ನು ಬಂಧಿಸಿತ್ತು. ಈ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಅಬ್ದುಲ್ ರೆಹಮಾನ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೆಯು ಅನುಮಾನ ಬಂದಿತ್ತು. ಆದ್ರೆ ಮರಿಯಂ ಗೆ ಸಣ್ಣ ಮಗುವಿದ್ದ ಕಾರಣ ಕೇವಲ ವಿಚಾರಣೆ ನಡೆಸಿ ಎನ್.ಐ.ಎ ಅಧಿಕಾರಿಗಳು ಬಿಟ್ಟಿದ್ದರು. ಆದ್ರೆ ಇದೀಗ ದಾಳಿ ನಡೆಸಿ ಐದು ತಿಂಗಳ ಬಳಿಕ ಮತ್ತೆ ದಾಳಿ ನಡೆಸಿ ದೀಪ್ತಿ ಆಲಿಯಾಸ್ ಮರಿಯಂ ನ್ನು ಉಘ್ರ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿಸಲಾಗಿದೆ‌.

ಹಿಂದೂ ಯುವತಿ ಕಟ್ಟರ್​​ ಮೂಲಭೂತವಾದಿಯಾದಳು 

ಮೂಲತಃ ಹಿಂದು ಧರ್ಮದವಳಾದ ದೀಪ್ತಿ ಮಾರ್ಲ ಕೊಡಗು ಮೂಲದವಳು. ಮುಸ್ಲಿಂ ಆಗಿ ಮತಾಂತರಗೊಂಡು 10 ವರ್ಷಗಳ ಹಿಂದೆ ಅನಾಸ್ ಅಬ್ದುಲ್ ರೆಹಮಾನ್ ನನ್ನು ಮದುವೆಯಾಗಿ ಕಟ್ಟರ್ ಮೂಲಭೂತವಾದಿಯಾಗಿದ್ದಳು. ಈಕೆ ಜಮ್ಮು ಕಾಶ್ಮೀರದ ಉಗ್ರ ಜೊತೆ ಡೈರೆಕ್ಟ್ ಲಿಂಕ್ ಹೊಂದಿದ್ದಳು. ಇಲ್ಲಿಂದಲೇ ಐಸಿಸ್ ನೆಟ್ವರ್ಕ್ ಗೆ ಯುವಕರನ್ನು ಸೇರ್ಪಡೆ ಮಾಡುವ ಕೃತ್ಯದಲ್ಲಿ ತೊಡಗಿದ್ದಳು. ದೇಶದ ಹಲವೆಡೆ ಬಂಧನವಾಗಿರುವ ಐಸಿಸ್ ನೆಟ್ವರ್ಕ್ ಸಂಬಂಧಿ‌ ಆರೋಪಿಗಳು ಈಕೆಯ ಹೆಸರನ್ನೇ ಹೇಳಿದ್ದರು.  ಹೀಗಾಗಿ ಮರಿಯಂನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅನಾರೋಗ್ಯ ಮುಚ್ಚಿಟ್ಟು ಮದುವೆಯಾಗುವುದು ಅಪರಾಧ: High Court ಮಹತ್ವದ ತೀರ್ಪು

ದೇಶಾದ್ಯಂತ ಹರಡಿಕೊಂಡಿರುವ ಐಸಿಸ್ ನೆಟ್ವರ್ಕ್ ಗಳ ಬಗ್ಗೆ ತನಿಖೆಯನ್ನು ಎನ್.ಐ.ಎ ಅಧಿಕಾರಿಗಳು ಚುರುಕುಗೊಳಿಸುದ್ದು ಮರಿಯಂ ಹೆಚ್ಚಿನ ವಿಚಾರಣೆ ಬಳಿಕ ಏನೆಲ್ಲಾ ಮಾಹಿತಿ ಹೊರಬರಲಿದೆ ಎಂದು‌ಕಾದುನೋಡಬೇಕಿದೆ.ನಾಳೆ ಮರಿಯಂ ನ ಜೊತೆ ಎನ್ಐಎ ತಂಡ ದೆಹಲಿ ಗೆ ತೆರಳಲಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಂದರೇನು? 

ಇದು ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದೆ. ಗೃಹ ಸಚಿವಾಲಯದ ಲಿಖಿತ ಘೋಷಣೆಯ ಅಡಿಯಲ್ಲಿ ರಾಜ್ಯಗಳಿಂದ ವಿಶೇಷ ಅನುಮತಿಯಿಲ್ಲದೆ ರಾಜ್ಯಗಳಾದ್ಯಂತ ಭಯೋತ್ಪಾದನೆ ಸಂಬಂಧಿತ ಅಪರಾಧಗಳ ತನಿಖೆಯನ್ನು ಎದುರಿಸಲು ಏಜೆನ್ಸಿಗೆ ಅಧಿಕಾರವಿದೆ. ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನಂತರ ಅಂಗೀಕರಿಸಲ್ಪಟ್ಟ 31 ಡಿಸೆಂಬರ್ 2008 ರಂದು ಭಾರತದ ಸಂಸತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008 ಅನ್ನು ಜಾರಿಗೊಳಿಸುವುದರೊಂದಿಗೆ ಏಜೆನ್ಸಿಯು ಅಸ್ತಿತ್ವಕ್ಕೆ ಬಂದಿತು.
Published by:Kavya V
First published: