• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mangaluru Job Fair: ಡಿಗ್ರಿ ಆಗಿದ್ರೆ ಸಾಕು, ಮಂಗಳೂರಿನ ಈ ಉದ್ಯೋಗ ಮೇಳದಲ್ಲಿ ಸಿಗುತ್ತೆ ಕೆಲಸ

Mangaluru Job Fair: ಡಿಗ್ರಿ ಆಗಿದ್ರೆ ಸಾಕು, ಮಂಗಳೂರಿನ ಈ ಉದ್ಯೋಗ ಮೇಳದಲ್ಲಿ ಸಿಗುತ್ತೆ ಕೆಲಸ

ಉದ್ಯೋಗ ಮೇಳ

ಉದ್ಯೋಗ ಮೇಳ

ಮಂಗಳೂರು ನಗರದಲ್ಲಿ ಉದ್ಯೋಗ ಮೇಳ ನಡೆಯುತ್ತಿದ್ದು ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

  • Share this:

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Daksina Kannada News) ಉದ್ಯೋಗ ಅರಸುತ್ತಿರುವ (Job Mela In Dakshina Kannada) ಯುವಕ, ಯುವತಿಯರಿಗೆ ಸಿಹಿ ಸುದ್ದಿ. ಇದೇ ಏಪ್ರಿಲ್‌ 28 ರಂದು ಮಂಗಳೂರಿನ(Mangaluru News) ಬಲ್ಮಠದಲ್ಲಿರುವ ಯೇನೆಪೋಯಾ ಕಾಲೇಜು ಆವರಣದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಹಲವು ಕಂಪೆನಿಗಳು ಭಾಗವಹಿಸಲಿದೆ.


ಯೇನೆಪೋಯಾ ಇನ್ಸ್ಟಿಟ್ಯೂಟ್‌ ಆಫ್‌ ಆರ್ಟ್ಸ್‌, ಸೈನ್ಸ್‌, ಕಾಮರ್ಸ್‌ ಮತ್ತು ಮ್ಯಾನೇಜ್‌ ಮೆಂಟ್‌ ಹಾಗೂ ಲಯನ್ಸ್‌ ಕ್ಲಬ್‌ ಸಹಯೋಗದೊಂದಿಗೆ ʼಯೆನ್‌ ಜಾಬ್‌ ಫೇರ್‌ – 2023ʼ ನಡೆಯಲಿದೆ. ಉದ್ಯೋಗ ಮೇಳದಲ್ಲಿ ವಿವಿಧ ರೀತಿಯ ಪದವಿ ಪಡೆದವರಿಗೆ ಉದ್ಯೋಗಾವಕಾಶವಿದೆ. ಸೂಕ್ತ ದಾಖಲಾತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಉದ್ಯೋಗವನ್ನು ಪಡೆಯುವ ಅವಕಾಶ ಸಿಗಲಿದೆ.


ಎಷ್ಟು ಕಂಪೆನಿಗಳು?
ಉದ್ಯೋಗ ಮೇಳದಲ್ಲಿ ಸುಮಾರು 35ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿಗಳು ನೇಮಕಾತಿ ಮಾಡಿಕೊಳ್ಳಲಿದೆ.


ಯಾವೆಲ್ಲ ಹುದ್ದೆಗಳು?
ಮಾನವ ಸಂಪನ್ಮೂಲ, ಪ್ರವಾಸೋದ್ಯಮ, ಆತಿಥ್ಯ, ವಿಮಾನಯಾನ, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ಆಸ್ಪತ್ರೆಗಳು, ಲಾಜಿಸ್ಟಿಕ್ಸ್‌, ಬ್ಯಾಂಕಿಂಗ್‌, ಮಾಧ್ಯಮ, ನರ್ಸಿಂಗ್‌, ಆಟೋಮೊಬೈಲ್‌ ಇನ್ನಿತರ ಕಂಪೆನಿಗಳ ಹುದ್ದೆಗಳು ನೇಮಕಾತಿ ನಡೆಯಲಿದೆ.


ಇದನ್ನೂ ಓದಿ: Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ


ಯಾರೆಲ್ಲ ಭಾಗವಹಿಸಬಹುದು?
ಈ ಉದ್ಯೋಗ ಮೇಳದಲ್ಲಿ ಬಿ.ಕಾಂ, ಬಿಸಿಎ, ಬಿಬಿಎ, ಡಿಪ್ಲೊಮಾ, ಐಟಿಐ ಮತ್ತು ಇತರೆ ಪದವಿ ಪೂರ್ಣಗೊಳಿಸಿದವರು ಭಾಗವಹಿಸಬಹುದಾಗಿದೆ. ಅನುಭವ ಹೊಂದಿದವರು ಹಾಗೂ ಅನುಭವ ಹೊಂದಿಲ್ಲದ ಈಗಷ್ಟೇ ಡಿಗ್ರಿ ಮುಗಿಸಿಕೊಂಡ ಯುವಕ, ಯುವತಿಯರು ಭಾಗವಹಿಸಬಹುದಾಗಿದೆ.
ಯಾವಾಗ ಉದ್ಯೋಗ ಮೇಳ?
'ಯೆನ್‌ ಜಾಬ್‌ ಫೇರ್‌ – 2023ʼ ಎಪ್ರಿಲ್‌ 28 ರ ಬೆಳಿಗ್ಗೆ 9 ರಿಂದ ಸಂಜೆ 4 ತನಕ ಮಂಗಳೂರು ನಗರದ ಬಲ್ಮಠದಲ್ಲಿರುವ ಯೇನೆಪೋಯಾ ಕಾಲೇಜು ಆವರಣದಲ್ಲಿ ನಡೆಯುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಹಾಜರಿದ್ದು, ನೋಂದಣಿ ಮಾಡಿಕೊಳ್ಳಬಹುದಾಗಿದೆ.


ಇದನ್ನೂ ಓದಿ: Puttur: 80 ಲಕ್ಷ ಲಾಟರಿ ಗೆದ್ದ ಪುತ್ತೂರಿನ ಟೈಲರ್, ಜಾಕ್​ಪಾಟ್ ಅಂದ್ರೆ ಇದು!


ಯಾವೆಲ್ಲ ದಾಖಲಾತಿ ಮುಖ್ಯ?
ಅಭ್ಯರ್ಥಿಗಳು ತಮ್ಮ ಸ್ವ ವಿವರವುಳ್ಳ ಬಯೋಡೇಟಾ, ಭಾವಚಿತ್ರಗಳು, ಆಧಾರ್‌ ಕಾರ್ಡ್‌, ಶೈಕ್ಷಣಿಕ ದಾಖಲಾತಿಗಳ ಪ್ರತಿಗಳ ಜೊತೆಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

top videos
    First published: