D Veerendra Heggade: ಚಲನಚಿತ್ರಗಳಲ್ಲಿ ಪೊಲೀಸರನ್ನು ಕಾಮಿಡಿ ವಸ್ತುವಾಗಿ ತೋರಿಸಬೇಡಿ: ವೀರೇಂದ್ರ ಹೆಗ್ಗಡೆ ಮನವಿ

ದೇವಾಲಯ ನಿರ್ಮಾಣ ಮಾಡುವ ಸಂದರ್ಭ ಅಧಿಕೃತವಾಗಿ, ಕಾನೂನು ಪ್ರಕಾರ, ಸರಿಯಾದ ಆಜ್ಞೆಗಳನ್ನು ಪಡೆದು ನಿರ್ಮಾಣ ಮಾಡುವುದು ಒಳಿತು. ಹಾಗೆ ಮಾಡದಿದ್ದಲ್ಲಿ ಅಪಾಯವಿದೆ‌. ಯಾಕೆಂದರೆ ಕಾನೂನಿನ ಅಸ್ತ್ರ ಎಲ್ಲರ ಮೇಲೆ ಹರಿಯುತ್ತದೆ. ಇಂತಹ ಕಾನೂನಗಳನ್ನು ಸರಕಾರ ಗಮನದಲ್ಲಿ ಇಟ್ಟುಕೊಂಡು ಅನಧಿಕೃತವಿದ್ದ ದೇವಾಲಯಗಳು ಅಧಿಕೃತ ಮಾಡಲಿ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಡಿ. ವೀರೇಂದ್ರ ಹೆಗಡೆ

ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಡಿ. ವೀರೇಂದ್ರ ಹೆಗಡೆ

  • Share this:
ಮಂಗಳೂರು: (Mangaluru)ಪೊಲೀಸ್ ಆಕಾಂಕ್ಷಿಗಳ ತರಬೇತಿಗೆ (Police Training) ಬಂದವರು ಇದನ್ನು ಆಯ್ಕೆ ಮಾಡಿ ಬಂದಿರೋದು. ಬೇರೆ ಆಯ್ಕೆ ಇಲ್ಲದೆ ಇಲ್ಲಿಗೆ ಬಂದವರಲ್ಲ. ಪೊಲೀಸ್ ಶ್ರೇಷ್ಠವಾದ ಹುದ್ದೆ (Police Job), ಶ್ರೇಷ್ಠವಾದ ಕಾರ್ಯಕ್ಷೇತ್ರವಿದು ಆದ್ದರಿಂದ ಯಾರೂ ಇದರಿಂದ ವಿಚಲಿತರಾಗದೆ ಈ ಹುದ್ದೆಗೆ ಬದ್ಧರಾಗಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ (Dr D Veerendra Heggade) ಅವರು ಕರೆ ನೀಡಿದರು.

ನಗರದ ಸೈಂಟ್ ಅಲೋಶಿಯಸ್ ಗೋನ್ಝಾಗ್ ಸ್ಕೂಲ್ ನ ಸಭಾಂಗಣದಲ್ಲಿ  ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದೆ ಎಲ್ಲರಿಗೂ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಕೆಲವು ಸಿನಿಮಾಗಳಲ್ಲಿ ಪೊಲೀಸರನ್ನು ಹಾಸ್ಯಗಾರರಂತೆ ಚಿತ್ರಿಸಲಾಗುವುದು ಅತ್ಯಂತ ದುಃಖದ ವಿಚಾರ‌. ಬುದ್ಧಿಹೀನರಂತೆ ಪೊಲೀಸರನ್ನು ತೋರಿಸಲಾಗುತ್ತದೆ. ಪೊಲೀಸ್ ಯೂನಿಫಾರ್ಮ್ ಗೆ ಸಾಕಷ್ಟು ಗೌರವವಿದೆ, ಮಹತ್ವವಿದೆ ಅಂತಹದ್ದನ್ನು ಹಾಸ್ಯಕ್ಕೆ ಬಳಸೋದು ಅಷ್ಟೊಂದು ಸರಿಯಲ್ಲ. ಇಂತಹ ಸಿನಿಮಾಗಳನ್ನು ನೋಡಿ ಜನರ ದೃಷ್ಟಿಕೋನ ಬದಲಾಗಿ ಜನತೆಯು ಪೊಲೀಸರನ್ನು ಕೀಳಾಗಿ ಕಾಣಲು ಆರಂಭಿಸಿದ್ದಲ್ಲಿ ನಷ್ಟ ಆಗೋದು ಸಮಾಜಕ್ಕೆ. ಆದ್ದರಿಂದ ಹಾಸ್ಯ ಸನ್ನಿವೇಶಕ್ಕೆ ಪೊಲೀಸ್ ಪಾತ್ರಗಳನ್ನು ತರುವುದು ಬೇಡ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳ ಸುಮಾರು 206 ಪೊಲೀಸ್ ಹುದ್ದೆಯ ಆಕಾಂಕ್ಷೆಗಳು ಒಂದು ತಿಂಗಳ ಕಾಲ ನಡೆ‍ದ ಉಚಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಪೊಲೀಸ್ ದೈಹಿಕ ನೇಮಕಾತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ತರಬೇತಿ ನೀಡಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ಹೆಗ್ಗಡೆ, ಶಶಿಕುಮಾರ್ ಕಾರ್ಯವೈಖರಿ ಬಹಳ ವಿಭಿನ್ನವಾಗಿದೆ‌‌. ಪೊಲೀಸರು ಕರ್ತವ್ಯ ನಿರ್ವಹಿಸಿದ ಪ್ರದೇಶದ ಮಣ್ಣಿನ ಮಗ ಆಗುತ್ತಾರೆ. ಶಶಿಕುಮಾರ್ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಗನಾಗಿದ್ದಾರೆ. ತುಳು ಭಾಷೆಯನ್ನು ಕಲಿತು ಇನ್ನೂ ಹತ್ತಿರವಾಗಿದ್ದಾರೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಾಣೆ, ಎಎನ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧೀಕ್ಷಕ ನಿಖಿಲ್, ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ದಕ್ಷಿಣ ಕನ್ನಡದಲ್ಲಿ ಅನಧಿಕೃತ ದೇವಾಲಯಗಳೇ ಇಲ್ಲ

ಮೈಸೂರು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ವೀರೇಂದ್ರ ಹೆಗಡೆ ಅವರು, ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವೊಂದನ್ನು ಕೆಡವಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ದೇವಾಲಯಗಳೇ ಇಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

ಇದನ್ನು ಓದಿ: Accident: ಬೆಂಗಳೂರಿನ ಹೆದ್ದಾರಿಯಲ್ಲಿ ಅಪಘಾತಗಳ ಸರಮಾಲೆ; ಭಯದಲ್ಲಿ ವಾಹನ ಸವಾರರು!

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಅಧಿಕೃತವಾಗಿ ದೇವಾಲಯ ನಿರ್ಮಾಣ ಮಾಡಿರುವಲ್ಲಿ ಯಾವುದೇ ತೊಂದರೆ ಇಲ್ಲ. ಹಾಗಾಗಿ ನಾನು ಎಲ್ಲರಲ್ಲಿ ಕೇಳುವುದಿಷ್ಟೇ ದೇವಾಲಯ ನಿರ್ಮಾಣ ಮಾಡುವ ಸಂದರ್ಭ ಅಧಿಕೃತವಾಗಿ, ಕಾನೂನು ಪ್ರಕಾರ, ಸರಿಯಾದ ಆಜ್ಞೆಗಳನ್ನು ಪಡೆದು ನಿರ್ಮಾಣ ಮಾಡುವುದು ಒಳಿತು. ಹಾಗೆ ಮಾಡದಿದ್ದಲ್ಲಿ ಅಪಾಯವಿದೆ‌. ಯಾಕೆಂದರೆ ಕಾನೂನಿನ ಅಸ್ತ್ರ ಎಲ್ಲರ ಮೇಲೆ ಹರಿಯುತ್ತದೆ. ಇಂತಹ ಕಾನೂನಗಳನ್ನು ಸರಕಾರ ಗಮನದಲ್ಲಿ ಇಟ್ಟುಕೊಂಡು ಅನಧಿಕೃತವಿದ್ದ ದೇವಾಲಯಗಳು ಅಧಿಕೃತ ಮಾಡಲಿ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದರು.
Published by:HR Ramesh
First published: