Dakshina Kannada Lockdown: ದಕ್ಷಿಣ ಕನ್ನಡ ಜಿಲ್ಲೆಯ 18 ಗ್ರಾಮಗಳು ಸೀಲ್​ಡೌನ್; ಜೂನ್ 21ರವರೆಗೆ ಮಂಗಳೂರು ಲಾಕ್!

Karnataka Lockdown Extension: ಮಂಗಳೂರು ತಾಲೂಕಿನ 2 ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕಿನ 8, ಸುಳ್ಯ ತಾಲೂಕಿನ 5, ಕಡಬ ತಾಲೂಕಿನ 2 ಮತ್ತು ಬಂಟ್ವಾಳದ ಒಂದು ಗ್ರಾಮ ಪಂಚಾಯತ್ ಇಂದಿನಿಂದ ಸೀಲ್​ಡೌನ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

  • Share this:
ಮಂಗಳೂರು (ಜೂ. 14): ರಾಜ್ಯದ ಹಲವು ಜಿಲ್ಲೆಗಳು ಇಂದಿನಿಂದ ಅನ್ ಲಾಕ್ ಆದರೆ, ದಕ್ಷಿಣ ಕನ್ನಡ ಜಿಲ್ಲೆಯ 18 ಗ್ರಾಮ ಪಂಚಾಯತ್ ಗಳು ಸೀಲ್ ಡೌನ್ ಆಗಿವೆ. 50ಕ್ಕಿಂತ ಹೆಚ್ಚು ಕೋರೊನಾ ಪ್ರಕರಣವಿರುವ ಗ್ರಾಮ ಪಂಚಾಯತ್ ಗಳನ್ನು ಗುರುತಿಸಿ ಜಿಲ್ಲಾಡಳಿತ ಈ ಆದೇಶ ನೀಡಿದೆ. ಮಂಗಳೂರು ತಾಲೂಕಿನ 2 ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕಿನ 8 ಗ್ರಾಮ ಪಂಚಾಯತ್ ಗಳು, ಸುಳ್ಯ ತಾಲೂಕಿನ 5 ಗ್ರಾಮ ಪಂಚಾಯತ್ ಗಳು, ಕಡಬ ತಾಲೂಕಿನ 2 ಗ್ರಾಮ ಪಂಚಾಯತ್ ಗಳು ಮತ್ತು ಬಂಟ್ವಾಳದ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿ ಇಂದಿನಿಂದ ಸೀಲ್​ಡೌನ್ ಆಗಿದೆ.

ಈ ಗ್ರಾಮದೊಳಗೆ ಪ್ರವೇಶ ಹಾಗೂ ನಿರ್ಗಮನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜೂನ್ 21ರ ಬೆಳಗ್ಗೆ 9 ಗಂಟೆಯವರೆಗೆ ಗ್ರಾಮಗಳು ಸಂಪೂರ್ಣ ಸೀಲ್ ಡೌನ್ ಆಗಲಿದೆ. ಆದರೆ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂ, ಕ್ಲಿನಿಕ್ ಸೇರಿದಂತೆ ಹಾಲಿನ ಬೂತ್, ಹಾಲು ಉತ್ಪಾದನಾ ಡೈರಿ, ಪೆಟ್ರೋಲ್ ಬಂಕ್, ಬ್ಯಾಂಕ್, ತುರ್ತು ವೈದ್ಯಕೀಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮಂಗಳೂರು ತಾಲೂಕಿನ ನೀರುಮಾರ್ಗ, ಕೋಣಾಜೆ ಗ್ರಾಮ ಪಂಚಾಯತ್ ಗಳು, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ, ಚಾರ್ಮಾಡಿ ಗ್ರಾಮ ಪಂಚಾಯತ್ ಗಳು, ಸುಳ್ಯ ತಾಲೂಕಿನ‌ ಐವರ್ನಾಡು, ಅಮರ ಮುಡ್ಕೂರು, ಕೊಲ್ಲ ಮೊಗರು, ಗುತ್ತಿಗಾರು, ಅರಂತೋಡು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು ಗ್ರಾಮ ಪಂಚಾಯತ್ ಗಳು ಸೀಲ್ ಡೌನ್ ಆಗಿವೆ.

ಇದನ್ನೂ ಓದಿ: Karnataka Lockdown | ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು ಸೇರಿ 11 ಜಿಲ್ಲೆಗಳಲ್ಲಿ ಇಂದಿನಿಂದ 1 ವಾರ ಲಾಕ್​ಡೌನ್ ವಿಸ್ತರಣೆ

ಇದಕ್ಕೆ ಸಂಬಂಧಿಸಿದ ತಹಶೀಲ್ದಾರ್ ಗಳು ಸೀಲ್ ಡೌನ್ ಆಗ ಗ್ರಾಮ ಪಂಚಾಯತ್ ಗಳ ಸಂಪೂರ್ಣ ನೇತೃತ್ವವನ್ನು ವಹಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗದ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ಇನ್ನು ಮುಂದೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಬಂದ ಸೋಂಕಿತರ ಮನೆ ಸಮೀಪದ 50 ಮನೆಗಳಲ್ಲಿ ಪರೀಕ್ಷೆ ಮಾಡಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಪಾಸಿಟಿವ್ ರೋಗಿ ಇರೋ ಮನೆ ಪಕ್ಕದ ಎಲ್ಲಾ 50 ಮನೆಗಳಲ್ಲಿ ಇನ್ಮುಂದೆ ಕೊರೋನಾ ಟೆಸ್ಟ್ ಮಾಡಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ನೀಡಿದ್ದಾರೆ. ಇದಲ್ಲದೆ, ನಗರ ಭಾಗದಲ್ಲೂ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ಜನರಲ್ಲಿ ಪಾಸಿಟಿವ್ ಪತ್ತೆಯಾದರೂ ಮೂರು ಮಹಡಿಗಳ ನಿವಾಸಿಗಳ ಕೊರೋನಾ ಟೆಸ್ಟ್ ಮಾಡಲು ಸೂಚಿಸಲಾಗಿದೆ. ಸೋಂಕಿತರು ವಾಸಿಸುವ ಮಹಡಿ, ಅದರ ಮೇಲಿನ ಮತ್ತು ಕೆಳಗಿನ ಮಹಡಿಗಳಲ್ಲಿ ವಾಸವಾಗಿರೋ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಬೇಕು, ಮನೆ ಮತ್ತು ಅಪಾರ್ಟ್‌ಮೆಂಟ್ ಗಳ ಸುತ್ತ ring surveillance ಕ್ರಮಕ್ಕೆ ಜಿಲ್ಲಾಧಿಕಾರಿ ಗಳು ಸೂಚನೆ ನೀಡಿದ್ದಾರೆ.

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆರು ಮೊಬೈಲ್ ಕೋವಿಡ್ ಟೆಸ್ಟಿಂಗ್ ಟೀಮ್ ಗಳನ್ನು ರಚಿಸಲಾಗಿದ್ದು, ಒಂದರಲ್ಲಿ ಇಬ್ಬರು ಲ್ಯಾಬ್ ಟೆಕ್ನಿಶಿಯನ್ ಗಳು ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಮನೆ ಮತ್ತು ಖಾಸಗಿ ಕ್ಲೀನಿಕ್ ಗಳಿಗೆ ತೆರಳಿ ರ್ಯಾಟ್ ಪರೀಕ್ಷೆ ಮಾಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲೂ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಗಳನ್ನು ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,500ರವರೆಗೆ ಟೆಸ್ಟಿಂಗ್ ಆಗುತ್ತಿದ್ದು, ಇನ್ಮುಂದೆ ನಿತ್ಯ 6 ಸಾವಿರ ಟೆಸ್ಟಿಂಗ್ ಗೆ ಸೂಚನೆ ನೀಡಲಾಗಿದೆ. ಅಲ್ಲದೆ ಎಲ್ಲಾ ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ಟ್ರೇಸ್ ಮಾಡಿ ಪರೀಕ್ಷೆ ಮಾಡಬೇಕೆಂಬ ಆದೇಶವನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ನೀಡಿದ್ದಾರೆ.
Published by:Sushma Chakre
First published: