ಮಂಗಳೂರು: ದೇಶದಾದ್ಯಂತ ಲವ್ ಜಿಹಾದ್ (Love Jihad) ಎನ್ನುವ ವಿಚಾರದ ಕುರಿತಂತೆ ಭಾರೀ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬಾಲಕಿಯೋರ್ವಳು (Girl) ಲವ್ ಜಿಹಾದ್ ಗೆ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ (Vitla Police Station Limit) ಕಣಿಯೂರು ಎಂಬಲ್ಲಿ ಮೇ 4ರಂದು ಈ ಘಟನೆ ನಡೆದಿದೆ. ದಲಿತ (Dalit) ಸಮುದಾಯಕ್ಕೆ ಸೇರಿದ ಸಂಜೀವ ಮತ್ತು ಗೀತಾ ದಂಪತಿಗಳ 14 ವರ್ಷ ಪ್ರಾಯದ ಬಾಲಕಿ ಅನ್ಯಕೋಮಿನ ಯುವಕನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೇ 4ರಂದು ನಡೆದಿದ್ದ ಘಟನೆ
ಕೇರಳ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಹಿಂದೂಪರ ಸಂಘಟನೆಗಳ ಆರೋಪದ ನಡುವೆಯೇ ಲವ್ ಜಿಹಾದ್ ಗೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ವರದಿಯಾಗುತ್ತಿದೆ. ಇಂಥಹ ಘಟನೆಗಳ ಸಾಲಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಎಂಬಲ್ಲಿ ಮೇ 4 ರಂದು ನಡೆದ ಘಟನೆಯೂ ಸೇರಿಕೊಂಡಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ
ಕಣಿಯೂರು ಮಸೀದಿಯ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ದಲಿತ ಸಮುದಾಯದ ಸಂಜೀವ ಮತ್ತು ಗೀತಾ ದಂಪತಿಗಳ 14 ವರ್ಷದ ಪುತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 14 ವರ್ಷ ಪ್ರಾಯದ 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆತ್ಮಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿಗೆ ಅನ್ಯಕೋಮಿನ ಯುವಕ ಕಾರಣ ಎಂದು ಬಾಲಕಿ ಪೋಷಕರು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Crime News: ಓವರ್ ಹೆಡ್ ಟ್ಯಾಂಕ್ನಲ್ಲಿ ಮಹಿಳೆಯ ಮೃತದೇಹ, ತುಂಡಾದ ಕಾಲು! ಬೆಚ್ಚಿಬೀಳಿಸೋ ಮರ್ಡರ್ ಸ್ಟೋರಿ ರಿವೀಲ್
ಬಾಲಕಿ ಪರಿಚಯ ಮಾಡಿಕೊಂಡಿದ್ದ ಮುಸ್ಲಿಂ ಯುವಕ
ಮೂಲತ ಸುಳ್ಯ ತಾಲೂಕಿನ ಪಂಜ ನಿವಾಸಿಗಳಾಗಿರುವ ಸಂಜೀವ ಮತ್ತು ಗೀತಾ ದಂಪತಿಗಳು ಕಳೆದ 15 ವರ್ಷಗಳಿಂದ ಕನ್ಯಾನ ಸಮೀಪದ ಕಣಿಯೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಕಳೆದ 2 ವರ್ಷದ ಹಿಂದೆ ಕಣಿಯೂರು ಮಸೀದಿ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಈ ನಡುವೆ ಕಣಿಯೂರು ನಿವಾಸಿಯಾಗಿರುವ ಶಾಹುಲ್ ಹಮೀದ್ ಬಾಲಕಿಯ ತಂದೆ ಸಂಜೀವರ ಜೊತೆ ಕೂಲಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯ ಕಡೆ ಬರುತ್ತಿದ್ದ. ಹೀಗೆ ಬಂದವನು 9 ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿ ಆತ್ಮಿಕಾಳ ಜೊತೆ ಪರಿಚಯ ಮಾಡಿಕೊಂಡಿದ್ದಾನೆ.
ಯುವಕನಿಗೆ ಬಾಲಕಿ ಪೋಷಕರಿಂದ ಎಚ್ಚರಿಕೆ
30 ವರ್ಷ ಪ್ರಾಯದ ಶಾಹುಲ್ ಹಮೀದ್ ಬಾಲಕಿಯನ್ನು ಕಾಮುಕ ದೃಷ್ಟಿಯಿಂದಲೇ ನೋಡಿದ್ದು, ಕೂಲಿ ಕೆಲಸ ಮಾಡುವ ಆತ್ಮಿಕಾಳ ಪೋಷಕರು ಕೆಲಸಕ್ಕಾಗಿ ಮನೆ ಬಿಟ್ಟು ಹೋದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಆತ್ಮಿಕಾಳನ್ನು ಕಾಣಲು ಬರುತ್ತಿದ್ದ ಎನ್ನುವ ಮಾಹಿತಿ ಪೋಷಕರಿಗೆ ತಿಳಿದ ಬಳಿಕ ಸಾಹುಲ್ ಹಮೀದ್ ಗೆ ಪೋಷಕರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ತಂಗಿ ಪ್ರಾಯದ ಬಾಲಕಿಗೆ ಈ ರೀತಿ ತೊಂದರೆ ಕೊಡುವುದು ಸರಿಯಲ್ಲ ಎನ್ನುವ ಬುದ್ಧಿ ಮಾತನ್ನೂ ಹೇಳಿ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.
![]()
ಆರೋಪಿ ಶಾಹುಲ್ ಹಮೀದ್
ಬಾಲಕಿಗೂ ಬುದ್ಧಿ ಹೇಳಿದ್ದ ಪೋಷಕರು
ಆದರೆ ಬಾಲಕಿಯ ಮುಗ್ದತೆಯನ್ನು ಮಿಸ್ ಯೂಸ್ ಮಾಡಿಕೊಂಡ ಶಾಹುಲ್ ಹಮೀದ್ ಆಕೆಯನ್ನು ಫೋನ್ ಮೂಲಕ ಸಂಪರ್ಕಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದ. ಈ ವಿಚಾರವೂ ಪೋಷಕರಿಗೆ ತಿಳಿದ ಬಳಿಕ ಆತ್ಮಿಕಾಳಿಗೆ ಫೋನ್ ನೀಡುವುದನ್ನೂ ಪೋಷಕರು ನಿಲ್ಲಿಸಿದ್ದರು.
ಬಾಲಕಿ ಮೇಲೆ ನಡೆದಿತ್ತಾ ವಾಮಾಚಾರ?
ಈ ನಡುವೆ 9 ನೇ ತರಗತಿಯ ಪರೀಕ್ಷೆ ಕಳೆದು ಮನೆಯಲ್ಲೇ ಇದ್ದ ಆತ್ಮಿಕಾಳನ್ನು ನೋಡಲು ಬರುತ್ತಿದ್ದ ಶಾಹುಲ್ ಹಮೀದ್ ಆಕೆಯನ್ನು ತನ್ನೊಂದಿಗೆ ಬರುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ. ಅಲ್ಲದೆ ಆಕೆಯ ತಲೆ ಕೂದಲನ್ನು ಕೊಂಡೊಯ್ದು, ಬಳಿಕ ಭಸ್ಮ ಮಾದರಿಯ ವಸ್ತುವನ್ನು ಆಕೆಗೆ ತಿನ್ನಲು ನೀಡಿದ್ದ ಎನ್ನುವ ವಿಚಾರವನ್ನು ಸ್ವತಃ ಆಸ್ಮಿಕಾಳೇ ತಾಯಿ ಬಳಿ ತಿಳಿಸಿದ್ದಳು.
ಹಿಂದೂ ಪರ ಸಂಘಟನೆಗಳಿಂದ ಆಕ್ರೋಶ
ಮುಗ್ದ ಬಾಲಕಿಗೆ ವಾಮಾಚಾರ ಮಾಡಿ ಆಕೆಯನ್ನು ಪ್ರೀತಿಸುವಂತೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಿಂದೂಪರ ಸಂಘಟನೆಗಳು ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದೆ.
ಯುವಕನ ವಿರುದ್ಧ ಗಂಭೀರ ಆರೋಪ
ಮತೀಯ ಸಂಘಟನೆಗಳು ಹಿಂದೂ ಹೆಣ್ಣು ಮಕ್ಕಳನ್ನು ನಿರಂತರವಾಗಿ ಲವ್ ಜಿಹಾದ್ ಜಾಲಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದೆ. ಆತ್ಮಿಕಾ ಎನ್ನುವ ಬಾಲಕಿಯೂ ಈ ಜಾಲದೊಳಗೆ ಸಿಲುಕಿ, ಹೊರ ಬರಲಾಗದೆ ಸಾವನ್ನಪ್ಪಿದ್ದಾಳೆ. ಆತ್ಮಿಕಾಳ ಸಾವಿನ ಬಗ್ಗೆಯೂ ಸಂಶಯವಿದ್ದು, ನೇಣು ಬಿಗಿದ ಸ್ಥಿತಿಯಲ್ಲಿದ್ದ ಆತ್ಮಿಕಾಳ ದೇಹ ನೆಲಕ್ಕೆ ತಾಗುವಂತೆ ಕಾಣುತ್ತಿದ್ದು, ಆರೋಪಿಯೇ ಆಕೆಯನ್ನು ಕೊಂದು ಪರಾರಿಯಾಗಿರುವ ಸಾಧ್ಯತೆಯೂ ಇದೆ ಎಂದು ಹಿಂದೂಪರ ಸಂಘಟನೆಗಳು ಹಾಗೂ ಬಾಲಕಿ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Pramod Mutalik: ಆಜಾನ್ ಮೈಕ್ ಇಳಿಸುವ ನಿಟ್ಟಿನಲ್ಲಿ BJP ಗಂಡಸ್ತನ ತೋರಿಸಲಿ; ಮುತಾಲಿಕ್ ಸವಾಲ್
ಈ ಹಿಂದೆಯೂ ಬಾಲಕಿ ಜೊತೆ ಪ್ರೀತಿಯ ನಾಟಕ
ಶಾಹುಲ್ ಹಮೀದ್ ಈ ಹಿಂದೆಯೂ ಬಾಲಕಿಯೋರ್ವಳನ್ನು ಪ್ರೀತಿಸುವಂತೆ ನಾಟಕವಾಡಿ ಮೋಸ ಮಾಡಿದ ಬಗ್ಗೆಯೂ ಸಾರ್ವಜನಿಕರು ಇದೀಗ ದೂರುತ್ತಿದ್ದು, ಈತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮುಖಂಡ
ಶರಣ್ ಪಂಪ್ವೆಲ್ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ