• ಹೋಂ
  • »
  • ನ್ಯೂಸ್
  • »
  • state
  • »
  • Mangaluru News: ಇಲ್ಲಿ ಫ್ರೀ ಆಗಿ ಸಿಗುತ್ತೆ ಇಂಗ್ಲೀಷ್ ಮೀಡಿಯಂ ಶಿಕ್ಷಣ, ಹೀಗೆ ಅರ್ಜಿ ಸಲ್ಲಿಸಿ

Mangaluru News: ಇಲ್ಲಿ ಫ್ರೀ ಆಗಿ ಸಿಗುತ್ತೆ ಇಂಗ್ಲೀಷ್ ಮೀಡಿಯಂ ಶಿಕ್ಷಣ, ಹೀಗೆ ಅರ್ಜಿ ಸಲ್ಲಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅರ್ಹ ಅಭ್ಯರ್ಥಿಗಳು ಕೂಡಲೇ ಈ ಸಾಲಿನ ಶೈಕ್ಷಣಿಕ ಸಾಲಿಗೆ ಅರ್ಹತೆ ಪಡೆದುಕೊಳ್ಳಬಹುದಾಗಿದೆ.

  • News18 Kannada
  • 2-MIN READ
  • Last Updated :
  • Mangalore, India
  • Share this:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಾಚರಿಸುತ್ತಿರುವ ಪುತ್ತೂರಿನ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ (English Mediaum School)  2023-24 ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಶಾಲೆಯ ಹೆಸರುಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ
ಊರುಪುತ್ತೂರು
ತರಗತಿ6ನೇ ತರಗತಿ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕಮೇ 15
ಹೆಚ್ಚಿನ ಮಾಹಿತಿಗಾಗಿ8660948731 ಅಥವಾ 9902293646

ಅಲ್ಪಸಂಖ್ಯಾತ ಹಾಗೂ ಇತರೆ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದವರಿಗೆ ಈ ಶಾಲೆಯಲ್ಲಿ ಪ್ರವೇಶ ಉಚಿತವಾಗಿರುತ್ತವೆ. ಅರ್ಹ ಅಭ್ಯರ್ಥಿಗಳು ಕೂಡಲೇ ಈ ಸಾಲಿನ ಶೈಕ್ಷಣಿಕ ಸಾಲಿಗೆ ಅರ್ಹತೆ ಪಡೆದುಕೊಳ್ಳಬಹುದಾಗಿದೆ.


ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪುತ್ತೂರಿನ ಈ ಶಾಲೆಗೆ ಶೇಕಡಾ 75 ರಷ್ಟು ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದವರಿಗೆ 25% ರಷ್ಟು ಅವಕಾಶವಿರುತ್ತದೆ. ಅಲ್ಪಸಂಖ್ಯಾತರಲ್ಲಿ ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ ಹಾಗೂ ಸಿಖ್ ಮತ್ತು ಇತರೆ ಸಮುದಾಯದ ಪ್ರವರ್ಗ 1, 2ಎ, 3ಎ, 3ಬಿ ಮತ್ತು ಎಸ್ಸಿ, ಎಸ್ಟಿ ಸೀಟುಗಳು ಲಭ್ಯವಿರುತ್ತದೆ. ತಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಮೀಸಲಾತಿ ಅನ್ವಯ ಸೀಟು ಹಂಚಿಕೆ ಆಗಲಿದೆ.


ಇದನ್ನೂ ಓದಿ: Mangaluru Positive News: ಮಂಗಳೂರು ಮಕ್ಕಳ ಸಾಮರಸ್ಯದ ಪ್ರವಾಸ! ಮಸೀದಿ, ಚರ್ಚ್, ದೇವಸ್ಥಾನ ದರ್ಶನ




ಅರ್ಜಿ ಸಲ್ಲಿಕೆ ಕೊನೆ ದಿನಾಂಕ
ಮೇ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಅದಕ್ಕೆ ಮುಂಚಿತವಾಗಿ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪ್ರವೇಶವು ಸಂಪೂರ್ಣ ಉಚಿತವಾಗಿರುತ್ತದೆ.


ಇದನ್ನೂ ಓದಿ: Muslim Couple: ಮುಸ್ಲಿಂ ದಂಪತಿಗಳಿಗೆ ಇಲ್ಲಿದೆ ಸಿಹಿಸುದ್ದಿ!


ಹೆಚ್ಚಿನ ಮಾಹಿತಿಗಾಗಿ
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8660948731 ಅಥವಾ 9902293646 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

First published: