ಯಾರೇ Puneeth Rajkumar ಪ್ರತಿಮೆ ಕೇಳಿದರೂ ಉಚಿತವಾಗಿ ಮಾಡಿ ಕೊಡ್ತಾರಂತೆ ಈ ಕಲಾವಿದ

ಅಪ್ಪು ಅಭಿಮಾನಿಗಳು ಯಾರೇ ತನಗೆ ಮೂರ್ತಿ ನಿರ್ಮಿಸಿ ಕೊಡಿ ಎಂದ್ರೆ ಅವರಿಗೆ ತಾನು ಅಪ್ಪುವಿನ ಮೂರ್ತಿ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಅಪ್ಪು ಮೇಲಿನ ಅಭಿಮಾನ ಈ ರೀತಿಯಾಗಿ ತೋರ್ಪಸಡಿಸಿದ್ದಾರೆ ಅಭಿನಂದನ್

ಕಲಾವಿದನ ಕೈ ಚಳಕದಲ್ಲಿ ಅಪ್ಪು

ಕಲಾವಿದನ ಕೈ ಚಳಕದಲ್ಲಿ ಅಪ್ಪು

  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಡಲನಗರಿಯಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅಭಿಮಾನಿ (Puneeth Rajkumar Fan) ಅಪ್ಪುವಿನ ಪ್ರತಿಮೆ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಭಿನಂದನ್ ಬಾಂದೇಕರ್ (Abhinandan Bandekar) ಎನ್ನುವ ವ್ಯಕ್ತಿಯೇ ಅಪ್ಪುವಿನ ಅಪ್ಪಟ ಅಭಿಮಾನಿಯಾಗಿದ್ದಾನೆ. ಜೇಡಿ ಮಣ್ಣಿನಿಂದ ಅಪ್ಪು ವಿನ‌ ಪ್ರತಿಮೆ (puneeth rajkumar statue) ನಿರ್ಮಿಸಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇನ್ನು ಅಪ್ಪುವಿನ ಅಭಿಮಾನಿಗಳು ಯಾರೇ ಅಪ್ಪುವಿನ ಪ್ರತಿಮೆ ನಿರ್ಮಿಸಿ ಕೊಡಿ ಎಂದ್ರೆ ಸಂಭಾವನೆ ತೆಗದುಕೊಳ್ಳದೆ ಪ್ರತಿಮೆ ನಿರ್ಮಿಸಿ ಕೊಡೋದಾಗಿ ಹೇಳಿದ್ದಾರೆ. ಅಪ್ಪುವಿನ ಅಭಿಮಾನಕ್ಕಾಗಿ ಈ‌ ಕಾರ್ಯ ಮಾಡುತ್ತಿದ್ದೆನೆ ಎಂದು ನ್ಯೂಸ್‌18 ಕನ್ನಡ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಅಪ್ಪುವಿನ ಅಪ್ಪಟ ಅಭಿಮಾನಿ ಅಭಿನಂದನ್ 

ಕಾರವಾರದ  ಗಿರಿಜಾಬಾಯಿ ಸೈಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ  ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಅಭಿನಂದನ ಬಾಂದೇಕರ ಅವರು ಪುನೀತ್ ರಾಜ್‌ಕುಮಾರ್ ಅವರ ಅತ್ಯಂತ ಜೀವಂತಿಕೆ ಮೂರ್ತಿ ನಿರ್ಮಿಸುವ ಮೂಲಕ ಅಗಲಿದ ಕರ್ನಾಟಕದ ಕಣ್ಮಣಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುನೀತ್ ಅವರ ಮೂರ್ತಿ, ಅವರ ನಗು ಮೊಗ ಎಷ್ಟೊಂದು ನೈಜವಾಗಿ ಬಂದಿದೆ ಎಂದರೆ, ಇದರಲ್ಲಿ ಕಲಾವಿದನ ಕೈಚಳಕದ ಜೊತೆಯಲ್ಲಿ ಅಪ್ಪು ಬಗ್ಗೆ ಅವರಿಗೆ ಇರುವ ಅಭಿಮಾನ ಮೈವೆತ್ತಿಕೊಂಡು ಬಂದಿದೆ. ಅಭಿನಂದನ ಬಾಂದೇಕರ ಅವರು ಸ್ವತಃ ಇಂಜಿನೀಯರ್ ಆಗಿದ್ದು, ಗಿರಿಜಾಬಾಯಿ  ಸೈಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಭಿನಂದನ ಅವರದ್ದು ಕಲಾವಿದರ ಕುಟುಂಬ. ಗಣಪತಿ  ಮೂರ್ತಿಯನ್ನು ತಯಾರಿಸಲು ಬಳಸುವ ಜೇಡಿ ಮಣ್ಣಿನಲ್ಲಿ ಅಪ್ಪು ಅವರ ಮೂರ್ತಿತಯಾರಿಸಿ, ಅಕ್ರಿಲಿಕ್ ಪೆಂಟ್ ಬಳಸಿ ಸುಂದರ ಹಾಗೂ ಜೀವಂತಿಕೆಯಿಂದ ಕೂಡಿದ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಮುಂದೆ ಫೈಬರ್‌ನಲ್ಲಿ ಅಪ್ಪು ಅವರ ಮೂರ್ತಿ ಮಾಡುವ ವಿಚಾರ ತಮಗೆ ಇದೆ ಎಂದು ಅಭಿನಂದನ ತಿಳಿಸಿದ್ದಾರೆ.

ಯಾರೇ ಅಪ್ಪು ಪ್ರತಿಮೆ ಕೇಳಿದ್ರು ನಿರ್ಮಿಸಿ ಕೊಡುವೆ

ನ್ಯೂಸ್ 18 ಕನ್ನಡ ಜತೆ ಮಾತನಾಡಿದ ಅಭಿನಂದನ್,  ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ ನಾನು ಎಂದು ಹೇಳಿಕೊಂಡರು. ಪುನೀತ್ ಅವರ ನಿಧನದ ನಂತರವೇ ನನಗೆ ಅವರು ಮಾಡಿದ ಸಾಮಾಜಿಕ ಸೇವೆಗಳ ಬಗ್ಗೆ ಗೊತ್ತಾಯಿತು. ಈ ಸಂದರ್ಭದಲ್ಲಿ ಅವರ ಮೂರ್ತಿ ಮಾಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು  ಬಯಸಿದೆ ಎಂದು ಅಭಿನಂದನ ತಿಳಿಸಿದರು. ಸ್ವತಃ ಒಳ್ಳೆಯ ಗಾಯಕರೂ ಆಗಿರುವ ಅಭಿನಂದನ ಪುನೀತ್ ರಾಜ್‌ಕುಮಾರ್ ಅವರ ಮೂರ್ತಿ ಪಕ್ಕದಲ್ಲಿ ಕುಳಿತು ಗಿಟಾರ್ ನುಡಿಸುತ್ತಾ, ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಎನ್ನುವ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಮನಗೆದ್ದಿದ್ದಾರೆ.

ಇದನ್ನೂ ಓದಿ: Puneeth Rajkumar ನಿಧನದ ಬಳಿಕ ಹೆಂಡತಿ Ashwini ಮೊದಲ ರಿಯಾಕ್ಷನ್; ದೊಡ್ಡತನ ಮೆರೆದ ದೊಡ್ಮನೆ ಸೊಸೆ

ಅಪ್ಪು ಅಭಿಮಾನಿಗಳು ಯಾರೆ ತನಗೆ ಮೂರ್ತಿ ನಿರ್ಮಿಸಿ ಕೊಡಿ ಎಂದ್ರೆ ಅವರಿಗೆ ತಾನು ಅಪ್ಪುವಿನ ಮೂರ್ತಿ ನಿರ್ಮಾಣ ಮಾಡಿಕೊಡುವದಾಗಿ ತಿಳಿಸಿದ್ದಾರೆ. ಅಪ್ಪುವಿನ ಅಭಿಮಾನ ಈ ರೀತಿಯಾಗಿ ತೋರ್ಪಸಡಿಸಿದ್ದಾರೆ ಅಭಿನಂದನ್..ಅಪ್ಪುವಿನ ಅಗಲಿಕೆ ತೀರಾ ನೋವುಂಟು ಮಾಡಿದ್ದು ಸಮಾಜಕ್ಕ ಅವರ ಅಗಲಿಕೆ ತುಂಬಲಾರದ ನಷ್ಟ ಎಂದಿದ್ದಾರೆ.

ಅಭಿಮಾನಿಗಳಿಗೆ ಅನ್ನಸಂತರ್ಪಣೆ 

ಇನ್ನು ಇಂದು ಪುನೀತ್ ರಾಜ್ ಕುಮಾರ್  ಅವರ ಆಸೆಯಂತೆ ದೊಡ್ಮನೆ ಕುಟುಂಬ ಇವತ್ತು ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಅಭಿಮಾನಿಗಳು ಕಣ್ಣೀರು ಹಾಕುತ್ತಲೇ ಊಟ ಮಾಡುತ್ತಿರುವ ದೃಶ್ಯ ಕಣ್ಣಾಲಿಗಳನ್ನು ತೇವಗೊಳಿಸಿದವು. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ಬೆಳಗ್ಗೆ ಪುನೀತ್ ಪತ್ನಿ ಅಶ್ವಿನಿ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
Published by:Kavya V
First published: