• ಹೋಂ
  • »
  • ನ್ಯೂಸ್
  • »
  • state
  • »
  • Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!

Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!

ಕರಾವಳಿ ಜಿಲ್ಲೆಗಳು (ಸಾಂದರ್ಭಿಕ ಚಿತ್ರ)

ಕರಾವಳಿ ಜಿಲ್ಲೆಗಳು (ಸಾಂದರ್ಭಿಕ ಚಿತ್ರ)

ಪಿಯುಸಿ ಫಲಿತಾಂಶದಲ್ಲಿ ಎಂದಿಗೂ ಮುಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ವಿದ್ಯಾರ್ಥಿಗಳು SSLC ಫಲಿತಾಂಶದಲ್ಲಿ ಮಾತ್ರ ಹಿಂದಿರುವ ಕುರಿತು ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

  • News18 Kannada
  • 4-MIN READ
  • Last Updated :
  • Mangalore, India
  • Share this:

SSLC ಫಲಿತಾಂಶ (Karnataka SSLC Results 2023) ಘೋಷಣೆಯಾಗಿದೆ. ಈ ಬಾರಿಯ ಫಲಿತಾಂಶದಲ್ಲಿ ಬುದ್ಧಿವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುವ ಕರಾವಳಿ ದಕ್ಷಿಣ ಕನ್ನಡ (Dakshina Kannada SSLC Results) ಮತ್ತು ಉಡುಪಿ ಜಿಲ್ಲೆಗಳು (Udupi SSLC Results) ಟಾಪರ್​ಗಳ ಪಟ್ಟಿಯಲ್ಲಿಲ್ಲ. ಇದು ಹಲವರ ಕುತೂಹಲಕ್ಕೆ ಕಾರಣವಾಗಿದೆ. ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ಅಗ್ರ ಶ್ರೇಣಿಯಲ್ಲಿರುತ್ತಿದ್ದ ಕರಾವಳಿ ಜಿಲ್ಲೆಗಳು (Coastal Karnataka)  SSLC ಫಲಿತಾಂಶದಲ್ಲಿ ಹಿಂದಿರಲು ಕಾರಣದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.


ಈ ಬಾರಿಯ SSLC ಫಲಿತಾಂಶದಲ್ಲಿ ಉತ್ತರ ಕನ್ನಡ 13, ದಕ್ಷಿಣ ಕನ್ನಡ 18 ಮತ್ತು
ಉಡುಪಿ 19ನೇ ಸ್ಥಾನದಲ್ಲಿವೆ.  ಚಿತ್ರದುರ್ಗ ಜಿಲ್ಲೆ (Chitradurga SSLC Results) ಪ್ರಥಮ ಸ್ಥಾನ ಗಳಿಸಿದ್ದು, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇನ್ನು ಹಾಸನ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.


ಕರಾವಳಿ ಜಿಲ್ಲೆಗಳ ಹಿನ್ನೆಡೆಗೆ ಏನು ಕಾರಣ?
ಪಿಯುಸಿ ಫಲಿತಾಂಶದಲ್ಲಿ ಎಂದಿಗೂ ಮುಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯ ವಿದ್ಯಾರ್ಥಿಗಳು SSLC ಫಲಿತಾಂಶದಲ್ಲಿ ಮಾತ್ರ ಹಿಂದಿರುವ ಕುರಿತು ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.




ಪ್ರಸಿದ್ಧ ಕಾಲೇಜುಗಳು ಪಿಯು ಶಿಕ್ಷಣಕ್ಕೆ ಫೇಮಸ್
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಶಿಕ್ಷಣಕ್ಕೆ ಹೆಸರುವಾಸಿ. ಆದರೆ ಗಮನಿಸಲೇಬೇಕಾದ ವಿಷಯ ಎಂದರೆ, ಈ ಎರಡು ಜಿಲ್ಲೆಗಳು ಪಿಯುಸಿ ಶಿಕ್ಷಣಕ್ಕೆ ಹೆಚ್ಚು ಹೆಸರುವಾಸಿಯೇ ಹೊರತು ಪ್ರೌಢಶಾಲೆಗಳಿಗಲ್ಲ. ಮೂಡುಬಿದಿರೆಯ ಆಳ್ವಾಸ್, ಉಜಿರೆಯ SDM, ಎಕ್ಸ್​ಲೆಂಟ್ ಪುತ್ತೂರಿನ ವಿವೇಕಾನಂದ ಕಾಲೇಜು ಸೇರಿದಂತೆ ಹಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳು ಪಿಯು ವಿದ್ಯಾಭ್ಯಾಸಕ್ಕೆಂದು ದಾಖಲಾಗುವುದು ಹೆಚ್ಚು, ವಿನಃ ಹೈಸ್ಕೂಲ್ ಶಿಕ್ಷಣಕ್ಕೆಂದು ಹೆಚ್ಚಿನ ವಿದ್ಯಾರ್ಥಿಗಳು ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವುದು ಕಡಿಮೆಯೇ ಎಂದು ಹೇಳಬಹುದು.


ಪ್ರೋತ್ಸಾಹಕರ ಯೋಜನೆ
SSLC ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕಾಗಿ ಕರಾವಳಿ ಜಿಲ್ಲೆಗಳ ಹೆಸರುವಾಸಿ ಕಾಲೇಜುಗಳತ್ತ ಆಕರ್ಷಿತರಾಗುವ ಪರಿಪಾಠ ಚಾಲ್ತಿಯಲ್ಲಿದೆ. ಅಲ್ಲದೇ, ಈ ಭಾಗದ ಹಲವು ಕಾಲೇಜುಗಳು SSLCಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಮ್ಮತ್ತ ಆಕರ್ಷಿಸಲು ಹಲವು ಪ್ರೋತ್ಸಾಹಕರ ಯೋಜನೆಗಳನ್ನು ಸಹ ಒದಗಿಸುತ್ತವೆ. ಇದೇ ಕಾರಣಕ್ಕೆ ಪಿಯುಸಿ ಫಲಿತಾಂಶದಲ್ಲಿ ಕರಾವಳಿಯ ಹೆಸರು ಪ್ರತಿ ವರ್ಷ ಸದಾ ಮುಂದಿರುತ್ತವೆ.




SSLC ಊರಲ್ಲೇ ಇದ್ದು ಓದಲಿ
ಅಲ್ಲದೇ, ಹೈಸ್ಕೂಲ್ ಹಂತದಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ತಮ್ಮದೇ ಊರಿನ, ಮನೆಯ ಹತ್ತಿರದ ಒಳ್ಳೆಯ ಶಾಲೆಗೆ ಕಳಿಸುವುದೇ ಹೆಚ್ಚು. ಹೈಸ್ಕೂಲ್ ಮಟ್ಟದಲ್ಲಿ ಮಕ್ಕಳು ಹಾಸ್ಟೆಲ್, ಪಿಜಿಯಲ್ಲಿ ಉಳಿದುಕೊಂಡು ತಮ್ಮನ್ನು ತಾವು ನಿಭಾಯಿಸುವಷ್ಟು ಸಾಮರ್ಥ್ಯ ಮಕ್ಕಳಲ್ಲಿ ಬಂದಿರುವುದಿಲ್ಲ ಎಂಬುದು ಬಹುತೇಕ ಪಾಲಕರ ಯೋಚನೆ.


SSLC ಫಲಿತಾಂಶದ ನಂತರ ನೋಡೋಣ..
ಹೀಗಾಗಿ SSLC ಫಲಿತಾಂಶ ನೋಡಿಕೊಂಡು ಮುಂದಿನ ಓದಿಗೆ ಕರಾವಳಿ ಜಿಲ್ಲೆಯ ಒಳ್ಳೆಯ ಕಾಲೇಜುಗಳಿಗೋ ಅಥವಾ ಬೇರೆ ಊರಿನ ಕಾಲೇಜುಗಳಿಗೆ ಕಳಿಸುವ ಪರಿಪಾಠವಿದೆ. ಹೀಗಾಗಿ SSLC ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಪಿಯುಸಿಗೆ ದಕ್ಷಿಣ ಕನ್ನಡ, ಉಡುಪಿ ಅಥವಾ ಬೆಂಗಳೂರು ನಗರದ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಇದೇ ಕಾರಣಕ್ಕೆ ಕರಾವಳಿ ಜಿಲ್ಲೆಗಳು SSLC ಫಲಿತಾಂಶದಲ್ಲಿ ಹಿಂದಿನ ಸಾಲಲ್ಲಿ ಕುಳಿತರೂ ಪಿಯುಸಿಯಲ್ಲಿ ಮಾತ್ರ ಸದಾ ಫಸ್ಟ್ ಬೆಂಚ್ ವಿದ್ಯಾರ್ಥಿಗಳಾಗಿರುತ್ತವೆ.

top videos
    First published: