Island Village: ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮ; ಜೀವ ಕೈಯಲ್ಲಿ ಹಿಡಿದೇ ಬದುಕಬೇಕು ಜನ!

ಮೂಲಭೂತ ಸೌಕರ್ಯಗಳೆನ್ನುವುದು ಈ ಗ್ರಾಮದ ಜನರಿಗೆ ನಿಲುಕದ ನಕ್ಷತ್ರ. ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯವಾಗಿ ಬೇಕಾದ ಆಸ್ಪತ್ರೆ, ಶಿಕ್ಷಣಕ್ಕೆ ಬೇಕಾದ ಶಾಲೆಗಾಗಿ ಈ ಗ್ರಾಮದ ಜನ ತನ್ನ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸ್ಥಿತಿಯಿದೆ!

ಕಾಲು ಸಂಕದ ಮೇಲೆ ಗ್ರಾಮಸ್ಥರ ಸಾಹಸ

ಕಾಲು ಸಂಕದ ಮೇಲೆ ಗ್ರಾಮಸ್ಥರ ಸಾಹಸ

  • Share this:
ದಕ್ಷಿಣ ಕನ್ನಡ: ಮಳೆಗಾಲ (Rainy Season) ಆರಂಭಗೊಂಡಿತೆಂದರೆ ಆ ಗ್ರಾಮದ (Village) ಜನರಿಗೆ (People) ಎಲ್ಲಿಲ್ಲದ ದಿಗಿಲು. ಈ ಬಾರಿಯ ಮಳೆಗಾಲವನ್ನು ಹೇಗೆ ಕಳೆಯುವುದು ಎನ್ನುವ ಭಯ. ಹೌದು ಇದು ದಕ್ಷಿಣ ಕನ್ನಡ (Dakhsina Kannada) ಜಿಲ್ಲೆಯ ಕುಗ್ರಾಮವೊಂದರ ಮಳೆಗಾಲದ ಕಥೆ. ಪ್ರತಿ ಮಳೆಗಾಲವನ್ನೂ ಜೀವ ಕೈಯಲ್ಲೇ ಹಿಡಿದು ಕಳೆಯುವುದು ಈ ಗ್ರಾಮದ ಜನರ ವ್ಯಥೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಸಿರಿಬಾಗಿಲು (Siri Bagilu) ಗ್ರಾಮದ ತೇರೆಬೀದಿ, ಅಮ್ಟೂರು ಗ್ರಾಮದ ಜನರ ಪ್ರತಿದಿನದ ವ್ಯಥೆ. ಪಶ್ಚಿಮ ಘಟ್ಟದ (Western Ghat) ತಪ್ಪಲಿನ ದಟ್ಟ ಅರಣ್ಯಗಳ (Forest) ನಡುವೆ ಇರುವ ಈ ಗ್ರಾಮದ ಜನರಿಗೆ ಮಳೆಗಾಲ, ಬೇಸಿಗೆ ಕಾಲ (Summer), ಚಳಿಗಾಲ (Winter) ಎಲ್ಲವೂ ಒಂದೇ.

ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ

ಮೂಲಭೂತ ಸೌಕರ್ಯಗಳೆನ್ನುವುದು ಈ ಗ್ರಾಮದ ಜನರಿಗೆ ನಿಲುಕದ ನಕ್ಷತ್ರ. ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯವಾಗಿ ಬೇಕಾದ ಆಸ್ಪತ್ರೆ, ಶಿಕ್ಷಣಕ್ಕೆ ಬೇಕಾದ ಶಾಲೆಗಾಗಿ ಈ ಗ್ರಾಮದ ಜನ ತನ್ನ ಜೀವ ಕೈಯಲ್ಲಿಟ್ಟು ಸಾಗಬೇಕಾದ ಸ್ಥಿತಿಯಿದೆ. ತೇರೆಬೀದಿ, ಅಮ್ಚೂರು ಗ್ರಾಮದ ಜನ ತಮ್ಮ ಅವಶ್ಯಕತೆಗಳಿಗಾಗಿ ಸುಬ್ರಮಣ್ಯ ಅಥವಾ ಗುಂಡ್ಯಾ ಪ್ರದೇಶವನ್ನೇ ಅವಲಂಭಿಸಬೇಕಾಗಿದ್ದು, ಈ ಪ್ರದೇಶಗಳಿಗೆ ತೆರಳಬೇಕಾದಲ್ಲಿ ದೊಡ್ಡದಾದ ಹಳ್ಳವೊಂದನ್ನು ದಾಟುವ ಅನಿವಾರ್ಯತೆ ಇದೆ.

ಮಳೆಗಾಲದಲ್ಲಿ ಬದುಕು ತುಂಬಾ ಕಷ್ಟ

ಬೇಸಿಗೆ ಕಾಲದಲ್ಲಿ ಹಳ್ಳದಲ್ಲಿ ನೀರಿನ ಅಂಶ ಕೊಂಚ ಇಳಿಮುಖವಾಗುವ ಕಾರಣಕ್ಕಾಗಿ ಜನ ಹಳ್ಳದಲ್ಲೇ ದಾಟುತ್ತಾರೆ. ಆದರೆ ಮಳೆಗಾಲದಲ್ಲಿ ಈ ಊರಿನ ಮಕ್ಕಳು ಒಂದು ಕಡೆ, ಪೋಷಕರು ಒಂದು ಕಡೆ ಉಳಿಯಬೇಕಾದ ಸ್ಥಿತಿಯಿದೆ. ಮಳೆಗಾಲದಲ್ಲಿ ಈ ಹಳ್ಳ ತುಂಬಿ ಹರಿಯುವ ಕಾರಣ ಇದಕ್ಕೆ ಅಡ್ಡಲಾಗಿ ಕಟ್ಟುವ ಅಡಿಕೆ ಮರದ ಪಾಲವೂ ನೀರಿಗೆ ಕೊಚ್ಚಿ ಹೋಗುತ್ತದೆ.

ಇದನ್ನೂ ಓದಿ: House Damage: ಕುಸಿಯುವ ಹಂತದಲ್ಲಿರುವ ಮನೆಯಲ್ಲೇ ವೃದ್ಧ ದಂಪತಿ ವಾಸ! 2 ವರ್ಷಗಳಿಂದ ತಪ್ಪದ ಗೋಳಾಟ

ಈ ಗ್ರಾಮಗಳನ್ನು ಸಂಪರ್ಕಿಸಲು ಎರಡು ದಾರಿಗಳಿದ್ದರೂ, ಒಂದು ದಾರಿಯಲ್ಲಿ ಹಾಡಹಗಲೇ ಕಾಡಾನೆಗಳ ಹಾವಳಿಯಾದರೆ, ಇನ್ನೊಂದು ದಾರಿಯಲ್ಲಿ ನೀರಿನ ರೌದ್ರಾವತಾರವಿದೆ. ಕಳೆದ ವರ್ಷ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಪಾಲವನ್ನು ದಾಟುತ್ತಿದ್ದ ಸಂದರ್ಭದಲ್ಲಿ ಒಮ್ಮಗೇ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಹಳ್ಳದ ಮಧ್ಯದಲ್ಲೇ ಇದ್ದ ಮರವನ್ನು ಏರಿ ತಮ್ಮ ಜೀವವನ್ನು ಉಳಿಸಿಕೊಂಡಿದ್ದರು.

ಎಷ್ಟೇ ಮನವಿ ಕೊಟ್ಟರೂ ನಿರ್ಮಾಣವಾಗದ ಸೇತುವೆ

ಈ ಗ್ರಾಮದ ಜನ ಇಲ್ಲಿಗೆ ಒಂದು ಸೇತುವೆ ಇಲ್ಲವೇ ಒಂದು ತೂಗುಸೇ ತುವೆಯನ್ನಾದರೂ ಮಾಡಿ ಎನ್ನುವ ಬೇಡಿಕೆಯನ್ನು ಕಳೆದ ಹಲವು ವರ್ಷಗಳಿಂದ ಸಲ್ಲಿಸುತ್ತಲೇ ಇದ್ದಾರೆ. ಆದರೆ ಯಾರೂ ಇಷ್ಟರವರೆಗೂ ಇದರ ಬಗ್ಗೆ ಗಮನವನ್ನೇ ಹರಿಸಿಲ್ಲ. ಅಲ್ಲದೆ ವಿಶಾಲವಾಗಿ ಹರಿಯುತ್ತಿದ್ದ ಈ ಹಳ್ಳವನ್ನು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಅನುಕೂಲಕ್ಕಾಗಿ ಮಾರ್ಪಾಡು ಮಾಡಿದ್ದರಿಂದಲೂ ಈ ಗ್ರಾಮದ ಜನರಿಗೆ ತೊಂದರೆ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಈ ವ್ಯಕ್ತಿ ಪರಂಬೋಕು ಜಾಗವನ್ನು ತನ್ನ ಆಸ್ತಿಯಂತೆ ಅನುಭವಿಸುವ ಮೂಲಕ ಗ್ರಾಮವನ್ನು ಸಂಪರ್ಕಿಸುವ ಸಣ್ಣ ರಸ್ತೆಯನ್ನೂ ಕಬಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Akrama-Sakrama: ಮತ್ತೆ ಶುರುವಾಗಿದೆ ಅರಣ್ಯ ಅತಿಕ್ರಮಣದಾರರಿಗೆ ಆತಂಕ, ಅಕ್ರಮ-ಸಕ್ರಮಕ್ಕಾಗಿ ನಡೆಯುತ್ತಿದೆ ಹೋರಾಟ

ಮಳೆಗಾಲದಲ್ಲಿ ಬೇರೆಡೆ ವಲಸೆ ಹೋಗಬೇಕಾದ ಅನಿವಾರ್ಯತೆ

ಮಳೆಗಾಲದಲ್ಲಿ ಈ ಗ್ರಾಮದ ಜನ ಕೆಲವೊಮ್ಮೆ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಅಗತ್ಯ ಕೆಲಸಗಳಿಗಾಗಿ ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳಿದ ಜನ ಮಳೆ ಬಂದಾಗ ತಮ್ಮ ಗ್ರಾಮವನ್ನು ತಲುಪಲಾರದಂತಹ ಸ್ಥಿತಿ ಸಾಕಷ್ಟು ಬಾರಿ ಈ ಗ್ರಾಮದ ಜನರಿಗೆ ಎದುರಾಗಿದೆ.
Published by:Annappa Achari
First published: