ಇಲಿ ಪಾಷಾಣ ವಿಷಕಾರಿ ಎಂಬುದು ಗೊತ್ತಿದೆ. ಹಾಗಾಗಿ ಇದನ್ನು ಬಳಕೆ ಮಾಡುವವರು ತುಂಬಾ ಎಚ್ಚರಿಕೆಯಿಂದ ಬಳಕೆ ಮಾಡಿ. ಪ್ರಾಯಸ್ತರಿಗೆ, ಮಕ್ಕಳ ಕೈಗೆ ಮತ್ತು ಯಾರ ಕೈಗೂ ಸಿಗದಂತೆ ತೆಗೆದಿಡಿ, ಏಕೆಂದರೆ ಇಲ್ಲೊಬ್ಬರು ವೃದ್ಧೆ ಹಲ್ಲು ತೊಳೆಯುವ ಪೇಸ್ಟ್ ಎಂದು ಇಲಿ ಪಾಷಾಣವನ್ನು ಬಳಸಿ ಅಸ್ವಸ್ಥಗೊಂಡು ಕೊನೆಗೆ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರ್ಕಳದ ಕಾಳಬೆಟ್ಟಿನ 61 ವರ್ಷ ಪ್ರಾಯದ ಕಲಾವತಿ ಎಂಬ ವೃದ್ಧೆ. ಆ 22 ರಂದು ಬೆಳಗಿನ ಜಾವ ಹಲ್ಲು ಉಜ್ಜಲೆಂದು ತೆರಳುತ್ತಾರೆ. ಕೈಗೆ ಸಿಕ್ಕ ಇಲಿ ಪಾಷಾಣವನ್ನು ಪೇಸ್ಟ್ ಎಂದು ತಿಳಿದು ಅದರಲ್ಲಿ ಹಲ್ಲು ಉಜ್ಜುತ್ತಾರೆ. ಪರಿಣಾಮ ಅಸ್ವಸ್ಥಗೊಂಡ ಅವರನ್ನು ಕುಟುಂಬಸ್ಥರು ಗಮನಿಸಿದಾಗ ಇಲಿ ಪಾಷಾಣದಲ್ಲಿ ಹಲ್ಲು ತೊಳೆದಿದ್ದಾರೆ ಎಂದು ಗೊತ್ತಾಗಿದೆ. ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗುತ್ತದೆ.
Flipkart sale: ರಿಯಲ್ಮಿ ಸ್ಮಾರ್ಟ್ಫೋನ್ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ… 8 ಸಾವಿರದಷ್ಟು ರಿಯಾಯಿತಿ!
ಅಸ್ವಸ್ಥಗೊಂದ ವೃದ್ಧೆ ಕಲಾವತಿಯನ್ನು ಕಾರ್ಕಳದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ನಂತರ ಹೆಚಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಕೊನೆಗೆ ಚಿಕಿತ್ಸೆ ಫಲಿಸದೆ ಆ.2 ರಮದು ತೀರಿ ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ