ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (MRPL) ಖಾಲಿ ಇರುವ ಆಡಳಿತೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಎಂಆರ್ಪಿಎಲ್ನ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ ಅಲ್ಲಿಂದ ಮಾಹಿತಿ ಪಡೆದು ಅರ್ಜಿ (Jobs In Mangaluru) ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು | ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ |
ಯಾವುದೆಲ್ಲ ಹುದ್ದೆಗಳು? | ಹಲವು ಹುದ್ದೆಗಳು |
ವೇತನ ಶ್ರೇಣಿ | 25 ಸಾವಿರದಿಂದ ಗರಿಷ್ಟ 86400 ರವರೆಗೆ |
ಅರ್ಜಿ ಸಲ್ಲಿಕೆ ಹೇಗೆ? | https://mrpl.co.in/careers |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಜೂನ್ 16 |
ವೇತನ ಶ್ರೇಣಿ
ಈ ಎಲ್ಲ ಹುದ್ದೆಗಳಿಗೆ ವೇತನವು ಕನಿಷ್ಟ 25 ಸಾವಿರದಿಂದ ಗರಿಷ್ಟ 86400 ರವರೆಗೆ ಇರುತ್ತವೆ.
ಇದನ್ನೂ ಓದಿ: Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ಅರ್ಜಿಯನ್ನು ಎಂಆರ್ಪಿಎಲ್ನ ಅಧಿಕೃತ ವೆಬ್‌ಸೈಟ್ https://mrpl.co.in/careers ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: Mangaluru News: ವಿದ್ಯಾರ್ಥಿನಿಯರಿಗೆ ಉತ್ತಮ ಅವಕಾಶ, ತಕ್ಷಣ ಗಮನಿಸಿ
ಅರ್ಜಿ ಸಲ್ಲಿಕೆ ದಿನಾಂಕ
ಸದ್ಯ ವೆಬ್‌ಸೈಟ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ. ಆನ್ಲೈನ್ನಲ್ಲಿ ಮೇ 22ರ ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಕೆಗೆ ತೆರೆದುಕೊಳ್ಳಲಿದೆ. ಜೂನ್ 16ರ ಸಂಜೆ 6 ಗಂಟೆಯವರೆಗೆ ಅರ್ಹ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ