ಗ್ರಾಮೀಣಾಭಿವೃದ್ಧಿ ಇಲಾಖೆಯ ಮೇಲೆ ಆಸಕ್ತಿ ಇತ್ತು; ಕೋಟಾ ಶ್ರೀನಿವಾಸ ಪೂಜಾರಿ

ಈಗ ದೊರಕಿರುವ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸರಕಾರದ ಬಹುದೊಡ್ಡ ಮತ್ತು ಬಡವರ ಮಧ್ಯೆ ಕೆಲಸ ಮಾಡಲು ಅವಕಾಶವಿರುವ ಇಲಾಖೆ

ಕೋಟಾ ಶ್ರೀನಿವಾಸ ಪೂಜಾರಿ

ಕೋಟಾ ಶ್ರೀನಿವಾಸ ಪೂಜಾರಿ

  • Share this:
ಮಂಗಳೂರು (ಆ. 8):  ಯಾವುದೇ ಖಾತೆಯು ಓರ್ವ ಸಚಿವನಿಗೆ ಖಾಯಂ ಆಗಿ ನೀಡಬೇಕೆಂದೇನು ಇಲ್ಲ. ಎರಡು ಬಾರಿ ನನಗೆ ಮುಜರಾಯಿ ಇಲಾಖೆ ದೊರಕಿತ್ತು. ಅದರಲ್ಲಿ ಸ್ವಲ್ಪ ಕೆಲಸ ಮಾಡಿರುವ ತೃಪ್ತಿಯಿದೆ. ಈಗ ದೊರಕಿರುವ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸರಕಾರದ ಬಹುದೊಡ್ಡ ಮತ್ತು ಬಡವರ ಮಧ್ಯೆ ಕೆಲಸ ಮಾಡಲು ಅವಕಾಶವಿರುವ ಇಲಾಖೆ. ಈ ಎರಡೂ ಖಾತೆಗಳಲ್ಲಿ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಲು ಅವಕಾಶವಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.  

ನೂತನವಾಗಿ ಸಚಿವ ಸ್ಥಾನ ದೊರಕಿದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿರುವ ಅವರು, ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಎಲ್ಲರಿಗೂ ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳ ಖಾತೆ ಬೇಕೆಂದೆನಿಸುವುದು ತಪ್ಪಲ್ಲ. ನನಗೂ ಬಹಳಷ್ಟು ಮಂದಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ತೆಗೆದುಕೊಳ್ಳಲು ಸಲಹೆ ಸೂಚನೆ ನೀಡಿದ್ದರು. ಆದರೆ ಇದೇ ಖಾತೆಯಲ್ಲಿ ಬಹಳಷ್ಟು ಅನುಭವ ಇರುವ ಈಶ್ವರಪ್ಪನವರಿಗೆ ಈ ಖಾತೆ ದೊರಕಿದೆ. ಈ ಬಗ್ಗೆ ನನಗೂ ಸಂತೋಷವಿದೆ. ಅವರ ಜೊತೆಯಲ್ಲಿ ನಾವೆಲ್ಲಾ ಒಂದಾಗಿ ಕೆಲಸ ನಿರ್ವಹಿಸುತ್ತೇವೆ. ಶಶಿಕಲಾ ಜೊಲ್ಲೆಯವರು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರು. ಈ ಬಗ್ಗೆ ನಾನೂ ಅವರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡುವೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಹಾಸ್ಟೆಲ್, ದೇವರಾಜು ಅರಸು ನಿಗಮ ಸೇರಿದಂತೆ ಅನೇಕ ನಿಗಮಗಳ ಸಮಸ್ಯೆಗಳನ್ನು ಪರಿಹರಿಸಲು ಯೋಚನೆ ಮಾಡಿ ಕಾರ್ಯ ನಿರ್ವಹಣೆಗೆ ಯೋಚನೆ ಮಾಡುತ್ತಿದ್ದೇನೆ. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಅವಕಾಶವಿದೆ. ಅಲ್ಲಿನ ಸರ್ವ ಸಮಸ್ಯೆಗಳನ್ನು, ಅಗತ್ಯವಿರುವ ಸವಲತ್ತುಗಳ ಬಗ್ಗೆ ಅಧ್ಯಯನ ಮಾಡಿ, ಬೇರೆ ಬೇರೆ ಜನಾಂಗದವರ ಬದುಕು ರೂಪಿಸಿಕೊಳ್ಳಲು ಯಾವ ರೀತಿ ಅವಕಾಶಗಳಿವೆ, ಅಲ್ಲಿನ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರಲು ಯಾವುದೆಲ್ಲಾ ಸಾಧ್ಯತೆಗಳಿವೆ ಎಂಬುದರ ಬಗ್ಗೆಯೂ ಅಧ್ಯಯನ ಮಾಡಿ, ಒಂದು ವಾರದೊಳಗೆ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಯೋಚನೆ ಮಾಡುತ್ತಿದ್ದೇನೆ ಎಂದರು.

ಇದನ್ನು ಓದಿ: ಇಷ್ಟವಿಲ್ಲದ ಖಾತೆ, ಎಂಟಿಬಿ ನಾಗರಾಜ್​ ಕ್ಯಾತೆ: ರಾಜೀನಾಮೆ ನೀಡುವ ಸಾಧ್ಯತೆ

ಈ ತಿಂಗಳ ಬಳಿಕ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸೋದು ಅಗತ್ಯವಿದೆ. ಆದರೆ ಎಲ್ಲಾ ಹಬ್ಬ ಹರಿದಿನಗಳನ್ನು ನಿಯಂತ್ರಣ ಮಾಡೋದಿಲ್ಲ‌. ಆದರೆ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಆಚರಣೆ ಮಾಡಬೇಕಾಗಿದೆ. ಆದರೆ ಯಾವ ರೀತಿಯಲ್ಲಿ ಮಾಡಬೇಕೆಂದು ಜಿಲ್ಲಾಡಳಿತ ಸೂಚನೆ ನೀಡುತ್ತದೆ

ಕೋವಿಡ್ ನಿಯಮ ಮೀರಿ ನಿನ್ನೆ ಉಡುಪಿಯಲ್ಲಿ ಕಾರ್ಯಕ್ರಮ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಿನ್ನೆ ಕೋವಿಡ್ ನಿಯಮವನ್ನು ಮೀರಿ ಸಾಕಷ್ಟು ಜನ ಸೇರಿ ಸಂಭ್ರಮಾಚರಣೆ ಮಾಡಿರೋದು ಆಗಿದೆ. ಹೊಸದಾಗಿ ಮಂತ್ರಿಯಾದ ಸಂದರ್ಭದಲ್ಲಿ ಒಂದಷ್ಟು ಕಾರ್ಯಕರ್ತರು ಸೇರಿಯೇ ಸೇರುತ್ತಾರೆ. ಈ ಬಗ್ಗೆ ನನಗೆ ಪೂರ್ಣ ಪ್ರಮಾಣದಲ್ಲಿ ಸಮಾಧಾನಗಳೇನು ಇಲ್ಲ. ಸ್ವಲ್ಪ ಹೆಚ್ಚುಕಡಿಮೆ‌ ಆಗಿದೆ‌. ಆದರೆ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಿದ್ದೇವೆ

ಎರಡು ಡೋಸ್ ಲಸಿಕೆ ಪಡೆದವರಿಗೆ ಅಮೇರಿಕಾದಿಂದ ಬರಲು ಅವಕಾಶವಿದೆ. ಅದೇ ಕಾಸರಗೋಡಿನವರಿಗೆ ಅವಕಾಶ ಇಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಆದರೆ ಎರಡು ಡೋಸ್ ಆದವರಿಗೆ ಸೋಂಕು ಬರುವುದು ಕಡಿಮೆ, ಹಾಗೆಯೇ ಸಾವು ನೋವುಗಳು ಸಂಭವಿಸೋದು ಕಡಿಮೆ. ಅದರೆ ಅವರಿಂದ ಸೋಂಕು ಹರಡುತ್ತದೆ ಎಂದೇ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸುತ್ತದೆ. ಆ ಕಾರಣಕ್ಕೆ ಎರಡು ಡೋಸ್ ಆದವರೂ ಕೂಡಾ ನೆಗೆಟಿವ್ ವರದಿ ತರಬೇಕೆಂದು ಕಾನೂನು ಮಾಡಲಾಗಿದೆ. ಅಲ್ಲದೆ ಕೇರಳದಲ್ಲಿ ಸೋಂಕು ಹೆಚ್ಚಳ ಆಗಿರುವುದರಿಂದ ಗಡಿ ಪ್ರದೇಶದಲ್ಲಿ ಒಂದಷ್ಟು ಕಠಿಣ ನಿಯಮಗಳ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗಿದೆ. ಆದರೆ ಎಲ್ಲರನ್ನೂ ಆ ರೀತಿ ಮಾಡಲು ಸಾಧ್ಯವಿಲ್ಲ.‌ ಕೊಡಗಿನಲ್ಲಿಯೂ ಇದೇ ಪರಿಸ್ಥಿ ಇದ್ದು, ಸೋಂಕಿನ ಭೀತಿಯಿಂದ ಕಠಿಣ ನಿಯಮಾವಳಿಗಳ ಅಗತ್ಯವಿದೆ. ಆದ್ದರಿಂದ ಕೊಡಗಿನ ನಾಲ್ಕು ಪ್ರಮುಖ ಗಡಿಗಳನ್ನು ಮುಚ್ಚಲಾಗಿದ್ದು, ರ್ಯಾಂಡಮ್ ತಪಾಸಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
Published by:Seema R
First published: