UP CM Yogi Adityanathಗೆ ತಲುಪಿದ ಮಂಗಳೂರಿನ ಪ್ರಸಾದ

ಯೋಗಿ ಆದಿತ್ಯನಾಥ್​​ 2ನೇ ಬಾರಿ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರೋದು ಕದ್ರಿ ಯೋಗೀಶ್ವರ ಮಠಕ್ಕೆ ಹೆಮ್ಮೆಯ ವಿಚಾರವಾಗಿದೆ. ಆ ಕಾರಣದಿಂದಲೇ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ

ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಆದಿತ್ಯನಾಥ್

  • Share this:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ (Yogi Adityanath) ಎರಡನೇ ಬಾರಿ ಸಿಎಂ ಆಗಿರೋದಕ್ಕೆ ಮಂಗಳೂರಿನ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ನೆಲೆಸಿದೆ. ಎಲ್ಲಿಯ ಉತ್ತರ, ಎಲ್ಲಿಯ ದಕ್ಷಿಣ?. ಎತ್ತಣಂದೆತ್ತಣ ಸಂಬಂಧವಯ್ಯ. ಉತ್ತರ ಪ್ರದೇಶದ ಸಿಎಂ ಆದಿತ್ಯನಾಥರಿಗೂ ಕದ್ರಿಯ ಯೋಗೀಶ್ವರ ಮಠಕ್ಕೂ (Kadri Yogeshwara Mutt) ಸಂಬಂಧವೇನು ಎಂದು ಅಚ್ಚರಿಗೆ ಒಳಗಾಗಬಹುದು. ಆದರೆ, ನಾಥಪಂಥದ ಮೂಲಮಠವಾದ ಉತ್ತರದ ತ್ರಯಂಬಕೇಶ್ವರದ ಗೋರಖ್ ಪುರ ಮಠಕ್ಕೂ ಮಂಗಳೂರಿನ ಕದ್ರಿಯ ಯೋಗೀಶ್ವರ ಮಠಕ್ಕೂ ನಿಕಟವಾದ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ನಾಥ ಸಂಪ್ರದಾಯದ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 2 ನೇ ಬಾರಿಗೆ  ಆಯ್ಕೆಯಾಗಿರುವುದಕ್ಕೆ ಈ ಯೋಗೀಶ್ವರ ಮಠದಲ್ಲಿ ಹರ್ಷ ವ್ಯಕ್ತವಾಗಿದೆ.

ನಿರ್ಮಲನಾಥ ಅವರ ಪಟ್ಟಾಭಿಷೇಕ ನೆರವೇರಿಸಿದ್ದ ಯೋಗಿ

ಇಲ್ಲಿನ ಪೀಠಾಧಿಪತಿಯನ್ನು ಆಯ್ಕೆ ಮಾಡುವ ಅಧಿಕಾರವಿರುವುದು ಗೋರಖ್ ಪುರದ ಮಠಾಧೀಶರಿಗೆ. ಈಗಿನ ಗೋರಖ್ ಪುರದ ಮಠದ ಮಠಾಧೀಶರಾಗಿರೋದು ಯೋಗಿ ಆದಿತ್ಯನಾಥರು. ಪ್ರಸ್ತುತ ಕದ್ರಿ ಮಠದಲ್ಲಿರುವ ಮಠಾಧೀಶರ ಆಯ್ಕೆಯಲ್ಲೂ ಯೋಗಿ ಆದಿತ್ಯನಾಥರು ಪ್ರಮುಖ ಪಾತ್ರ ವಹಿಸಿದ್ದರು. 2016ರಲ್ಲಿ ಕದ್ರಿ ಮಠದ ಪೀಠಾಧಿಪತಿ ನಿರ್ಮಲನಾಥ ಜೀಯವರ ಪಟ್ಟಾಭಿಷೇಕವನ್ನು ಯೋಗಿ ಆದಿತ್ಯನಾಥರವರೇ ನೆರವೇರಿಸಿದ್ದರು. ಆಗ 12 ವರ್ಷಗಳಿಗೊಮ್ಮೆ ಉತ್ತರದಿಂದ ಬರುವ ಝಂಡಿಯಲ್ಲೂ ಯೋಗಿ ಆದಿತ್ಯನಾಥರು ಭಾಗವಹಿಸಿದ್ದರು.

12 ವರ್ಷಕ್ಕೆ ಒಮ್ಮೆ ನಡೆಯುವ ಪಟ್ಟಾಭಿಷೇಕ
ಕದಲಿಯ ಯೋಗೀಶ್ವರ(ಜೋಗಿ)'ಮಠದಲ್ಲಿ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ವೈಭವದ ಪರ್ಯಾಯ ರಾಜ ಪಟ್ಟಾಭಿಷೇಕವು ನೆರವೇರುವುದು ಪದ್ದತಿಯಾಗಿದೆ. ಈ ಬಾರಿ ಕಳೆದ 2016'ರ ಮಾರ್ಚ್ 6 ಹಾಗು 7 'ರಂದು ಕದ್ರಿ ಜೋಗಿ ಮಠದಲ್ಲಿ ನಡೆದು ಅರಸು ನಿರ್ಮಲಾ ನಾಥ್ ಜೀ'ಯವರ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನಡೆದಿತ್ತು. ಕದಳಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ಮುಂದಿನ 12 ವರ್ಷಗಳಿಗೊಮ್ಮೆ ನೇಮಿಸಲಾಗುತ್ತದೆ.

ನಾಥ ಪಂಥದ ಮಠ

ರಾಜರ ಆಯ್ಕೆ ವಾಡಿಕೆಯಂತೆ ತ್ರೈಂಬಕೇಶ್ವರ (ನಾಸಿಕ) ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಜರಗುವ ಕುಂಭ ಮೇಳದಲ್ಲಿ ನಡೆಯುತ್ತದೆ. ನಾಥಪಂಥದ 12 ಕವಲುಗಳಿಗೆ ಸೇರಿದ ಸಾಧುಗಳು ಅಖಿಲ ಭಾರತ ವರ್ಷೀಯ ಅವಧೂತ ಯೋಗಿ ಮಹಾಸಭಾ ಬೇಖ್ ಬಾರಹಪಂಥ್‍ದ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ರಾಜರ ಆಯ್ಕೆಯನ್ನು ನಡೆಸುತ್ತಾರೆ. ಗಂಗಾನಾಥ್, ನಟೇಶ್ವರಿ, ಬೈರಾಗ್ ಮತ್ತು ಕಪಲಾನಿ ಕವಲುಗಳಿಗೆ ಸೇರಿದ ಸಾಧುಗಳು ಮಾತ್ರ ಕದಳಿ ಮಠಕ್ಕೆ ರಾಜರಾಗಿ ಆಯ್ಕೆಗೊಳ್ಳಲು ಅರ್ಹರಾಗಿರುತ್ತಾರೆ. ಹೀಗೆ ಪ್ರತೀ ಕವಲಿಗೆ 48 ವರ್ಷಗಳಿಗೊಮ್ಮೆ ರಾಜರಾಗಿ ಆಯ್ಕೆಗೊಳ್ಳುವ ಅವಕಾಶ ಇರುತ್ತದೆ.ಜೋಗಿ ಮಠದ ಮುಂದಿನ ರಾಜರು ಬೈರಾಗಿ ಕವಲಿಗೆ ಸೇರಿದವರಾಗಿರುತ್ತಾರೆ.

ಇದನ್ನು ಓದಿ: ಸ್ಮಶಾನ ಕಾಯಕದಲ್ಲಿ ನೀಲಮ್ಮ: ಎಲ್ಲರಿಗೂ ಮಾದರಿ ಈ ಗಟ್ಟಿಗಿತ್ತಿ

ವಿಶೇಷ ಪೂಜೆ ಪುನಸ್ಕಾರ

ಯೋಗಿ ಆದಿತ್ಯನಾಥರು 2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಸಿಎಂ ಆದರು. ಇದೀಗ 2ನೇ ಬಾರಿ ಅವರೇ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರೋದು ಕದ್ರಿ ಯೋಗೀಶ್ವರ ಮಠಕ್ಕೆ ಹೆಮ್ಮೆಯ ವಿಚಾರವಾಗಿದೆ. ಆ ಕಾರಣದಿಂದಲೇ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ. ಆದ್ದರಿಂದ ಯೋಗಿ ಆದಿತ್ಯನಾಥರು ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಮಾಡಿದ ದಿನ ಕದ್ರಿ ಯೋಗೀಶ್ವರ ಮಠದಲ್ಲಿ ಮಧ್ಯಾಹ್ನದ ರೂಟ್ ಪೂಜೆ, ಶ್ರೀ ಕಾಳಭೈರವನಿಗೆ ಸೀಯಾಳಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ಮೂಲಕ ಯೋಗಿ ಆದಿತ್ಯನಾಥರು ಇನ್ನಷ್ಟು ಯಶಸ್ಸು ಸಾಧಿಸಲೆಂದು ಶ್ರೀ ಕಾಳಭೈರವನಲ್ಲಿ ಪ್ರಾರ್ಥಿಸಲಾಗಿದೆ. ಪೂಜೆಯ ಪ್ರಸಾದವನ್ನು ಸಿ.ಎಂ ಯೋಗಿ ಆದಿತ್ಯನಾಥ್ ಅವರಿಗೂ ಕಳುಹಿಸಿಕೊಡಲಾಗಿದೆ.

ಇದನ್ನು ಓದಿ: ಮುಂಬೈನಲ್ಲಿ ಉಪನ್ಯಾಸಕರು ಈಗ ಬೆಂಗಳೂರಲ್ಲಿ ಆಟೋ ಡ್ರೈವರ್, ಇವರ ನಿರರ್ಗಳ English ಮಾತಿಗೆ ಬೆರಗಾಗದವರಿಲ್ಲ

ಕೇರಳ ಪ್ರಚಾರಕ್ಕೆ ಬಂದಿದ್ದಾಗ ಮಠಕ್ಕೆ ಭೇಟಿ ನೀಡಿದ್ದ ಯೋಗಿ

ದಕ್ಷಿಣ ಭಾರತಕ್ಕೆ ಯೋಗಿ ಆದಿತ್ಯನಾಥ್ ಬಂದರೆ ಅವರು ಕದ್ರಿ ಯೋಗೇಶ್ವರ ಮಠಕ್ಕೆ ಭೇಟಿ ನೀಡಿಯೇ ನೀಡುತ್ತಾರೆ‌. ಕೇರಳ ಚುನಾವಣೆ ಸಂದರ್ಭದಲ್ಲಿ ಕಾಸರಗೋಡಿಗೆ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲೂ ಯೋಗಿ ಆದಿತ್ಯನಾಥ್ ಅವರು ಕದ್ರಿ ಗುಡ್ಡದಲ್ಲಿರುವ ನಾಥಪಂಥದ ಯೋಗೇಶ್ವರ ಮಠಕ್ಕೆ ಭೇಟಿ ನೀಡಿದ್ದರು.‌ ಈ ಸಂದರ್ಭ ಇಡೀ ಮಠದಲ್ಲಿ ಸಂಭ್ರಮ ಕಳೆ ಕಟ್ಟಿತ್ತು.
Published by:Seema R
First published: