• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Father's Day 2021: ಮಳೆಯಲ್ಲಿ ಆನ್​ಲೈನ್ ಕ್ಲಾಸ್​ ಕೇಳುವ ಮಗಳಿಗೆ ಅಪ್ಪನ ಕೊಡೆಯೇ ಆಸರೆ; ಸುಳ್ಯದ ತಂದೆ-ಮಗಳ ಫೋಟೋ ವೈರಲ್

Father's Day 2021: ಮಳೆಯಲ್ಲಿ ಆನ್​ಲೈನ್ ಕ್ಲಾಸ್​ ಕೇಳುವ ಮಗಳಿಗೆ ಅಪ್ಪನ ಕೊಡೆಯೇ ಆಸರೆ; ಸುಳ್ಯದ ತಂದೆ-ಮಗಳ ಫೋಟೋ ವೈರಲ್

ಸುಳ್ಯದಲ್ಲಿ ಮಗಳಿಗೆ ಕೊಡೆ ಹಿಡಿದಿರುವ ಅಪ್ಪ

ಸುಳ್ಯದಲ್ಲಿ ಮಗಳಿಗೆ ಕೊಡೆ ಹಿಡಿದಿರುವ ಅಪ್ಪ

Happy Father's Day: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಬಳಿ ಅಪ್ಪನೊಬ್ಬ ತನ್ನ ಮಗಳ ಆನ್​ಲೈನ್ ಕ್ಲಾಸ್​ಗೆ ತೊಂದರೆಯಾಗಬಾರದು ಎಂದು ಆಕೆಗೆ ಛತ್ರಿ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • Share this:

ಅಪ್ಪನೆಂದರೆ ಆಕಾಶ! ಹೀಗೆಂದು ಹೇಳುವುದು ಉತ್ಪ್ರೇಕ್ಷೆಯೇನಲ್ಲ. ತನ್ನ ಮಕ್ಕಳಿಗಾಗಿ ಜೀವವನ್ನೇ ಸವೆಸುವ ಅಪ್ಪ ಮಕ್ಕಳ ಖುಷಿಗಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡುತ್ತಾನೆ. ಇವತ್ತು ವಿಶ್ವ ಅಪ್ಪಂದಿರ ದಿನ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಬಳಿ ಅಪ್ಪನೊಬ್ಬ ತನ್ನ ಮಗಳ ಆನ್​ಲೈನ್ ಕ್ಲಾಸ್​ಗೆ ತೊಂದರೆಯಾಗಬಾರದು ಎಂದು ಮಳೆಯಿಂದ ರಕ್ಷಿಸಲು ಆಕೆಗೆ ಛತ್ರಿ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಎಂಬ ಊರಿನ ಎಸ್​ಎಸ್​ಎಲ್​ಸಿ ಬಾಲಕಿಯೊಬ್ಬಳು ಆನ್​ಲೈನ್ ಕ್ಲಾಸ್​ಗೆ ಮನೆಯಲ್ಲಿ ನೆಟ್​ವರ್ಕ್ ಸಿಗದ ಕಾರಣ ರಸ್ತೆಯ ಪಕ್ಕದಲ್ಲಿ ಕುಳಿತು ಕ್ಲಾಸ್ ಕೇಳುತ್ತಿದ್ದಳು. ಕೊರೋನಾ ಹಾವಳಿ ಶುರುವಾದಾಗಿನಿಂದ ಇದು ಆಕೆಯ ನಿತ್ಯ ಕಾಯಕವಾಗಿತ್ತು. ಆದರೆ, ಇದೀಗ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ನೆಟ್​ವರ್ಕ್ ಸಮಸ್ಯೆ ಹೆಚ್ಚಾಗಿದೆ. ಎಷ್ಟೋ ಕಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಹೀಗಾಗಿ, ಮಳೆಯಲ್ಲೇ ರಸ್ತೆ ಬದಿ ಕುಳಿತು ಆನ್​ಲೈನ್ ಕ್ಲಾಸ್ ಕೇಳುತ್ತಿದ್ದ ಮಗಳಿಗೆ ಆಕೆಯ ಅಪ್ಪ ಕೊಡೆ ಹಿಡಿದು ರಕ್ಷಣೆ ಕೊಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.


ಇದನ್ನೂ ಓದಿ: Happy Fathers Day 2021: ವಿಶ್ವ ಅಪ್ಪಂದಿರ ದಿನಾಚರಣೆಗೆ ಗೂಗಲ್​ ಡೂಡಲ್​​ನಿಂದ​ ವಿಶೇಷ ಗೌರವ


ಮೊಬೈಲ್​ನಲ್ಲಿ ಪಾಠ ಕೇಳುತ್ತಿರುವ ಮಗಳಿಗೆ ಅಪ್ಪ ಛತ್ರಿ ಹಿಡಿದು ನಿಂತ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕುಗ್ರಾಮಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಅನೇಕ ಹಳ್ಳಿಗಳಲ್ಲಿ ನೆಟ್​ವರ್ಕ್ ಸಂಪರ್ಕವೂ ಇಲ್ಲ. ಹೀಗಾಗಿ, ಆನ್​ಲೈನ್ ಕ್ಲಾಸ್​ ಕೇಳಲು ವಿದ್ಯಾರ್ಥಿಗಳು ಮತ್ತು ವರ್ಕ್ ಫ್ರಂ ಹೋಂ ಮಾಡುವವರಿಗೆ ಬಹಳ ಸಮಸ್ಯೆಯಾಗುತ್ತಿದೆ.




ಆನ್​ಲೈನ್ ಕ್ಲಾಸ್ ಕೇಳಲು, ವರ್ಕ್ ಫ್ರಂ ಹೋಂ ಮಾಡಲು ಬೆಟ್ಟವೇರಿ ಕುಳಿತ, ಗುಡ್ಡದಲ್ಲಿ ಶೆಡ್ ಹಾಕಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ಸುಳ್ಯ ತಾಲೂಕಿನ ಕಮಿಲ ಎಂಬ ಊರಿನ ಬಾಲಕಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಆನ್​ಲೈನ್ ಕ್ಲಾಸ್ ಕೇಳಲು ಗುಡ್ಡದ ತುದಿಯಲ್ಲಿರುವ ರಸ್ತೆ ಬದಿಯಲ್ಲಿ ಕೂರುತ್ತಾಳೆ. ಅಪ್ಪನ ಜೊತೆ ಗುಡ್ಡ ಹತ್ತಿ ಹೋಗುವ ಆಕೆಗೆ ಅಪ್ಪನೇ ಕೊಡೆ ಹಿಡಿದು ಮಳೆಯಿಂದ ರಕ್ಷಣೆ ಕೊಡುತ್ತಾನೆ. ಇದು ಕಮಿಲ ಊರೊಂದರ ಕತೆಯಲ್ಲ, ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶದ ವಾಸ್ತವತೆಯಿದು.

First published: