ಮಂಗಳೂರು: ಬೇಸಿಗೆ ರಜೆ, ಚುನಾವಣೆ ಹತ್ತಿರ (Karnataka Elections 2023) ಬರುತ್ತಿರುವುದರಿಂದ ಜನರ ಓಡಾಟ ಹೆಚ್ಚಾಗಲಿದೆ. ಅದ್ರಲ್ಲೂ ರಾಜ್ಯದ ಕರಾವಳಿಯ ಮಂದಿ ಖಾಸಗಿ ಬಸ್ಗಳನ್ನ (Private Bus In Mangaluru) ಅವಲಂಬಿಸಿರುವುದೇ ಜಾಸ್ತಿ. ಮಂಗಳೂರು, ಉಡುಪಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ಗಳ ಸೇವೆಯೂ ಇದ್ದು, ಜನ ಸರ್ಕಾರಿ ಬಸ್ಗಳಿಗಿಂತ ಹೆಚ್ಚಾಗಿ ಖಾಸಗಿ ಬಸ್ ನೆಚ್ಚಿಕೊಂಡಿದ್ದಾರೆ.
ಹೀಗಾಗಿ ಸಂದರ್ಭ ನೋಡಿ ಖಾಸಗಿ ಬಸ್ನವರು ಏಕಾಏಕಿ ದರ ಏರಿಕೆ ಮಾಡುವುದು ಮಾಮೂಲು. ದೀಪಾವಳಿ, ಈದ್, ಕ್ರಿಸ್ಮಸ್, ದಸರಾ ರಜೆ ಹೀಗೆ ಹಬ್ಬದ ಸಂದರ್ಭಗಳೆಲ್ಲವನ್ನೂ ಖಾಸಗಿ ಬಸ್ ಮಾಲಕರು ಉತ್ತಮ ಲಾಭ ಪಡೆಯುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಾರೆ. ಈಗ ಚುನಾವಣೆ ಹತ್ತಿರ ಬಂದಿದ್ದು, ಖಾಸಗಿ ಬಸ್ ರೇಟ್ (Private Bus Ticket Price Hike) ಮತ್ತೆ ಅಧಿಕಗೊಳ್ಳತೊಡಗಿದೆ.
ವಸೂಲಿಗಿಳಿಯುವ ಖಾಸಗಿ ಬಸ್
ಹಲವು ಹೆಸರಿನ ಖಾಸಗಿ ಕಂಪೆನಿಗಳ ಬಸ್ ಮಂಗಳೂರು-ಬೆಂಗಳೂರು, ಮಂಗಳೂರು-ಮೈಸೂರು, ಮಂಗಳೂರು-ಹುಬ್ಬಳ್ಳಿ ನಡುವೆ ಓಡಾಟ ನಡೆಸುತ್ತಿದೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅದರ ಲಾಭವನ್ನು ಪಡೆಯಲು ಖಾಸಗಿ ಬಸ್ ಗಳು ಮುಂದಾಗಿವೆ.
ಎಲೆಕ್ಷನ್ಗಿಂತ ಮೂರು ದಿನ ಮುಂಚೆ ಕೇಳೋದೇ ಬೇಡ!
ಜೊತೆಗೆ ನಿಗದಿತ ದರಕ್ಕಿಂತ ಡಬಲ್ ರೇಟ್ ಪಡೆಯಲು ಹವಣಿಸುತ್ತಿದೆ. ಸಾಮಾನ್ಯ ನಾನ್ ಸ್ಲೀಪರ್, ಎಸಿ ಸ್ಲೀಪರ್ ಬಸ್ಗಳ ದರವು ಈಗಾಗಲೇ ಸಾವಿರ ದಾಟಿದೆ. ಎಲೆಕ್ಷನ್ ನಡೆಯುವ 3 ದಿನಗಳ ಮುಂಚಿತವಾಗಿ ಹಲವು ಬಸ್ಗಳ ರೇಟ್ ಈಗಾಗಲೇ ಅಧಿಕವಾಗಿರುವುದು ಆನ್ ಲೈನ್ನಲ್ಲಿ ಗಮನಿಸಬಹುದಾಗಿದೆ.
ಎರಡೂವರೆ ಸಾವಿರ ದಾಟಿದ ದರ!
ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಈ ಭಾಗದಿಂದ ಮಂಗಳೂರಿಗೆ ಬರುವ ಖಾಸಗಿ ಬಸ್ಗಳ ದರ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಒಂದು ಸಾವಿರ ರೂಪಾಯಿಯಂತಿದ್ದ ದರವು, ಕೆಲವೊಂದು ಬಸ್ ಗಳಲ್ಲಿ ಈಗಾಗಲೇ ಎರಡೂವರೆ ಸಾವಿರ ದಾಟಿದೆ. ಅದ್ರಲ್ಲೂ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಬೇಕಿದ್ದರೆ ಜಿಎಸ್ಟಿ, ಸೇವಾ ತೆರಿಗೆ (ಸರ್ವಿಸ್ ಟ್ಯಾಕ್ಸ್) ತುಂಬಬೇಕಿದೆ.
ಇದನ್ನೂ ಓದಿ: Mangaluru Water Supply: ಮಂಗಳೂರು ನಗರಕ್ಕೆ 2 ದಿನ ನೀರು ಪೂರೈಕೆ ಸ್ಥಗಿತ
ಸರಕಾರಿ ಬಸ್ ಬೆಟರ್!
ಸದ್ಯದ ಸ್ಥಿತಿಯಲ್ಲಿ ಕೆಎಸ್‌ಆರ್‌ಟಿಸಿ ಯಾವುದೇ ಬಸ್ ದರ ಏರಿಕೆ ಮಾಡಿಲ್ಲ. ಮಾಮೂಲಿ ರೇಟ್ ಇದ್ದು, ಐರಾವತ, ಎಸಿ, ನಾನ್ ಎಸಿ, ರಾಜಹಂಸ ಈ ಎಲ್ಲ ಬಸ್ಗಳ ದರವು ಮಾಮೂಲಿಯಂತಿದ್ದು ಮುಂದೆ ಚುನಾವಣೆ ಸಮಯದಲ್ಲೂ ಏರಿಕೆ ಆಗದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೆಚ್ಚುವರಿ ಬಸ್ ಅಥವಾ ವಿಶೇಷ ಬಸ್ ಗಳನ್ನ ರೋಡಿಗೆ ಇಳಿಸಿದ್ದಲ್ಲಿ ಮಾತ್ರ ಶೇಕಡಾ 10 ರಷ್ಟು ಹೆಚ್ಚುವರಿ ದರ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಲೆಕ್ಷನ್ ಕಮಿಷನ್ ಗಮನಿಸಲಿ
ಖಾಸಗಿ ಬಸ್ ದರ ವಸೂಲಿ ಅಧಿಕಗೊಳ್ಳುವ ಸಾಧ್ಯತೆ ಇರೋದರಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಭಾಗಗಳಲ್ಲಿ ನೆಲೆಸಿರುವವರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಬಹುದು.
ಇದನ್ನೂ ಓದಿ: Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್ಗೆ ಮೆಸೇಜ್ ಮಾಡಿ
ಹೀಗಾಗಿ ತಕ್ಷಣವೇ ಚುನಾವಣಾ ಆಯೋಗವು ಏಕಾಏಕಿ ಬಸ್ ದರ ಏರಿಕೆ ಮಾಡುವ ಖಾಸಗಿ ಬಸ್ ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ