Puppy Rescue: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ನಾಯಿಮರಿಗಳು ಮತ್ತೆ ಮಾಲೀಕರ ಮಡಿಲು ಸೇರಿತು!

ಪ್ರವಾಹದಲ್ಲಿ ನಾಯಿಗಳು ನಾಪತ್ತೆಯಾದ ಕೊರಗಿನಲ್ಲೇ ಇದ್ದ ಲಲಿತಾ ಮನೆ ಮಂದಿಗೆ ದುಃಖದ ನಡುವೆ ಸಂತಸ ಕ್ಷಣವೊಂದು ಎದುರಾಯಿತು. ರಾಜು-ರಾಣಿ ನಾಯಿಗಳು ಬದುಕಿವೆ ಅಂತಾ ದೂರವಾಣಿ ಸಂದೇಶ ಬಂತು. ಈ ದೂರವಾಣಿ ಕರೆ ಮನೆ ಮಂದಿಯಲ್ಲಿ ಮತ್ತೆ ಸಂತಸ ತಂದಿತ್ತು.

ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ನಾಯಿಮರಿಗಳು

ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ನಾಯಿಮರಿಗಳು

  • Share this:
ದಕ್ಷಿಣ ಕನ್ನಡ (ಆಗಸ್ಟ್​ 06): ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಅದರಲ್ಲೂ ಸುಳ್ಯ ತಾಲೂಕಿನ ಹರಿಹರ, ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಾಳುಗೋಡು, ಕಲ್ಲಕಾರು ಮೊದಲಾದ ಭಾಗದಲ್ಲಿ ಮಳೆ ಜನರನ್ನು ಭಯದಿಂದಲೇ ಬದುಕುವಂತಹ ಸ್ಥಿತಿಗೆ ತಂದೊಡ್ಡಿದೆ. ಹೀಗಿರೋವಾಗ ಆಗಸ್ಟ್ 1ರಂದು ಈ ಭಾಗದಲ್ಲಿ ಸುರಿದ ಮೇಘಸ್ಪೋಟ (Cloud burst) ಮಳೆಗೆ ಕೊಲ್ಲಮೊಗ್ರುವಿನ ಕುಟುಂಬವೊಂದು ಮನೆ, ಜಾನುವಾರು (Cow) ಎಲ್ಲವನ್ನು ಕಳೆದುಕೊಂಡು ದುಃಖದಲ್ಲಿ ದಿನ ಕಳೆಯುತ್ತಿತ್ತು.  ಹೀಗಿರೋವಾಗ ಬಂದ ಅದೊಂದು ದೂರವಾಣಿ ಕರೆ (Phone call) ಮನೆ‌ಮಂದಿಯ ಮುಖದಲ್ಲಿ ‌ಮತ್ತೆ‌ ಸಂತಸ ಮೂಡಿಸಿದೆ. ಪ್ರವಾಹ (Flood) ಪಾಲಾಗಿದ್ದ ಪ್ರೀತಿಯ ನಾಯಿಮರಿಗಳು (Puppy) ಮತ್ತೆ ಮನೆಯವರ ಮಡಿಲು ಸೇರಿದೆ.

ಕೊಲ್ಲಮೊಗ್ರದ ಹೊಳೆ ಇಡೀ ಗ್ರಾಮವನ್ನು ಆವರಿಸಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿ ಬಹಳಷ್ಟು ಅವಾಂತರಗಳು ಸೃಷ್ಟಿಸಿತ್ತು. ಮೇಘಸ್ಪೋಟ ಮಳೆಯಿಂದಾಗಿ ಹಲವಾರು ಜನ ತಮ್ಮ ಮನೆ-ಮಠ ಕಳೆದುಕೊಳ್ಳುವ ಸ್ಥಿತಿಯೂ ನಿರ್ಮಾಣಗೊಂಡಿದೆ. ಆದರೆ ಮಳೆಯ ಭೀಕರತೆಯ ನಡುವೆ ಖುಷಿ ಕೊಡುವ ಘಟನೆ ನಡೆದಿದೆ.

Heavy rain Karnataka rescue 2 dog in costal area
ಕೈಸೇರಿತು ನಾಯಿಮರಿಗಳು


ಇಡೀ ಮನೆಯೇ ಪ್ರವಾಹಪಾಲು!

ಕೊಲ್ಲಮೊಗ್ರು ಗ್ರಾಮದ ದೋಲನ ಮನೆ ಎನ್ನುವ ಊರಿನ ನಿವಾಸಿಯಾದ ಲಲಿತಾರವರ ಮನೆಗೂ ನೆರೆ ನೀರು ನುಗ್ಗುತ್ತಿದ್ದಂತೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆದರು. ಆದರೆ ಪ್ರವಾಹದಿಂದಾಗಿ ಲಲಿತಾರವರ ಪುತ್ರ ಹೇಮಂತ್ ಮರುದಿನ ಮನೆಗೆ ತೆರಳಿದರು. ಮನೆಗೆ ಬಂದು ನೋಡಿದಾಗ ಆಘಾತವಾಗಿತ್ತು. ಮನೆ ಸಂಪೂರ್ಣವಾಗಿ ನೆಲಸಮವಾಗಿತ್ತು. ಮನೆಯಲ್ಲಿದ್ದ ಅನೇಕ ವಸ್ತುಗಳು ಪ್ರವಾಹ ಪಾಲಾಗಿತ್ತು.

ಇದನ್ನೂ ಓದಿ: ಲಾಲ್‍ಬಾಗ್‍ನಲ್ಲಿ ಅರಳಿದ ಬಗೆಬಗೆಯ ಹೂವುಗಳು! ಈ ಗಿಡಗಳು ನಿಮಗೂ ಬೇಕೆ?

ಕೊಚ್ಚಿಹೋಗಿತ್ತು ಮುದ್ದಾದ ನಾಯಿಮರಿಗಳು!

ಹಟ್ಟಿಯಲ್ಲಿದ್ದ ಹಸು ನೆರೆ ಬಂದು ಮೃತಪಟ್ಟಿತ್ತು. ಆದರೆ ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಹೆಸರಿನ ಎರಡು ಪಮೋರಿಯನ್ ನಾಯಿಗಳು ಮಾತ್ರ ಕಾಣಿಸಿರಲಿಲ್ಲ. ಎಲ್ಲಾ ಕಡೆ ಹುಡುಕಿದ್ರೂ ಪತ್ತೆಯಾಗಿರಲಿಲ್ಲ. ಪ್ರೀತಿಯ 2 ನಾಯಿಗಳು ಕೊಚ್ಚಿ ಹೋಯ್ತಲ್ಲ ಅಂತಾ ಕುಟುಂಬದವರು ದುಃಖಪಟ್ರು. 2 ನಾಯಿಗಳು ಕಣ್ಮರೆಯಾದ ವಿಚಾರವನ್ನು ಕುಟುಂಬಕ್ಕೆ ಅರಗಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ.

ದೂರವಾಣಿ ಕರೆಯಲ್ಲಿತ್ತು ಶುಭಸುದ್ದಿ!

ನಾಯಿಗಳು ನಾಪತ್ತೆಯಾದ‌ ಕೊರಗಿನಲ್ಲೇ ಇದ್ದ ಲಲಿತಾ ಮನೆ ಮಂದಿಗೆ ದುಃಖದ ನಡುವೆ ಸಂತಸ ಕ್ಷಣವೊಂದು ಎದುರಾಯಿತು. ರಾಜು-ರಾಣಿ ನಾಯಿಗಳು ಬದುಕಿವೆ ಅಂತಾ ದೂರವಾಣಿ ಸಂದೇಶ ಬಂತು. ಈ ದೂರವಾಣಿ ಕರೆ ಮನೆ ಮಂದಿಯಲ್ಲಿ ಮತ್ತೆ ಸಂತಸ ತಂದಿತ್ತು.

ಇದನ್ನೂ ಓದಿ: ಅಭಿಮನ್ಯು ಸಾರಥ್ಯದಲ್ಲೇ ಅಂಬಾರಿ ಮೆರವಣಿಗೆ, ದಸರಾ ಗಜಪಡೆಗಳ ಪಟ್ಟಿ ಬಿಡುಗಡೆ

ನಾಯಿಗಾಗಿ ನಿರಂತರ ಹುಡುಕಾಟ

ಆಗಸ್ಟ್​ 1ರಂದು ಸುರಿದ ಧಾರಾಕಾರ ಮಳೆಗೆ ಕಂಡುಕೇಳರಿಯದ ಪ್ರವಾಹ ಉಂಟಾಗಿತ್ತು. ಮನೆಯಲ್ಲಿದ್ದ ಎರಡು ನಾಯಿಮರಿಗಳು ಪ್ರವಾಹಪಾಲಾಗಿತ್ತು. ಯಾವಾಗಲೂ ಒಂದನ್ನೊಂದು ಬಿಟ್ಟಿರದಿದ್ದ ನಾಯಿಗಳು ನೆರೆಯಿಂದಾಗಿ ದೂರವಾಗಿದ್ದವು. ನಾಯಿಗಾಗಿ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ರು. ಫೋನ್​ ಮೂಲಕವೂ ಹುಡುಕಿದ್ದರು.

2.5 ಕಿ.ಮೀ ದೂರಕ್ಕೆ ಕೊಚ್ಚಿಹೋಗಿತ್ತು ನಾಯಿ

ಎಲ್ಲಾ ಹುಡುಕಾಟದ ಬಳಿಕ ಲಲಿತಾ ಕುಟುಂಬದವರು ಹೀಗಾಗೋಯ್ತಲ್ಲ ಅಂತಾ ದುಃಖದಲ್ಲಿದ್ದರು. ಹೀಗಿರುವಾಗ ಲಲಿತಾರವರಿಗೆ ದೂರವಾಣಿ ಕರೆ ಬಂದಿದ್ದು ನಾಯಿ ಸಿಕ್ಕಿದೆ ಅಂದಿದ್ದಾರೆ. ನಾಯಿ ಕೊಚ್ಚಿಹೋದ ದೋಲನಮನೆಯಿಂದ ಸುಮಾರು 2.5 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಒಂದು ನಾಯಿಮರಿ ಸಿಕ್ಕಿದ್ದು, ಅದೇ ಪ್ರದೇಶದ ಮತ್ತೊಂದು ಭಾಗದಲ್ಲಿ ಇನ್ನೊಂದು ನಾಯಿಮರಿಗಳು ಪತ್ತೆಯಾಗಿದೆ.

ನಾಯಿ ಸಿಕ್ಕಿದ್ದಕ್ಕೆ ಕುಟುಂಬ ಫುಲ್ ಖುಷ್

ಮುದ್ದಾಗಿ ಸಾಕಿದ ಶ್ವಾನಗಳು ಸಿಕ್ಕಿದ ಹಿನ್ನೆಲೆ ಮನೆಯವರ ಸಂತೋಷಕ್ಕೆ ಪಾರವೇ ಇಲ್ಲದಾಗಿದೆ. ಮನೆ ಮಂದಿಯಂತಿದ್ದ ನಾಯಿಗಳನ್ನು ಕಳೆದುಕೊಂಡೆವು ಎಂದು ದುಃಖದಲ್ಲಿದ್ದ ನಮಗೆ ನಾಯಿಗಳು ಮತ್ತೆ ಸಿಗುತ್ತೆ ಅಂತಾ ಗೊತ್ತಿರಲಿಲ್ಲ ಅಂತಾರೆ ಲಲಿತಾ ಮನೆಯವರು. ನೆರೆಯ ನಡುವೆ ನಾಯಿ ಸಿಕ್ಕಿದ್ದಂತೆ ಸಂತಸವಾಗಿದ್ದಾರೆ.
Published by:Thara Kemmara
First published: