Mangalore Crime News: 2 ವರ್ಷದ ಮಗುವಿನ ಮೇಲೆ ಕಾಮುಕನ ಅಟ್ಟಹಾಸ; ತಲೆಬೋಳಿಸಿ ಗೂಸಾ ಕೊಟ್ಟ ಸ್ಥಳೀಯರು!

ವಿಕೃತಕಾಮಿ ಚಂದನ್ ಮಗುವಿನ ಮೇಲೆ ವಿಕೃತಿ ಮೆರೆದ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಸ್ಥಳೀಯ ನಿವಾಸಿಗಳು ಆರೋಪಿಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ..ಅರ್ಧ ತಲೆ ಬೋಳಿಸಿ ಹಿಗ್ಗಾಮುಗ್ಗ ಜಾಡಿಸಿದ್ದಾರೆ.

ಬಂಧಿತ ಆರೋಪಿ

ಬಂಧಿತ ಆರೋಪಿ

  • Share this:
ಮಂಗಳೂರು: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು (rape cases) ಹೆಚ್ಚಾಗುತ್ತಿದೆ. ಇಲ್ಲೊಬ್ಬ ಕಾಮುಕ ಏನು ಅರಿಯದ ಎರಡು ವರ್ಷದ ಮಗುವಿನ (2 year old baby) ಮೇಲೆರಗಿದ್ದಾನೆ.  ವಿಕೃತಿ ಮೆರೆದ ಕಾಮುಕನಿಗೆ ಸ್ಥಳೀಯರೇ ತಕ್ಕ ಶಾಸ್ತಿ ಮಾಡಿದ್ದಾರೆ. ಕಡಲನಗರಿಯಲ್ಲಿ ಕಾಮುಕನೊಬ್ಬ ಎರಡು ವರ್ಷದ ಮಗುವನ್ನು ತನ್ನ ಕಾಮತೃಷೆಗೆ (sexual assault) ಬಳಸಿಕೊಂಡು ವಿಕೃತಿ ಮೆರೆದಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡ್ತಿದ್ದ ಬಿಹಾರ ಮೂಲದ ದಂಪತಿಯ ಎರಡು ವರ್ಷದ ಮಗುವಿನ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯನ್ನು ಚಂದನ್ ಎಂದು ಗುರುತಿಸಲಾಗಿದ್ದು ಈತನು ಸಹ ಬಿಹಾರ ಮೂಲದವನಾಗಿದ್ದಾನೆ.

ಮಗುವನ್ನು ಅಪಹರಿಸಿ ವಿಕೃತಿ ಮೆರೆದ ಪಾಪಿ 

ಸಂಸ್ಕರಣಾ ಘಟಕದ ಸಮೀಪದಲ್ಲೇ ಬಿಹಾರ ಮೂಲದ ಸುಮಾರು 30 ಕುಟುಂಬ ವಾಸಿಸುತ್ತಿದೆ. ಇಲ್ಲಿ ಪೋಷಕರು ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಇಲ್ಲೇ ಒಂದು ಕೋಣೆಯಲ್ಲಿ ಬಿಟ್ಟು ಹೋಗುತ್ತಾರೆ. ಇದೇ ರೀತಿ ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಎರಡು ವರ್ಷದ ಮಗುವನ್ನು ಆರೋಪಿ ಚಂದನ್ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿ ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ. ಸಂಜೆ ನಾಲ್ಕು ಗಂಟೆವರೆಗೂ ಫಿಶ್ ಕಟ್ಟಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದ ದಂಪತಿ ಫ್ಯಾನ್ ಖರೀದಿಗೆಂದು ನಗರಕ್ಕೆ ಬಂದಿದ್ದಾರೆ. ಈ ಸಂದರ್ಭ ಮಗುವನ್ನು ಆರೋಪಿ ಅಪಹರಿಸಿದ್ದಾನೆ. ಸಂಜೆ ಆರು ಗಂಟೆಗೆ ಬಂದು ನೋಡಿದಾಗ ಮಗು ಇಲ್ಲದಿರುವುದನ್ನು ಕಂಡು ಮಗುವಿನ ಪೋಷಕರು ಹುಡುಕಾಡಿದ್ದಾರೆ. ಸ್ಥಳೀಯ ರನ್ನು ವಿಚಾರಿಸಿದ್ದಾರೆ.‌

ನೀರಿನ ಟ್ಯಾಂಕ್‌ನಲ್ಲಿ ಮಗು ಪತ್ತೆ

ಸುಮಾರು ಎರಡು ಗಂಟೆಗಳ ಕಾಲ ಹುಡುಕಾಟ ಮಾಡಿದ್ದಾರೆ. ಕೊನೆಗೆ ಅಲ್ಲೇ ಸಮೀಪದಲ್ಲಿನ ಉಪ್ಪು ನೀರಿನ ಟ್ಯಾಂಕ್‌ನಲ್ಲಿ ಮಗು ಪತ್ತೆಯಾಗಿದೆ. ಬಳಿಕ ಪ್ರಜ್ಞೆ ತಪ್ಪಿದ್ದ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಗೊತ್ತಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಚಂದನ್ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿ ಚಂದನ್ ಅಂದರ್ ಆಗಿದ್ದಾನೆ.

ತಲೆ ಬೋಳಿಸಿ ಹಿಗ್ಗಾಮುಗ್ಗ ಹಲ್ಲೆ 

ವಿಕೃತಕಾಮಿ ಚಂದನ್ ಮಗುವಿನ ಮೇಲೆ ವಿಕೃತಿ ಮೆರೆದ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಸ್ಥಳೀಯ ನಿವಾಸಿಗಳು ಆರೋಪಿಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ..ಅರ್ಧ ತಲೆ ಬೋಳಿಸಿ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಅರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಮಗುವಿಗೆ ವೆನ್ಲಾಕ್ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಚೇತರಿಸಿಕೊಳ್ಳುತಿದ್ದು ಪ್ರಾಣಾಪಾಯದಿಂದ ಪಾರಾಗಿದೆ. ಒಟ್ಟಿನಲ್ಲಿ ಮಗುವಿನ ಮೇಲೆ ತನ್ನ ಕಾಮತೃಷೆ ತೀರಿಸಿಕೊಳ್ಳಲು ಮುಂದಾದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನೋದು ನಾಗರಿಕರ ಒತ್ತಾಯವಾಗಿದೆ.

ಇದನ್ನೂ ಓದಿ: Kalaburagi Crime News: ತಂಗಿಯನ್ನು ಓಡಿಸಿಕೊಂಡು ಹೋಗಿದವನ ಹೆಣ ಕೆಡವಿದ್ದ ಅಣ್ಣ; ಆರೋಪಿಗಳು ಅಂದರ್

ಇನ್ನು ಇತ್ತೀಚೆಗೆ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ 23 ವರ್ಷದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಭಯಾನಕ ಘಟನೆ ಕೇರಳದ (kerala) ಕೊಂಡೊಟ್ಟಿ ನಗರದಲ್ಲಿ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಅಪ್ರಾಪ್ತ ಬಾಲಕ ಆಕೆ ಪ್ರತಿರೋಧ ತೋರಿ ಓಡಿ ಹೋಗಲು ಮುಂದಾದ ಆಕೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.ಮಹಿಳೆಯನ್ನು ಹಿಂಬಾಲಿಸಿದ ಬಾಲಕ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಓಡಲು ಮುಂದಾಗಿದ್ದಾಳೆ. ಆದರೂ ಬಿಡದ ಆತ ಆಕೆಯ ಕೈಗಳನ್ನು ಹಟ್ಟಿ ಹಲ್ಲಿನಿಂದ ಹಲ್ಲೆ ನಡೆಸಿದ್ದಾನೆ.ಈ ವೇಳೆ ಹಾಗೂ ಹೀಗೂ ಮಾಡಿ ತಪ್ಪಿಸಿಕೊಂಡ ಮಹಿಳೆ ಸಮೀಪವಿದ್ದ ಮನೆಗೆ ಓಡಿ ಹೋಗಿದ್ದಾಳೆ. ಬಳಿಕ ಮನೆಯಲ್ಲಿದ್ದ ಮಹಿಳಾ ಸುರಕ್ಷತಾ ಆಲರಂ ಹೊಡೆದಿದ್ದಾಳೆ. ತಕ್ಷಣಕಕೆ ಕೊಂಡೊಟ್ಟಿ ಪುರಸಭೆಯ ಕೊಟ್ಟುಕ್ಕರ ವಾರ್ಡ್​ ಕೌನ್ಸಿಲರ್ ಸ್ಥಳಕ್ಕೆ ಬಂದು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ
Published by:Kavya V
First published: