• ಹೋಂ
  • »
  • ನ್ಯೂಸ್
  • »
  • state
  • »
  • IPL Fan Park Mangaluru:‌ ಕರಾವಳಿಯಲ್ಲಿ ಐಪಿಎಲ್ ಫ್ಯಾನ್‌ ಪಾರ್ಕ್, ಇಲ್ಲಿದೆ ಸಂಪೂರ್ಣ ವಿವರ

IPL Fan Park Mangaluru:‌ ಕರಾವಳಿಯಲ್ಲಿ ಐಪಿಎಲ್ ಫ್ಯಾನ್‌ ಪಾರ್ಕ್, ಇಲ್ಲಿದೆ ಸಂಪೂರ್ಣ ವಿವರ

ಐಪಿಎಲ್ ಫ್ಯಾನ್ ಪಾರ್ಕ್

ಐಪಿಎಲ್ ಫ್ಯಾನ್ ಪಾರ್ಕ್

ಐಪಿಎಲ್‌ ಫ್ಯಾನ್‌ ಪಾರ್ಕ್‌ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಮಂಗಳೂರಿನಲ್ಲಿ ವಿಜೃಂಭಿಸಲಿದೆ.

  • Share this:

ಮಂಗಳೂರು: ಐಪಿಎಲ್ ಕ್ರೇಝ್‌ ದೇಶದ ಮೂಲೆ ಮೂಲೆಯನ್ನೂ ಬಿಟ್ಟಿಲ್ಲ. ಜಿಯೋ ಸಿನೆಮಾದಲ್ಲಿ ಕೋಟ್ಯಂತರ ಮಂದಿ ಐಪಿಎಲ್‌ (IPL 2023) ವೀಕ್ಷಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಇದೀಗ ಕಡಲನಗರಿಯಲ್ಲೂ ಐಪಿಎಲ್ ಫ್ಯಾನ್‌ ಪಾರ್ಕ್‌ (IPL Fan Park Mangaluru) ನಿರ್ಮಾಣಗೊಂಡಿದ್ದು, ನಾಲ್ಕು ವರ್ಷದ ಬಳಿಕ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಎಂಜಾಯ್‌ ಮಾಡುತ್ತಾ ಎರಡು ಪಂದ್ಯಗಳನ್ನ ನೋಡುವ ಅವಕಾಶ ಕರಾವಳಿಗರಿಗೆ ಒದಗಿ ಬಂದಿದೆ.


ಯಾವಾಗ, ಎಲ್ಲಿ?
ಇದೇ ಮೇ 21ರ ಭಾನುವಾರ ನಡೆಯಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ನಡುವಿನ ಮೊದಲ ಪಂದ್ಯ ಅಪರಾಹ್ನ 3.30ರಿಂದ ಹಾಗೂ ಸಂಜೆ 7.30ಕ್ಕೆ ನಡೆಯಲಿರುವ ಹಾಟ್‌ ಫೇವರಿಟ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.


ಉಚಿತ ಪ್ರವೇಶ
ಈ ಬಾರಿ ಮಂಗಳೂರಿನಿಂದ ಕೊಣಾಜೆ ಮಂಗಳೂರು ವಿವಿ ತೆರಳುವ ರಸ್ತೆಯಲ್ಲಿರುವ ದೇರಳಕಟ್ಟೆಯ ಕಣಚೂರು ಮೆಡಿಕಲ್‌ ಕಾಲೇಜು ಮೈದಾನದಲ್ಲಿ ಜಿಯೋ ಸಿನೆಮಾ ವತಿಯಿಂದ ಫ್ಯಾನ್‌ ಪಾರ್ಕ್‌ ನಿರ್ಮಾಣವಾಗಿದೆ. ಕ್ರಿಕೆಟ್‌ ಪ್ರೇಮಿಗಳಿಗೆ ಉಚಿತ ಪ್ರವೇಶವಿದ್ದು, ಭಾನುವಾರ ಮಧ್ಯಾಹ್ನ 1.30 ಗೇಟ್‌ ತೆರೆಯಲಿದೆ.


ಇದನ್ನೂ ಓದಿ: Cobra Bikes In Mangaluru: ಬೀ ಅಲರ್ಟ್‌! ಈ ಬೈಕ್​ಗಳೇ ಟ್ರಾಫಿಕ್ ಸಮಸ್ಯೆಗೆ ರಾಮಬಾಣ


ವಿಘ್ನ ಎದುರಾಗದಿರಲಿ ಎನ್ನುತ್ತಿದ್ದಾರೆ ಫ್ಯಾನ್ಸ್!‌
ನಿಜ, ಈ ಹಿಂದೆ 2016ರಲ್ಲಿ ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಐಪಿಎಲ್‌ ಫ್ಯಾನ್‌ ಪಾರ್ಕ್‌ ತೆರೆದಿದ್ದು ಯಶಸ್ವಿಯಾಗಿ ನಡೆದಿತ್ತು. ಕಡಲನಗರಿಯ ಜನರ ಕ್ರಿಕೆಟ್‌ ಪ್ರೇಮ ಅರಿತ ಆಯೋಜಕರು 2017 ರಲ್ಲಿಯೂ ಅದೇ ಮೈದಾನದಲ್ಲಿ ಫ್ಯಾನ್‌ ಪಾರ್ಕ್‌ ತೆರೆದಿದ್ದರು. ಇನ್ನೇನು 2018ರಲ್ಲಿ ಐಪಿಎಲ್‌ ಫ್ಯಾನ್‌ ಪಾರ್ಕ್‌ ತೆರೆದಿದ್ದರಾದರೂ ಪಂದ್ಯ ಆರಂಭಕ್ಕೂ ಮುನ್ನವೇ ಗಾಳಿ ಮಳೆಯಾಗಿದ್ದ ಪರಿಣಾಮ ಆ ಬಾರಿಯ ಫ್ಯಾನ್‌ ಪಾರ್ಕ್‌ ಪಂದ್ಯಾಟ ವೀಕ್ಷಣೆ ರದ್ದುಗೊಂಡಿತ್ತು.




2019ರಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಮಂಗಳೂರು ನಗರದಲ್ಲಿ ಸಿದ್ಧತೆ ನಡೆದಿತ್ತಾದರೂ ಚುನಾವಣೆ ನೀತಿ ಸಂಹಿತೆ ಹಾಗೂ ಭದ್ರತೆ ದೃಷ್ಟಿಯಿಂದ ಅನುಮತಿ ನಿರಾಕರಿಸಲಾಗಿತ್ತು. ಬಳಿಕದ ಎರಡು ವರ್ಷ ಕೊರೊನಾ ಕಾಟವೂ ಫ್ಯಾನ್‌ ಪಾರ್ಕ್‌ ನಿರ್ಮಾಣಕ್ಕೆ ಅಡ್ಡಿಯಾಗಿತ್ತು ಅನ್ನೋದು ಮರೆಯುವಂತಿಲ್ಲ.


ಇದನ್ನೂ ಓದಿ: Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!


ಹೀಗಾಗಿ ಈ ಬಾರಿಯ ಐಪಿಎಲ್‌ ಫ್ಯಾನ್‌ ಪಾರ್ಕ್‌ ಗೆ ವಿಘ್ನ ಎದುರಾಗದಿರಲಿ ಅಂತಾ ಕ್ರಿಕೆಟ್‌ ಫ್ಯಾನ್ಸ್‌ ಬೇಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ದೇ ಈ ಬಾರಿ ಕಣಚೂರಿಗೆ ಲೊಕೇಶನ್‌ ಶಿಫ್ಟ್‌ ಮಾಡಲಾಗಿದ್ದು, ಎರಡು ಪಂದ್ಯವನ್ನು ನೋಡುವ ಅವಕಾಶ ಕ್ರಿಕೆಟ್‌ ಪ್ರೇಮಿಗಳಿಗಿದೆ.

top videos
    First published: