• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Free College Admission: ಪ್ರಥಮ ಪಿಯುಸಿ ಸೈನ್ಸ್​ಗೆ ಉಚಿತ ಅಡ್ಮಿಶನ್‌, ಈಗಲೇ ಇಲ್ಲಿ ಅರ್ಜಿ ಸಲ್ಲಿಸಿ

Free College Admission: ಪ್ರಥಮ ಪಿಯುಸಿ ಸೈನ್ಸ್​ಗೆ ಉಚಿತ ಅಡ್ಮಿಶನ್‌, ಈಗಲೇ ಇಲ್ಲಿ ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

ಉಚಿತ ವಸತಿ, ಊಟದೊಂದಿಗೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುವಂತಹ ಅವಕಾಶ ಇಲ್ಲಿದೆ ನೋಡಿ.

 • News18 Kannada
 • 5-MIN READ
 • Last Updated :
 • Mangalore, India
 • Share this:

ಮಂಗಳೂರು: ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿಯಲು ಆಸಕ್ತರಿರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಸರಕಾರಿ ಸೀಟಿನೊಂದಿಗೆ ಉಚಿತ ವಸತಿ, ಊಟ, ಸಮವಸ್ತ್ರದೊಂದಿಗೆ ಕಲಿಯುವ ಅವಕಾಶವಿದೆ. ಕೂಡಲೇ ಎಸ್‌ಎಸ್‌ಎಲ್‌ಸಿ ಪಾಸ್‌ (SSLC) ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರೊಂದಿಗೆ ಸಮಾಜ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ (Mangaluru News) ಮೆನ್ನಬೆಟ್ಟು ಕಮ್ಮಾಜೆಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿಗೆ ಪ್ರಥಮ ಪಿಯುಸಿ (Free College Admission) ಪ್ರವೇಶ ಪಡೆಯಬಹುದಾಗಿದೆ.


ಯಾರು ಅರ್ಜಿ ಸಲ್ಲಿಸಬಹುದು?
ಪ್ರಥಮ ಪಿಯುಸಿಯ ಪಿಸಿಎಂಬಿ ಹಾಗೂ ಪಿಸಿಎಂಸಿ ಸಂಯೋಜನೆಗಳಿಗೆ ತಲಾ 40 ವಿದ್ಯಾರ್ಥಿಗಳನ್ನು ಎಸ್‍ಎಸ್‍ಎಲ್‍ಸಿ ಅಂಕ ಮತ್ತು ಸರ್ಕಾರದ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. 2022-23ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಏನೆಲ್ಲ ಸವಲತ್ತು?
ಆಯ್ಕೆಯಾದ ಈ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ, ಇನ್ನಿತರ ಸಾಮಗ್ರಿಗಳು ಮತ್ತು ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.


ಇದನ್ನೂ ಓದಿ: Mangaluru News: ಮಂಗಳೂರಿನಲ್ಲಿ ರಕ್ತದ ಅಭಾವ, ದಾನಿಗಳೇ ಮುಂದೆ ಬನ್ನಿ!


ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಯು ತನ್ನ ಎಸ್‍ಎಟಿಎಸ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಂಬಂಧಿತ ಇತರೆ ದಾಖಲೆಗಳೊಂದಿಗೆ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆ ಕೊನೆ ದಿನಾಂಕ
ಅರ್ಜಿ ಸಲ್ಲಿಸಲು ಇದೇ ಮೇ 15ರಂದು ಕೊನೆಯ ದಿನವಾಗಿರುತ್ತದೆ. ಅದಕ್ಕೂ ಮುಂಚಿತವಾಗಿ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!

top videos


  ಹೆಚ್ಚಿನ ಮಾಹಿತಿಗಾಗಿ
  ಹೆಚ್ಚಿನ ಮಾಹಿತಿಗೆ ಹತ್ತಿರದ ಯಾವುದೇ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲರನ್ನು ಅಥವಾ ದೂರವಾಣಿ ಸಂಖ್ಯೆ 8431739087 ಅನ್ನು ಸಂಪರ್ಕಿಸುವಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

  First published: