ಮಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಮೀನುಗಳ ಸಂತಾನೋತ್ಪತ್ತಿಗೆ ಪೂರಕವಾಗಿ ಸರಕಾರದ ನಿಯಮದಂತೆ ಮೀನುಗಾರಿಕೆ ಸ್ಥಗಿತಗೊಳ್ಳುವುದು ಸಹಜ. ಜೂನ್ 1 ರಿಂದ (Karnataka Rains) ಎರಡು ತಿಂಗಳ ಕಾಲ ಮೀನುಗಾರಿಕೆ (Mangaluru Fishing) ಸ್ಥಗಿತವಾಗುತ್ತವೆ. ಆದರೆ, ಈ ಬಾರಿ ಮಳೆಗಾಲ (Kaಆರಂಭಕ್ಕೂ ಮುನ್ನವೇ ಮೀನುಗಾರರು ದಡ ಸೇರಿದ್ದಾರೆ. ತಮ್ಮ ಮೀನುಗಾರಿಕಾ ಬೋಟ್ಗಳನ್ನು (Fishing Boats) ಲಂಗರು ಹಾಕಲು ಆರಂಭಿಸಿದ್ದಾರೆ. ಕಾರಣ, ಅರಬ್ಬೀ ಸಮುದ್ರದಲ್ಲಿ ಮೀನುಗಳ ಬೇಟೆ ಕುಸಿತವಾಗಿರುವುದೇ ಮೀನುಗಾರಿಕಾ ಬೋಟ್ಗಳ ಅವಧಿಗೂ ಮುನ್ನವೇ ಲಂಗರು ಹಾಕುವಂತಾಗಿದೆ.
ಬಂದರು ಸೇರಿದ ಬೋಟ್ಗಳು
ಮೀನುಗಾರಿಕಾ ಹಿನ್ನೆಲೆ ಸುಮಾರು ದಿನಗಳ ಕಾಲ ಸಮುದ್ರದಲ್ಲಿರುವ ಬೋಟ್ ಗಳು ಭಾರೀ ಪ್ರಮಾಣದಲ್ಲಿ ಮತ್ಸ್ಯಕ್ಷಾಮ ಎದುರಿಸುತ್ತಿದೆ. ಈ ಬಾರಿಯ ಮೀನುಗಾರಿಕಾ ಋತುವಿನ ಆರಂಭದಲ್ಲಿ ಮೀನು ಸುಗ್ಗಿ ಚೆನ್ನಾಗಿಯೇ ಇತ್ತು. ಆದರೆ ಜನವರಿ ತಿಂಗಳಿನಿಂದ ಮೀನುಗಳ ಕೊರತೆ ಆರಂಭವಾಗಿದ್ದರಿಂದ ಜೂನ್ ತಿಂಗಳಿಗೂ ಮುನ್ನವೇ ಶೇಕಡಾ 60 ರಷ್ಟು ಬೋಟ್ ಗಳು ಬಂದರಿನಲ್ಲಿ ಲಂಗರು ಹಾಕಿವೆ.
ಇದನ್ನೂ ಓದಿ: Mangaluru News: ಕ್ಯೂಆರ್ ಕೋಡ್ ಬಳಸಿ ಪೋಸ್ಟ್ ಮ್ಯಾನ್ ಮೂಲಕ ನಗದು ಪಡೆಯಿರಿ!
ನಷ್ಟದ ಭೀತಿ
ಈ ಬಾರಿ ಋತುವಿನ ಕೊನೆಯ ಗಳಿಗೆಯಲ್ಲಿ ಮೀನಿನ ಕ್ಷಾಮ, ದರ ಕುಸಿತ ಇದೆಲ್ಲದರಿಂದ ಕಂಗಾಲಾದ ಬೋಟ್ ಮಾಲಿಕರು ಬೋಟ್ ಗಳನ್ನು ಅವಧಿಗೂ ಮುನ್ನವೇ ಲಂಗರು ಹಾಕಿಸುತ್ತಿದ್ದಾರೆ. ಬೇಗನೇ ಲಂಗರು ಹಾಕಿದರೆ ಸುರಕ್ಷಿತವಾಗಿ ನಿಲ್ಲಿಸಬಹುದು ಅನ್ನೋ ಲೆಕ್ಕಚಾರವೂ ಇದೆ.
ನೂತನ ಸರಕಾರಕ್ಕೆ ಮೀನುಗಾರರ ಮನವಿ
ಮುಂದಿನ ಋತುವಿಗೆ ರಾಜ್ಯದಲ್ಲಿ ಹೊಸ ಸರ್ಕಾರವಿರಲಿದ್ದು, ಮೀನುಗಾರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಂಗಳೂರು ಬಂದರಿನಲ್ಲಿ ಹೊಸ ಜೆಟ್ಟಿಯನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ
ಪ್ರಸ್ತುತ ಒಂದು ಬೋಟಿಗೆ 9000 ಲೀಟರ್ ಡೀಸೆಲ್ ಸಬ್ಸಿಡಿ ದೊರೆಯುತ್ತಿದ್ದು, ಆದರೆ ಮೂರು ಬಾರಿ ಟ್ರಿಪ್ ಮಾಡಲು 18,000 ಲೀಟರ್ ಡೀಸೆಲ್ ಬೇಕಾಗುತ್ತದೆ. ಆದ್ದರಿಂದ ನೂತನ ರಾಜ್ಯ ಸರಕಾರ ಪೂರ್ಣ ಪ್ರಮಾಣದ ಡಿಸೇಲ್ ಸಬ್ಸಿಡಿ ನೀಡುವಂತೆ ಬೋಟ್ ಮಾಲಿಕರು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ