ಕಾರವಾರ: ಕೊರೊನಾ (Corona) ಅಟ್ಟಹಾಸ ರಾಜ್ಯದಲ್ಲಿ ಜೋರಾಗಿದೆ, ದಿನೆ ದಿನೇ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ರಾಜ್ಯದ ಜನರಲ್ಲಿ ದಿನ ನಿತ್ಯವೂ ಆತಂಕ ಹೆಚ್ಚಾಗಿದ್ದು ನೆಮ್ಮದಿಯ ವಾತಾವರಣಕ್ಕೆ ಕೊರೋನಾ ಮತ್ತೆ ಕೊಳ್ಳಿಇಡುತ್ತಿದೆ. ಈ ನಡುವೆ ಮೀನುಗಾರರ (Fishermen) ಜೀವನ ಕೂಡಾ ಕಂಗಾಲಾಗಿದ್ದು, ಮತ್ತೆ ಲಾಕ್ ಡೌನ್ (Lockdown ) ಭೀತಿ ಎದುರಿಸುತ್ತಿರುವ ಮೀನುಗಾರರು ದಯವಿಟ್ಟು ಸರಕಾರ (Karnataka Govt) ಲಾಕ್ ಡೌನ್ ನಿಯಮ ಕೈ ಬಿಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಜತೆಗೆ ಮತ್ತೆ ಲಾಕ್ ಡೌನ್ ಮೊರೆ ಹೋದ್ರೆ ಜೀವಂತ ಶವವಾಗೋದ್ರಲ್ಲಿ ಎರಡು ಮಾತಿಲ್ಲ ಎಂಬ ಆತಂಕದ ನುಡಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಕರಾವಳಿಯ ಮೀನುಗಾರರದ್ದಾಗಿದೆ.
ಲಾಕ್ಡೌನ್ನಿಂದ ಕಸುಬನ್ನೇ ಬಿಟ್ಟ ಮೀನುಗಾರರು
ಕಳೆದ ಒಂದು ಮತ್ತು ಎರಡನೇ ಕೊರೋನಾ ಅಲೆಯ ಸಂದರ್ಭದಲ್ಲಿ ಕೆಲಸ ಕಾರ್ಯ ಇಲ್ಲದೆ ಕಂಗಾಲಾಗಿದ್ದ ಮೀನುಗಾರರು ಈಗ ಮತ್ತೆ ಮೂರನೇ ಅಲೆಯಿಂದ ಲಾಕ್ ಡೌನ್ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೆ ರಾಜ್ಯ ಸರಕಾರ ಹೇರಿದ ಒಂದನೇ ವಿಕೇಂಡ್ ಕರ್ಪ್ಯೂಗೆ ಹೌ ಹಾರಿ ಹೋದ ಮೀನುಗಾರರು ಮತ್ತೆ ಲಾಕ್ ಡೌನ್ ಆದ್ರೆ ಜೀವನ ಬೀದಿಗೆ ಎನ್ನುತ್ತಿದ್ದಾರೆ. ಒಂದು ಮತ್ತು ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಮೀನುಗಾರಿಕೆಗೆ ಕಾರ್ಮಿಕರ ಕೊರತೆಯಿಂದ ಸಂಪೂರ್ಣ ನಷ್ಟ ಅನುಭವಿಸಿದ ಮೀನುಗಾರರು ಹರಸಾಹಸ ಪಟ್ಟು ಕೆಲವರು ಮೀನುಗಾರಿಕೆ ಮಾಡಿ ಮೀನು ಬೇಟೆ ಮಾಡಿ ತಂದ ಮೀನು ಮಾರುಕಟ್ಟೆ ಯಲ್ಲಿ ಜನರ ಖರೀದಿಸದೆ ತೀರಾ ನಷ್ಟ ಅನುಭವಿಸಿದ್ರು.ಇನ್ನು ಕೆಲ ಮೀನುಗಾರರು ಕಾರ್ಮಿಕರಿಲ್ಲದೆ ಬೋಟ್ ಸಮುದ್ರಕ್ಕಿಳಿಸದೆ ಮೀನುಗಾರಿಕೆಯನ್ನೆ ಬಿಟ್ಟಿದ್ದರು... ಬಂದರಿನಲ್ಲಿ ನಾಲ್ಕೈದು ತಿಂಗಳುಗಳ ಕಾಲ ಬೋಟ್ ಲಂಗರು ಹಾಕಿಸಿದ್ದರು...ಹೀಗೆ ಹತ್ತಾರು ಆಯಾಮದಲ್ಲಿ ಮೀನುಗಾರರು ನಷ್ಟ ಅನುಭವಿಸಿದ್ರು...ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ಕಸುಬನ್ನೇ ಬಿಡುವ ಆತಂಕ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: Chitradurgaದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಖಡಕ್ ಸೂಚನೆ
ಮತ್ತೆ ಲಾಕ್ ಡೌನ್ ಮಾಡಿದ್ರೆ ಮುಂದೇನು ಗತಿ?
ಕೊರೋನಾ ನಿಯಂತ್ರಣಕ್ಕೆ ಸರಕಾರ ಲಾಕ್ ಡೌನ್ ನಿಯಮಕ್ಕೆ ಮೊರೆ ಹೋದ್ರೆ ರಾಜ್ಯದಲ್ಲಿ ಅದೆಷ್ಟೋ ಕುಟುಂಬ ಬೀದಿಗೆ ಬರುತ್ತದೆ...ಅದ್ರಲ್ಲಿ ಮೀನುಗಾರ ಕುಟುಂಬ ಕೂಡಾ ಒಂದು, ಮೀನುಗಾರಿಕೆಯ ಕಸುಬದನ್ನೆ ನಂಬಿದ್ದ ಮೀನುಗಾರರು ಲಾಕ್ ಡೌನ್ ಗೆ ಬಲಿ ಆಗೊದ್ರಲ್ಲಿಎರಡು ಮಾತಿಲ್ಲ, ಈಗಾಗಲೆ ಹೊರ ರಾಜ್ಯದಿಂದ ಸಾವಿರಾರು ಮೀನುಗಾರಿಕಾ ಕಾರ್ಮಿಕರು ಕಾರವಾರ ಸೇರಿ ಕರಾವಳಿಯೂದ್ದಕ್ಕೂ ಇದ್ದಾರೆ ಇವರಿಗೆ ಒಂದು ದಿನ ಸಮುದ್ರಕ್ಕೆ ಬೋಟ್ ಇಳಿದು ಮೀನುಗಾರಿಕೆ ಮಾಡಿದ್ರೆ ಮಾತ್ರ ಒಂದೊಪ್ಪತ್ತಿನ ಊಟಾ ಆದ್ರೆ ಈಗ ಸರಕಾರ ಲಾಕ್ ಡೌನ್ ಮೊರೆ ಹೋದ್ರೆ ಹೊರ ರಾಜ್ಯದ ಮೀನುಗಾರರ ಸ್ಥಿತಿ ಅತಂತ್ರವಾಗಲಿದೆ.
ಇದನ್ನೂ ಓದಿ: Reserves: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಿ COVID ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಅಣಿ
ಜತೆಗೆ ಲಾಕ್ ಡೌನ್ ಭಯಕ್ಕೆ ಕೆಲವರು ಹೇಳದೆ ಕೇಳದೆ ತಮ್ಮ ತಮ್ಮ ರಾಜ್ಯ ಸೇರಿಕೊಳ್ಳಲಿದ್ದಾರೆ ಹಾಗೆನಾದ್ರು ತಮ್ಮ ತಮ್ಮ ಊರು ಸೇರಿ ಕೊಂಡ್ರೆ ಇಲ್ಲಿ ಬಂಡವಾಳ ಹಾಕಿ ಬೋಟ್ ಕಟ್ಟಿದ ಮತ್ಸ್ಯೊದ್ದಮಿಗಳು ನಷ್ಟ ಅನುಭವಿಸಲಿದ್ದಾರೆ...ಹೀಗೆ ಒಂದರ ಹಿಂದೆ ಒಂದು ಕೊಂಡಿ ಕಳಚಿ ಮೀನುಗಾರಿಕಾ ಹಾದಿ ತಪ್ಪಿ ಇಡಿ ಮೀನುಗಾರಿಕೆ ಕಸುಬು ನಂಬಿದ್ದ ಮೀನುಗಾರರ ಬದುಕು ಬೀದಿ ಕಾಣಲಿವೆ.
ಇನ್ನು ಇಂದು ರಾಜ್ಯದಲ್ಲಿ 12,000 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಬೆಂಗಳೂರು ಜಿಲ್ಲೆಯೊಂದರಲ್ಲೇ 9,020 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸದ್ಯ 49,602 ಸಕ್ರಿಯ ಪ್ರಕರಣಗಳಿವೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂವನ್ನು ವಿಸ್ತರಿಸಲಾಗಿದೆ, ಜೊತೆ ವೀಕೆಂಡ್ ಕರ್ಫ್ಯೂವನ್ನು ಹೇರಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ