ಮಂಗಳೂರು (ಡಿ. 2): ಮಂಗಳೂರಿನ ಉಳ್ಳಾಲದ ಬಳಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು 2 ದಿನಗಳ ಹಿಂದೆ ಸಮುದ್ರದಲ್ಲಿ ಮುಳುಗಿತ್ತು. ಈ ಘಟನೆಯಲ್ಲಿ 16 ಜನರನ್ನು ರಕ್ಷಿಸಲಾಗಿದ್ದು, ಇಂದು ಒಬ್ಬರ ಮೃತದೇಹ ಪತ್ತೆಯಾಗಿದೆ. ನಿನ್ನೆ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ದೋಣಿ ದುರಂತದಲ್ಲಿ ಸದ್ಯಕ್ಕೆ ಮೂವರು ಸಾವನ್ನಪ್ಪಿದಂತಾಗಿದೆ. ನಾಪತ್ತೆಯಾಗಿರುವ ಇನ್ನೂ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆ ಕೂಡ ನಾಪತ್ತೆಯಾದವರಿಗೆ ಹುಡುಕಾಟ ನಡೆಸಲಾಗಿತ್ತು. ಆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ನಿನ್ನೆ ಪಾಂಡುರಂಗ ಸುವರ್ಣ ಮತ್ತು ಚಿಂತನ್ ಎಂಬುವವರ ಮೃತದೇಹಗಳು ಪತ್ತೆಯಾಗಿತ್ತು. ದೋಣಿ ಮುಳುಗಿರುವ ವಿಷಯ ಗೊತ್ತಾದ ಕೂಡಲೆ ಇತರ ಪರ್ಸೀನ್ ಮೀನುಗಾರರು, ಕರಾವಳಿ ಕಾವಲು ಪಡೆ, ತಣ್ಣೀರುಬಾವಿ ಜೀವರಕ್ಷಕ ಪಡೆಯವರು ನಾಪತ್ತೆಯಾದವರ ರಕ್ಷಣಾ ಕಾರ್ಯ ನಡೆಸಿದರು.
ನಿನ್ನೆ ಬೆಳಗ್ಗೆ ಶಶಿ ಮೆಂಡನ್ ಮಾಲೀಕತ್ವದ ಚಾಮುಂಡೇಶ್ವರಿ ದೋಣಿ ಬಂದು ಡಿಂಗಿಯಲ್ಲಿದ್ದವರನ್ನು ರಕ್ಷಣೆ ಮಾಡಿದೆ. ಮಧ್ಯಾಹ್ನದ ವೇಳೆಗೆ ಇಬ್ಬರ ಶವಗಳನ್ನು ತಣ್ಣೀರು ಬಾವಿ ಜೀವರಕ್ಷಕ ಪಡೆಯವರು ಹೊರಗೆ ತೆಗೆದಿದ್ದಾರೆ. ಇಂದು ಇನ್ನೋರ್ವ ಮೀನುಗಾರನ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗೆ ಹುಡುಕಾಟ ನಡೆಸಲಾಗುತ್ತಿದೆ.
Karnataka: Body of a fisherman found today, search continues for remaining three missing fishermen.
So far, 16 fishermen have been rescued following a boat capsize off Mangaluru coast. https://t.co/hwQBTZdrzL
— ANI (@ANI) December 2, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ