DK Shivakumar: ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಡಿಕೆ ಶಿವಕುಮಾರ್​​

ಕೊರೋನಾ ಸೋಂಕಿನಿಂದಾಗಿ ಈಗಾಗಲೇ ರಾಜ್ಯದ ಜನರು ಆತಂಕದಲ್ಲಿದ್ದಾರೆ. ಸರ್ಕಾರದ ಬೇಜವಾಬ್ದಾರಿ ನಡೆಯಿಂದ ಜನ ಮತ್ತಷ್ಟು ಗೊಂದಲಕ್ಕೊಳಗಾಗಿದ್ದಾರೆ.

ಡಿಕೆ ಶಿವಕುಮಾರ್​ಗೆ ಸ್ವಾಗತಿಸಿದ ಕಾರ್ಯಕರ್ತರಯ

ಡಿಕೆ ಶಿವಕುಮಾರ್​ಗೆ ಸ್ವಾಗತಿಸಿದ ಕಾರ್ಯಕರ್ತರಯ

  • Share this:
ಮಂಗಳೂರು (ಮೇ. 24):  ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿನ ವೈದ್ಯರ ಭೇಟಿಗಾಗಿ ಅವರು ಬಂದಿಳಿದಿದ್ದಾರೆ. ಈ ವೇಳೆ ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಖಾಸಗಿ ಭೇಟಿಯಾಗಿದೆ. ವೈದ್ಯರ ಮೇರೆಗೆ ತಾವು ಬಂದಿದ್ದೇವೆ. ಲಾಕ್​ಡೌನ್​ ಜಾರಿಯಲ್ಲಿದ್ದು, ದೇವಸ್ಥಾನಗಳ ಭೇಟಿಗೆ ಅವಕಾಶವಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೆ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಾಗಿ ಅವರು ತಿಳಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್​ ನಾಯಕರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು  ಹೆಚ್ಚು ಕಂಡುಬರುತ್ತಿದೆ. ಈ ಬಗ್ಗೆ ಸರ್ಕಾರದ ಮಂತ್ರಿಗಳಿಗೆ ಸಮರ್ಪಕ ಮಾಹಿತಿಗಳಿಲ್ಲ. ಒಬ್ಬರು ಫಂಗಸ್ ಇದೆ ಅಂದ್ರೆ ಇನ್ನೊಬ್ಬರು ಫಂಗಸ್ ಅನ್ನೋದೆ ಇಲ್ಲ ಎನ್ನುತ್ತಿದ್ದಾರೆ.  ಫಂಗಸ್ ನಿಂದ ಯಾರೂ ಸತ್ತಿಲ್ಲ ಎಂದು ಮತ್ತೊಬ್ಬರು ಹೇಳುತ್ತಾರೆ. ಈ ಮೂಲಕ ಸಚಿವರಲ್ಲೇ ಗೊಂದಲ ಇದ್ದು, ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು,

ಕೊರೋನಾ ಸೋಂಕಿನಿಂದಾಗಿ ಈಗಾಗಲೇ ರಾಜ್ಯದ ಜನರು ಆತಂಕದಲ್ಲಿದ್ದಾರೆ. ಸರ್ಕಾರದ ಈ ಬೇಜವಾಬ್ದಾರಿ ನಡೆಯಿಂದ ಜನ ಮತ್ತಷ್ಟು ಗೊಂದಲಕ್ಕೊಳಗಾಗಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಈ ರೋಗಕ್ಕೆ ಬೇಕಾದ ಔಷಧ ಇಲ್ಲ ಎನ್ನುವುದ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರ ಸರ್ಕಾರ ಗುಜರಾತ್ ಗೆ ಔಷಧಿ ನೀಡಿದೆ. ಈ ಹಿನ್ನಲೆ  ರಾಜ್ಯ ಸರ್ಕಾರ  ಈ ಬಗ್ಗೆ ಎಚ್ಚೆತ್ತು ಗುಜರಾತಿನಿಂದಾದರೂ ಔಷಧಿ ತರಬೇಕು. ಆ ಮೂಲಕ ರಾಜ್ಯದ ಜನರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: 67ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಸಸಿ ನೆಡುವ ಮೂಲಕ ಆಚರಿಸಿದ ದೇವೇಗೌಡ ದಂಪತಿ

ಇನ್ನೂ ಚಿಕ್ಕಮಗಳೂರಿನಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಬಗ್ಗೆ ಯಾಕೆ ಮುಂದೆ ಹೋಗಿಲ್ಲ. ತಕ್ಷಣ ಇಲಾಖೆಯಿಂದ ಪ್ರಕರಣ ದಾಖಲು ಮಾಡಬೇಕು. ಸಚಿವ ಶ್ರೀರಾಮುಲು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಬೇಕು. ಮಾನವ ಹಕ್ಕುಗಳ ಆಯೋಗ ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಅಧಿಕಾರಿಗಳನ್ನು ಅಮಾನತು ಮಾಡಿವುದರಿಂದ ನ್ಯಾಯ ಸಿಗಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.

ಇನ್ನು ಎಂ.ಆರ್.ಪಿ.ಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿರುವ ಬಗ್ಗೆ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದ ಮಾತನಾಡಿದ ಅವರು, ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಪಾಲನೆಯಾಗುತ್ತಿಲ್ಲ. ನಿಯಮ ಪ್ರಕಾರ ಶೇ 78ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡಬೇಕೆಂಬ ಸೂಚನೆ ಇದೆ. ಆದರೂ ಇದನ್ನು ಪಾಲಿಸಲಾಗುತ್ತಿಲ್ಲ. ಕಟೀಲ್ ಸಾಹೇಬ್ರು ಕಂಪೆನಿ ಎಂಡಿ ಯನ್ನು ಕರೆದು ಸಭೆ ಮಾಡಬೇಕು. ಹಿಂದಿನ ಪಟ್ಟಿಯನ್ನು ರದ್ದು ಮಾಡಬೇಕು. ಇಲ್ಲವಾದಲ್ಲಿ ಕರಾವಳಿ ಮತ್ತು ಮಲೆನಾಡಿನ ಜನ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
Published by:Seema R
First published: