PM Matsya Sampada Yojana: ಮೀನು ಸಾಕಾಣಿಕೆ ಮಾಡಿದ್ರೆ ಸರ್ಕಾರದಿಂದ ಭರ್ಜರಿ ಸಬ್ಸಿಡಿ

ಮೀನು ಸಾಕಾಣಿಕೆಯಲ್ಲಿ ತೊಡಗುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಶೇಕಡಾ 60ರಷ್ಟು ಸಬ್ಸಿಡಿಯನ್ನೂ ನೀಡಲಾಗುತ್ತಿದೆ. ಮೀನು ಸಾಕಾಣಿಕೆಗೆ ಬೇಕಾದ ಮೀನಿನ ಮರಿಗಳ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲೇ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಮೀನು ಸಾಕಾಣಿಕೆ

ಮೀನು ಸಾಕಾಣಿಕೆ

  • Share this:
ರಾಜ್ಯದಲ್ಲಿ ಮೀನುಗಾರಿಕೆ ಹಾಗೂ ಮೀನು ಸಾಕಾಣಿಕೆಗೆ (Fish farming) ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ (Karnataka Govt ) ಹಲವು ನೂತನ ಯೋಜನೆಗಳನ್ನು(New Scheme) ಪರಿಚಯಿಸಿದೆ. ಅದರಲ್ಲೂ ಕೃಷಿತೋಟಗಳಲ್ಲಿ ಮೀನು ಸಾಕಾಣಿಕೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಯ (Pradhan Mantri Matsya Sampada Yojana) ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಮೀನು ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ, ರಾಜ್ಯದಲ್ಲೇ ಮೀನು ತಳಿಗಳ ಉತ್ಪಾದನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: SBI Loan Offer: ರೈತರೇ ಇಲ್ಲಿ ಕೇಳಿ.. ಅತ್ಯಂತ ಕಡಿಮೆ ಬಡ್ಡಿದರಕ್ಕೆ ಲೋನ್.. ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ

ಹಲವು ಅನುದಾನಗಳು ಲಭ್ಯ 

ಆರೋಗ್ಯದ ದೃಷ್ಟಿಯಿಂದ ಮೀನಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಬರುತ್ತಿದೆ. ಉಪ್ಪು ನೀರಿನ ಮೀನು ಹಾಗೂ ಸಿಹಿ ನೀರಿನ ಮೀನು ಎನ್ನುವ ಎರಡು ರೀತಿಯಲ್ಲಿ ಮೀನುಗಳನ್ನು ವಿಂಗಡಿಸಲಾಗುತ್ತದೆ. ಸಮುದ್ರದಲ್ಲಿ ಸಿಗುವ ಮೀನುಗಳಿಗೆ ಉಪ್ಪು ನೀರಿನ ಮೀನು ಹಾಗೂ ನದಿ ಹಾಗೂ ಕೆರೆ, ತೋಡುಗಳಲ್ಲಿ ಸಿಗುವ ಮೀನುಗಳನ್ನು ಸಿಹಿ ನೀರಿನ ಮೀನುಗಳನ್ನು ಎಂದು ವರ್ಗೀಕರಿಸಲಾಗಿದೆ. ಇತ್ತೀಚೆಗೆ ಮೀನುಗಳಿಗೆ ಸಿಗುತ್ತಿರುವ ಭಾರೀ ಬೇಡಿಕೆಯಿಂದಾಗಿ, ಬೇಡಿಕೆಯನ್ನು ಪೂರೈಸಲಾಗದ ಹಂತದಲ್ಲಿ ಮೀನುಗಾರಿಕಾ ಉದ್ಯಮವಿದ್ದು, ಈ ನಿಟ್ಟಿನಲ್ಲಿ ಸಿಹಿ ನೀರಿನ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡಲು ಸರಕಾರ ತೀರ್ಮಾನಿಸಿದೆ. ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಯ ಮೂಲಕ ಮೀನುಗಾರಿಕಾ ಇಲಾಖೆಗೆ ಈ ನಿಟ್ಟಿನಲ್ಲಿ ಅನುದಾನಗಳನ್ನು ನೀಡಲಾಗುತ್ತಿದೆ.

ಶೇ.60ರಷ್ಟು ಸಬ್ಸಿಡಿ.. 

ರಾಜ್ಯದಲ್ಲಿ ಮೀನು ಸಾಕಾಣಿಕೆಯನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಸಬೇಕು ಎನ್ನುವ ಕಾರಣಕ್ಕಾಗಿ ಕೃಷಿತೋಟಗಳಲ್ಲಿ ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಅದರಲ್ಲೂ ಈ ರೀತಿಯ ಮೀನು ಸಾಕಾಣಿಕೆಯಲ್ಲಿ ತೊಡಗುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಶೇಕಡಾ 60 ಸಬ್ಸಿಡಿಯನ್ನೂ ನೀಡಲಾಗುತ್ತಿದೆ. ಮೀನು ಸಾಕಾಣಿಕೆಗೆ ಬೇಕಾದ ಮೀನಿನ ಮರಿಗಳ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲೇ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಹಿಂದೆ ಮೀನಿನ ಮರಿಗಳಿಗಾಗಿ ತಮಿಳುನಾಡು, ಆಂದ್ರಪ್ರದೇಶ ಹಾಗು ಗುಜರಾತ್ ರಾಜ್ಯಗಳನ್ನು ಅವಲಂಭಿಸಬೇಕಾದ ಪ್ರಮೇಯವನ್ನು ಈ ಮೂಲಕ ನಿವಾರಿಸಲು ನಿರ್ಧರಿಸಲಾಗಿದೆ.

8 ಶಿಥಲೀಕರಣ ವ್ಯವಸ್ಥೆಯಿರುವ ವಾಹನ

ರಾಜ್ಯದಲ್ಲಿ ಉತ್ಪಾದನೆಯಾಗುವ ಸಿಹಿ ಹಾಗೂ ಉಪ್ಪು ನೀರಿನ ಮೀನುಗಳನ್ನು ತ್ಪರಿತವಾಗಿ ಮಾರುಕಟ್ಟೆಗಳಿಗೆ ತಲುಪಿಸುವ ನಿಟ್ಟಿನಲ್ಲಿ 8 ಶಿಥಲೀಕರಣ ವ್ಯವಸ್ಥೆಯಿರುವ ವಾಹನಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಈ ಶಿಥಲೀಕರಣ ವ್ಯವಸ್ಥೆಯಿರುವ ವಾಹನಗಳನ್ನು ಸೋಲಾರ್ ಮತ್ತು ಎಲೆಕ್ಟ್ರಿಕ್ ಮೂಲಕ ಓಡಿಸುವ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎನ್ನುತ್ತಾರೆ ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ.

ಇದನ್ನೂ ಓದಿ: PM Kisan: ಈ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಲಾಭ ಸಿಗಲ್ಲ

ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ

ಮೀನು ಸಾಕಾಣಿಕೆ ಮಾಡುವವ ಕೃಷಿಕರ ಸಹಕಾರಿ ಸಂಘವೂ ಅಸ್ಥಿತ್ವಕ್ಕೆ ಬರಲಿದ್ದು, ಈ ಮೂಲಕ ಮೀನು ಸಾಕಾಣಿಕೆಯಲ್ಲಿ ತೊಡಗುವ ಕೃಷಿಕರಿಗೆ ಮೀನುಗಾರಿಕೆಗೆ ಬೇಕಾದ ಮೂಲ ವಸ್ತುಗಳಾದ ಮೀನಿನ ಮರಿ, ಮೀನಿನ ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ. ಸರಕಾರದಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ಮೀನು ಸಾಕಾಣಿಕೆಯಲ್ಲಿ ತೊಡಗಿಕೊಳ್ಳಲು ಕೃಷಿಕರು ತೀರ್ಮಾನಿಸಿದ್ದಾರೆ ಎನ್ನುತ್ತಾರೆ ಮೀನು ಸಾಕಾಣಿಕೆ ಮಾಡುತ್ತಿರುವ ಕೃಷಿಕ ಬೂಡಿಯಾರು ರಾಧಾಕೃಷ್ಣ ರೈ. ಕರಾವಳಿಯಲ್ಲಿ ಮೀನುಗಾರಿಕೆ ಉತ್ತಮ ಆದಾಯದ ಮೂಲವಾಗಿ ಗುರುತಿಸಿಕೊಂಡಿದ್ದು, ಹೆಚ್ಚಾಗಿ ಉಪ್ಪು ನೀರಿನ ಮೀನುಗಾರಿಕೆಯದ್ದೇ ಇದರಲ್ಲಿ ಹೆಚ್ಚಿನ ಪಾಲಿತ್ತು. ಆದರೆ ಮುಂದಿನ ದಿನಗಳಲ್ಲಿ ಸಿಹಿ ನೀರಿನ ಮೀನುಗಾರಿಕೆಯೂ ಇದರಲ್ಲಿ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸಲಾರಂಭಿಸಿದೆ. ಇನ್ನೇಕೆ ತಡ ನೀವೂ ಮೀನುಗಾರಿಕೆಗೆ ಮುಂದಾಗಿ.
Published by:Kavya V
First published: