ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಳೂರು ನಗರ ದಕ್ಷಿಣ ಹಾಗೂ ಮಂಗಳೂರು ಉತ್ತರ (ಸುರತ್ಕಲ್) ವ್ಯಾಪ್ತಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಈಗಾಗಲೇ ರೇಷನಿಂಗ್ (Mangaluru Water Rationing) ಪದ್ದತಿ ಅಳವಡಿಸಿಕೊಳ್ಳಲಾಗಿದೆ. ಒಂದು ದಿನ ಮಂಗಳೂರು ನಗರ (Mangaluru News) ಹಾಗೂ ಇನ್ನೊಂದು ದಿನ ಸುರತ್ಕಲ್ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಈ ನಡುವೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಮೂಲ ತುಂಬೆ ಡ್ಯಾಂನಲ್ಲಿ ಮತ್ತಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ಬುಧವಾರಕ್ಕೆ ಡ್ಯಾಂ ನಲ್ಲಿ ನೀರಿನ ಪ್ರಮಾಣ 3.83 ಮೀಟರ್ ಗೆ ತಲುಪಿದೆ.
ಅದಕ್ಕೂ ಮುನ್ನ ಸೋಮವಾರದಂದು ನೀರಿನ ಪ್ರಮಾನ 4.03 ಮೀಟರ್ ಗೆ ತಲುಪಿತ್ತು. ಎರಡು ದಿನಗಳ ಮಳೆಯಿಂದ ಕೊಂಚ ನೀರಿನ ಹರಿವು ಶುರುವಾಗಿದ್ರೂ ಅದ್ಯಾವುದೂ ತುಂಬೆ ಡ್ಯಾಂನ ನೀರಿನ ಪ್ರಮಾನದಲ್ಲಿ ಭಾರೀ ಏರಿಕೆಗೆ ಕಾರಣವಾಗಿಲ್ಲ ಅನ್ನೋದು ಗಮನಾರ್ಹ.
ಎರಡು ವಾರಕ್ಕಷ್ಟೇ ನೀರು!
ಸಣ್ಣ ಪ್ರಮಾಣದಲ್ಲಿ ನೀರಿನ ಹರಿವು ಕಂಡು ಬಂದಿದ್ದರಿಂದ ನೇತ್ರಾವತಿಯಲ್ಲಿ ಒಳಹರಿವು ಕಂಡು ಬಂದಿದೆ. ಅದನ್ನು ಪ್ರತಿದಿನ 13 ಪಂಪ್ ಸೆಟ್ ಗಳ ಸಹಾಯದಿಂದ ತುಂಬೆ ಡ್ಯಾಂ ಗೆ ಹಾಯಿಸುವ ಕೆಲಸ ಮಾಡಲಾಗುತ್ತಿದೆ.
ಇದನ್ನೂ ಓದಿ: Mangaluru News: ವಿದ್ಯಾರ್ಥಿನಿಯರಿಗೆ ಉತ್ತಮ ಅವಕಾಶ, ತಕ್ಷಣ ಗಮನಿಸಿ
ಸದ್ಯದ ರೇಷನಿಂಗ್ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ ಮುಂದಿನ 10 ರಿಂದ 15 ದಿನಗಳಿಗೆ ನೀರು ಪೂರೈಕೆ ಸಾಧ್ಯವಾಗಬಹುದು ಎಂದು ʼದಾಯ್ಜಿವರ್ಲ್ಡ್ʼ ಸಂಸ್ಥೆಯು ವರದಿ ಮಾಡಿದೆ.
ಮಳೆಯೇ ಭರವಸೆ
ನೀರಿನ ಒಳಹರಿವು ಸಣ್ಣ ಮಟ್ಟಿಗೆ ಕಂಡು ಬಂದಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Patrode Recipe: ಮನೆಯಲ್ಲೇ ಮಾಡಿ ರುಚಿಯಾದ ಪತ್ರೊಡೆ, ಇಲ್ಲಿದೆ ಸಿಂಪಲ್ ರೆಸಿಪಿ
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಸಾಯಂಕಾಲದ ವೇಳೆಗೆ ಮಳೆಯಾಗುತ್ತಿರುವುದು ಕೂಡಾ ಸಮಾಧಾನದ ಸಂಗತಿಯಾಗಿದೆ. ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನೀರು ಪೂರೈಕೆ ಸರಾಗವಾಗಿ ನಡೆಯಲು ಮಳೆಯೇ ಭರವಸೆ ಎನ್ನುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ