Sabarimala ಪಾದಯಾತ್ರೆಯಲ್ಲಿ ಜೊತೆಯಾದ ಶ್ವಾನವನ್ನು ಮನೆಗೆ ಕರೆತಂದ ಗುರುಸ್ವಾಮಿ!
ಕೇರಳದ ಎಟ್ಟಮಾನೂರ್ ತಲುಪಿದ ಸಂಧರ್ಭದಲ್ಲಿ ತಂಡವನ್ನು ಹೆಣ್ಣು ಶ್ವಾನ ಹಿಂಬಾಲಿಸಿಕೊಂಡು ಬರೋದನ್ನು ಕಂಡಿದ್ದಾರೆ. ಬಳಿಕ ಶ್ವಾನಕ್ಕೆ ತಿಂಡಿ ಹಾಕಿದ್ದಾರೆ.. ಬಳಿಕವೂ ಬೆಂಬಿಡಿದ ಶ್ವಾನ ನಿರಂತರವಾಗಿ ಹಲವು ದಿನಗಳ ಕಾಲ ತಂಡದ ಜೊತೆ ಹೆಜ್ಜೆ ಹಾಕಿದೆ.
Sabarimala Padayatra: ಋಣಾನುಬಂಧ ಎಲ್ಲಿ ಹೇಗೆ ಇರುತ್ತದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಆಕಸ್ಮಿಕವಾಗಿ ಸಿಕ್ಕ ವಸ್ತು ಜೀವನವನ್ನು ಬದಲಿಸಬಲ್ಲದು. ಆಕಸ್ಮಿಕವಾಗಿ ಸಿಕ್ಕ ಗೆಳೆಯ ಜೀವನದ ಭಾಗವಾಗಬಹುದು. ಆಕಸ್ಮಿಕವಾಗಿ ಸಿಕ್ಕ ಪ್ರಾಣಿ (Animal) ಪ್ರೀತಿ (Love)ಯನ್ನು ಧಾರಾಳವಾಗಿ ನೀಡುವ ಜೀವವಾಗಬಹುದು. ಹೀಗೆ ಕೇರಳ(Kerala)ದಲ್ಲಿ ಸಿಕ್ಕ ಶ್ವಾನ ಈಗ ವ್ಯಕ್ತಿಯೊಬ್ಬರ ಜೀವನದ ಪ್ರೀತಿಯ ಭಾಗವಾಗಿದೆ. ಶಬರಿಮಲೆ ಪಾದಾಯತ್ರೆಯಲ್ಲಿ ಜೊತೆಯಾದ ಕೇರಳದ ಶ್ವಾನ ಬಂಟ್ವಾಳದ (Bantwala) ವ್ಯಕ್ತಿಯೋರ್ವರ ಜೀವನದ ಭಾಗವೇ ಆಗಿದೆ. ದಕ್ಷಿಣ ಭಾರತದ (South India) ಪುಣ್ಯ ಕ್ಷೇತ್ರ ಶಬರಿಮಲೆ ಯಲ್ಲಿ ಮಕರಜ್ಯೋತಿ ಉತ್ಸವ ಆರಂಭವಾಗಿದೆ. ಪ್ರತಿ ನಿತ್ಯ ದೇಶದ ನಾನಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು (Devotees) ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.. ಕೊರೊನಾ ಆತಂಕ ನಿಯಮದ ನಡುವೆಯೂ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವ ಸಲುವಾಗಿ 41ದಿನಗಳಕಾಲ ಕಠಿಣ ವೃತವನ್ನು ಮಾಡಿ ಶಬರಿಮಲೆಯತ್ತ ಸಾಗುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಪ್ರತಿನಿತ್ಯ ಸಾವಿರಾರು ವೃತಧಾರಿಗಳು ಶಬರಿಮಲೆಗೆ ತೆರಳುತ್ತಿದ್ದಾರೆ. ಬಂಟ್ವಾಳದಿಂದ ಶಬರಿಮಲೆ ಗೆ ಪಾದಯಾತ್ರೆ ನಡೆಸಿದ ಮಾಲಾಧಾರಿಗಳಿಗೆ ಶ್ವಾನವೊಂದು ಜೊತೆಯಾದ ಸ್ವಾರಸ್ಯಕರ ಘಟನೆ ನಡೆದಿದೆ.
ಮಾಲಾಧಾರಿಗಳನ್ನು ಹಿಂಬಾಲಿಸಿದ ಶ್ವಾನ
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಡಕೊಟ್ಟಿನಿಂದ ಡಿ.11 ರಂದು ಚೇತನ್ ಗುರುಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ವೃತಧಾರಿಗಳ ತಂಡ ಶಬರಿಮಲೆ ಗೆ ಪಾದಯಾತ್ರೆ ಆರಂಭಿಸಿತ್ತು. ಈ ತಂಡ ಕೇರಳದ ಎಟ್ಟಮಾನೂರ್ ತಲುಪಿದ ಸಂಧರ್ಭದಲ್ಲಿ ತಂಡವನ್ನು ಹೆಣ್ಣು ಶ್ವಾನ ಹಿಂಬಾಲಿಸಿಕೊಂಡು ಬರೋದನ್ನು ಕಂಡಿದ್ದಾರೆ. ಬಳಿಕ ಶ್ವಾನಕ್ಕೆ ತಿಂಡಿ ಹಾಕಿದ್ದಾರೆ.. ಬಳಿಕವೂ ಬೆಂಬಿಡಿದ ಶ್ವಾನ ನಿರಂತರವಾಗಿ ಹಲವು ದಿನಗಳ ಕಾಲ ತಂಡದ ಜೊತೆ ಹೆಜ್ಜೆ ಹಾಕಿದೆ.
ಪಾದಯಾತ್ರೆ ವೇಳೆ ಈ ತಂಡದ ಜೊತೆಗ ಹೆಜ್ಜೆ ಹಾಕುವ ಶ್ವಾನ, ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವ ಸಂಧರ್ಭ ಅದೂ ವಿಶ್ರಾಂತಿ ಪಡೆಯುತ್ತದೆ. ಮುಂಜಾನೆ ಬೇಗ ಈ ತಂಡದ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುವ ಶ್ವಾನ ತಂಡದಿಂದ ಸುಮಾರು ಮುಂದೆ ಹೋಗಿ ತಂಡದ ದಾರಿ ಕಾಯುತ್ತದೆ.
ಮಣ್ಣಕಟ್ಟಿ ಬದ್ರಿ ದೇವಸ್ಥಾನದ ಬಳಿ ತಮಿಳುನಾಡಿನ ತಂಡ ಸೇರಿದ ಶ್ವಾನ
ತಂಡ ಹತ್ತಿರ ಬಂದಾಗ ಮತ್ತೆ ಮುಂದೆ ಹೋಗಿ ದಾರಿ ಕಾಯುತ್ತದೆ. ಹೀಗೆ ದಿನವೂ ಸಾಗುತ್ತಿದ್ದಾಗ ಮಣ್ಣಕಟ್ಟಿ ಬದ್ರಿ ದೇವಸ್ಥಾನದ ಬಳಿ ಶ್ವಾನ ತಪ್ಪಿ ತಮಿಳುನಾಡಿನ ತಂಡದ ಜೊತೆಗೆ ಸೇರಿದೆ. ಹಲವು ದಿನಗಳು ಶ್ವಾನ ಕಾಣದಿದ್ದಾಗ ಬಂಟ್ವಾಳ ದ ತಂಡದ ವೃತಧಾರಿಗಳು ಶ್ವಾನ ತಪ್ಪಿಸಿ ಹೋಗಿರಬಹುದು ಎಂದು ಭಾವಿಸಿ ಪಾದಯಾತ್ರೆ ಮುಂದುವರಿಸಿದ್ದಾರೆ. ಆದರೆ ತಂಡದಿಂದ ತಪ್ಪಿಸಿಕೊಂಡ ಶ್ವಾನಕ್ಕೆ ಇದು ಬೇರೆ ತಂಡ ಅಂತಾ ಅರಿವಾಗಿ ಈ ತಂಡವನ್ನು ಹುಡುಕಿಕೊಂಡು ಬಂದಿದೆ. .ಕೆಲವು ದಿನಗಳ ಬಳಿಕ ಶ್ವಾನ ಈ ತಂಡದ ಜೊತೆ ಸೇರಿ ಪಾದಯಾತ್ರೆ ಮುಂದುವರಿಸಿದೆ.
ಜನವರಿ ಮೂರನೇ ತಾರೀಖು ಅಯ್ಯಪ್ಪ ವೃತಧಾರಿಗಳು ಪಂಪಾವನ್ನು ತಲುಪಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಿದ್ದಾರೆ. ಚೇತನ್ ಗುರುಸ್ವಾಮಿ ಶ್ವಾನಕ್ಕೆ ಮಲ್ಲಿ ಅಂತಾ ಅಂತಾ ಹೆಸರಿಟ್ಟಿದ್ದಾರೆ.
ಚೇತನ್ ಗುರುಸ್ವಾಮಿಗಳ ಮನೆಯ ಪ್ರೀತಿಯ ಶ್ವಾನ
ಮಲ್ಲಿ ಎಂದರೆ ಶಬರಿಮಲೆ ಗೆ ಬರುವ ಮಹಿಳಾ ವೃತ್ತಧಾರಿಗಳನ್ನು ಮಾಳಿಗೆಪುರತ್ತಮ್ಮ ಅಂತಾ ಕರೆಯುತ್ತಾರೆ. ಹೀಗಾಗಿ ಶಬರಿಮಲೆ ಪಾದಯಾತ್ರೆ ಗೆ ಜೊತೆಯಾದ ಶ್ವಾನಕ್ಕೆ ಮಲ್ಲಿ ಅಂತಾ ಹೆಸರನ್ನು ಇಡಲಾಗಿದೆ.
ಇದೀಗ ಈ ಶ್ವಾನವನ್ನು ಚೇತನ್ ಗುರುಸ್ವಾಮಿ ಊರಿಗೆ ಕರೆ ತಂದಿದ್ದಾರೆ. ಮಲ್ಲಿ ಈಗ ಚೇತನ್ ಗುರುಸ್ವಾಮಿಗಳ ಮನೆಯ ಪ್ರೀತಿಯ ಶ್ವಾನವಾಗಿದೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ